ಮೈಸೂರು: ಕಳೆದ ದಿನ ಮೈಸೂರಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ನೋಟು ನಿಷೇಧವಾಗಿ 2 ವರ್ಷವಾದರೂ 500 ಕೋಟಿ ರೂ. ಅಮಾನ್ಯವಾದ ನೋಟುಗಳ ಬದಲಾವಣೆ ದಂಧೆ ಇನ್ನೂ ನಡೆಯುತ್ತಿದೆ ಅನ್ನೋದು ಸ್ಪಷ್ಟವಾಗಿದೆ.
ಎಫ್‍ಐಆರ್ ಕಾಪಿಯಲ್ಲಿ ನೋಟು ಬದಲಾವಣೆ ಹಾಗೂ ಹಣ ಡಬ್ಲಿಂಗ್ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾಗಿ ಪೊಲೀಸ್ ಇನ್ಸ್ ಪೆಕ್ಟರ್ ಮಾಹಿತಿ ನೀಡಿದ್ದಾರೆ. ಆದರೆ ಎಸ್ಕೇಪ್ ಆದ ಕಾರಿನಲ್ಲಿ ಕೋಟಿ ಕೋಟಿ ಹಣದೊಂದಿದೆ ಆರೋಪಿಗಳು ಪರಾರಿಯಾಗಿದ್ದಾರೆ. ಈ ಮೂಲಕ ಮುಂಬೈ – ಪಂಜಾಬ್‍ನಲ್ಲಿ ನಡೆಯುವ ದಂಧೆಗೆ ಮೈಸೂರೆ ಹೆಡ್ ಕ್ವಾರ್ಟರ್ಸ್? ಅನ್ನೋ ಪ್ರಶ್ನೆಗಳು ಉದ್ಭವಗೊಂಡಿದೆ. ಆದರೆ ತನಿಖೆ ಬಳಿಕವಷ್ಟೆ ಇದಕ್ಕೆ ಉತ್ತರ ಸಿಗಲಿದೆ.
Advertisement
Advertisement
ನೋಟುಗಳ ಬದಲಾವಣೆ ಹಾಗೂ ಹಣ ಡಬ್ಲಿಂಗ್ ಮಾಡಿಕೊಡುವ ದಂಧೆ ನಡೆಯುತ್ತಿದೆ ಅನ್ನೋ ಖಚಿತ ಮಾಹಿತಿ ಮೇರೆಗೆ ಗುರುವಾರ ವಿಜಯನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಬಿ.ಜಿ.ಕುಮಾರ್ ನೇತೃತ್ವದ ತಂಡ ತೆರಳಿತ್ತು. ಈ ವೇಳೆ ಆರೋಪಿಗಳು ಪೊಲೀಸರಿಗೆ ಗನ್ ತೋರಿಸಿ ಅಲ್ಲಿಂದ ಓಡಿ ಹೋಗಲು ಯತ್ನಿಸಿದ್ದಾರೆ. ತಕ್ಷಣ ತಮ್ಮಲ್ಲಿದ್ದ ಸರ್ವಿಸ್ ಗನ್‍ನಿಂದ ಪೊಲೀಸರು ಕೌಂಟರ್ ಫೈಯರ್ ಮಾಡಿದ್ದು, ಘಟನೆಯಲ್ಲಿ ಪಂಜಾಬ್ ಮೂಲದ 40 ವರ್ಷದ ಸುಕ್ವಿಂದರ್ ಮೃತಪಟ್ಟಿದ್ದನು ಎಂದು ಪೊಲೀಸ್ ಆಯುಕ್ತರು ಕೆ.ಡಿ.ಬಾಲಕೃಷ್ಣ ತಿಳಿಸಿದ್ದರು.
Advertisement
Advertisement
ನಡೆದಿದ್ದೇನು?
ಗುರುವಾರ ನಗರದ ಹೆಬ್ಬಾಳ್ ರಿಂಗ್ ರಸ್ತೆ ಬಳಿಯ ಅಪಾರ್ಟ್ ಮೆಂಟ್ ಮೇಲೆ ಮೈಸೂರಿನ ವಿಜಯನಗರ ಪೊಲೀಸರು ಶೂಟೌಟ್ ನಡೆಸಿದ್ದರು. ಬಾಂಬೆ ಮೂಲದ ವ್ಯಕ್ತಿಗಳು ಮನಿ ಡಬ್ಲಿಂಗ್ ದಂಧೆಯಲ್ಲಿ ತೊಡಗಿದ್ದಾರೆ ಎಂಬ ಖಚಿತ ಮಾಹಿತಿ ಲಭ್ಯವಾಗಿತ್ತು. ಹೀಗಾಗಿ ಆರೋಪಿಗಳನ್ನು ಸೆರೆಹಿಡಿಯಲು ಪೊಲೀಸರು ಫೈರಿಂಗ್ ಮಾಡಿದ್ದರು. ಈ ವೇಳೆ ಫೈರಿಂಗ್‍ನಲ್ಲಿ ಓರ್ವ ದಂಧೆಕೋರ ಸಾವನ್ನಪ್ಪಿದ್ದನು. ಶೂಟೌಟ್ ಬಳಿಕ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳು ಗನ್ ಸಮೇತ ನಾಪತ್ತೆಯಾಗಿದ್ದಾರೆ. ಆರೋಪಿಗಳ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ.