ಬೆಂಗಳೂರು: ನವರಸ ನಟ ಜಗ್ಗೇಶ್ ಪುತ್ರ ಗುರುರಾಜ್‍ಗೆ ಚಾಕು ಚುಚ್ಚಿದ ಪ್ರಕರಣಕ್ಕೆ ಈಗ ಸ್ಫೋಟಕ ತಿರುವು ಸಿಕ್ಕಿದೆ. ಚಾಕು ಚುಚ್ಚೋದಕ್ಕೆ ಪ್ರಚೋದನೆ ನೀಡಿದ್ದೇ ಗುರುರಾಜ್ ಎಂದು ಆರೋಪಿ ಶಿವಕುಮಾರ್ ಹೇಳಿದ್ದಾರೆ.
ಅವತ್ತು ನಮ್ಮಿಬ್ಬರ ಕಾರುಗಳು ಪರಸ್ಪರ ಡಿಕ್ಕಿ ಹೊಡೆದವು. ಮೊದಲು ನಾನು ಅಚಾನಕ್ ಆಗಿ ಕಾರನ್ನು ಡಿಕ್ಕಿ ಹೊಡೆದೆ. ಬಳಿಕ ಅವರು ನನ್ನನ್ನ ಓವರ್‍ಟೇಕ್ ಮಾಡಿ ನನ್ನ ಕಾರನ್ನು ಅಡ್ಡ ಹಾಕಿದ್ರು. ಆ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದದ್ದು ನಿಜ. ಆ ಸಂದರ್ಭದಲ್ಲಿ ಕಾರಿನ ಒಳಗೆ ಇದ್ದ ಬೇಸ್ ಬ್ಯಾಟ್ ತೆಗೆದು ನನ್ನ ತಲೆಗೆ ಹೊಡೆದ್ರು.
ಗುರುರಾಜ್ ಇನ್ನೂ ಹೆಚ್ಚಾಗಿ ಹಲ್ಲೆ ಮಾಡೋದಕ್ಕೆ ಬಂದಿದ್ದಕ್ಕೆ ನಾನು ಅನಿವಾರ್ಯವಾಗಿ ಚಾಕುವಿನಿಂದ ಚುಚ್ಚಿದ್ದೇ ಹೊರತು ನಾನು ಉದ್ದೇಶಪೂರ್ವಕವಾಗಿ ಚುಚ್ಚಿಲ್ಲ ಅಂತಾ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಗುರು ನನ್ನ ಮೇಲೆ ಹಲ್ಲೆಯ ನಂತರ ಬೇಸ್ ಬ್ಯಾಟ್ ಬಸ್ಸಿನ ಒಳಗೆ ಎಸೆದಿದ್ದಾರೆ ಎಂದು ಆರ್.ಟಿ.ನಗರ ಪೊಲೀಸರ ಮುಂದೆ ತಿಳಿಸಿದ್ದಾರೆ. ಸದ್ಯ ಶಿವಕುಮಾರ್ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ.
https://www.youtube.com/watch?v=-OiNofzJW-o