ನಿಶ್ಚಿತಾರ್ಥದ ಹಿಂದಿನ ದಿನವೇ ಯುವಕನ ನಿಗೂಢ ಸಾವು ಪ್ರಕರಣಕ್ಕೆ ಹೊಸ ತಿರುವು!

Public TV
1 Min Read
CAR 11

ತುಮಕೂರು: ನಿಶ್ಚಿತಾರ್ಥದ ಹಿಂದಿನ ದಿನವೇ ಯುವಕ ನಿಗೂಢ ಸಾವನಪ್ಪಿದ್ದ ಪ್ರಕರಣಕ್ಕೆ ಹೊಸ ತಿರುವು ದೊರೆತಿದೆ.

ಆರೋಪಿ ತಮ್ಮ ಬಸವೇಶ ಆಸ್ತಿ ವಿಚಾರವಾಗಿ ಸ್ವಂತ ಅಣ್ಣನನ್ನೇ ಬರ್ಬರವಾಗಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.

ಏನಿದು ಪ್ರಕರಣ?: ಸೆ.02 ರಂದು ತುರುವೇಕೆರೆಯ ಹಾಲುಗೊಂಡನಹಳ್ಳಿಯಲ್ಲಿ ಸಹೋದರ ಬಸವೇಶ, 35 ವರ್ಷದ ಹಂಸಕುಮಾರನನ್ನು ಕೊಲೆ ಮಾಡಿ ಕಾರು ಸಮೇತ ಸುಟ್ಟುಹಾಕಿದ್ದನು. ನಿಶ್ಚಿತಾರ್ಥದ ಹಿಂದಿನ ದಿನ ಕಾರು ಸಮೇತ ಸುಟ್ಟು ಕರಕಲಾಗಿ ಹಂಸಕುಮಾರ ಶವ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ದಂಡಿನ ಶಿವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ತಮ್ಮನೇ ಕೊಲೆಗೈದಿರುವ ಬಗ್ಗೆ ತಿಳಿದುಬಂದಿದೆ.

ಸೆ.5 ಕ್ಕೆ ಆಸ್ತಿ ಭಾಗವಾಗಬೇಕಿತ್ತು. ಅಣ್ಣನ ಹಂಸಕುಮಾರನ ಆಸ್ತಿ ಲಪಟಾಯಿಸಲು ತಮ್ಮ ಬಸವೇಶ ಸೆ.02 ರಂದು ಹಂಸಕುಮಾರ್ ನ ಕೊಲೆ ಮಾಡಿದ್ದಾನೆ. ಮನೆಯಲ್ಲೇ ಹಗ್ಗದಿಂದ ಕತ್ತು ಹಿಸುಕಿ ಕೊಲೆಗೈದು ಬಳಿಕ ಕಾರು ಸಮೇತ ಸುಟ್ಟುಹಾಕಿದ್ದಾನೆ.

ಸದ್ಯ ಆರೋಪಿ ಬಸವೇಶನನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ACCUSED 1

ACCUSED

CAR 10 2

CAR 9 2

CAR 7 2

CAR 6 2

CAR 5 2

CAR 4 2

CAR 3 2

CAR 2 2

CAR 1 2

Share This Article
Leave a Comment

Leave a Reply

Your email address will not be published. Required fields are marked *