ರಾಮನಗರ: ತಲೆಗೆ ಗುಂಡು ಹಾರಿಸಿಕೊಂಡು ಉದ್ಯಮಿ ಪ್ರದೀಪ್ (Businessman Pradeep) ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಆತ್ಮಹತ್ಯೆಗೂ ಮುನ್ನ ಪ್ರದೀಪ್ ಬರೆದಿಟ್ಟಿದ್ದ ಮೂರು ಡೆತ್‍ನೋಟ್ ಪತ್ತೆಯಾಗಿದೆ.
ನ್ಯೂ ಇಯರ್ ಸೆಲೆಬ್ರೇಷನ್ (New Year Celebration) ಗೆ ಅಂತ ಪ್ರದೀಪ್ ತನ್ನ ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ಕಗ್ಗಲೀಪರ ಸಮೀಪದ ರೆಸಾರ್ಟ್‍ಗೆ ಹೋಗಿದ್ರು. ರಾತ್ರಿ ಪಾರ್ಟಿ ಮುಗಿಸಿದ ಬಳಿಕ ಮಂಕಾಗಿದ್ದ ಪ್ರದೀಪ್, ಬೆಳಗ್ಗೆ ಯಾರಿಗೂ ಹೇಳದೆ ಬೆಳ್ಳಂದೂರಿನ ಮನೆಗೆ ಬಂದಿದ್ದರು. ಮನೆಗೆ ಬಂದವರೇ ಆತ್ಮಹತ್ಯೆಗೆ ನಿರ್ಧಾರ ಮಾಡಿ, ಮನೆಯಲ್ಲಿದ್ದ ಲೈಸೆನ್ಸ್ ಪಿಸ್ತೂಲ್ ತೆಗೆದುಕೊಂಡಿದ್ದರು. ಬಳಿಕ ಬರೆದಿದ್ದ ಮೂರು ಡೆತ್‍ನೋಟ್‍ಗಳಲ್ಲಿ ಒಂದನ್ನು ಪತ್ನಿ ನಮಿತಾ ವಾರ್ಡ್ ರೋಬ್‍ನಲ್ಲಿಟ್ಟಿದ್ದರು. ಇದನ್ನೂ ಓದಿ: ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ ಪ್ರಕರಣ – ಲಿಂಬಾವಳಿ ಸೇರಿ 6 ಜನರ ವಿರುದ್ಧ FIR
Advertisement
Advertisement
ಇದಾದ ಬಳಿಕ ರೆಸಾರ್ಟ್ (Resort) ಗೆ ತೆರಳಿ ಸಂಬಂಧಿಕರ ಕಾರಿನ ವೈಪರ್ ಬಳಿ ಒಂದನ್ನು ಇಟ್ಟಿದ್ದರು. ಮತ್ತೊಂದು ಡೆತ್ ನೋಟನ್ನ ಬ್ಯಾಂಕ್ ದಾಖಲೆಗಳನ್ನ ಅಟ್ಯಾಚ್ ಮಾಡಿ ಕಾರಿನಲ್ಲಿಟ್ಟಿದ್ದರು. ಅದನ್ನ ಗಮನಿಸದ ಸಂಬಂಧಿಕರು ರೆಸಾರ್ಟ್‍ನಿಂದ ಹೊರಟಿದ್ರು. ಪ್ರದೀಪ್ ಸಂಬಂಧಿಕರು ಹೋಗ್ತಿದ್ದ ಕಾರನ್ನ ಓವರ್ ಟೇಕ್ ಮಾಡಿ, ಒಂದು ಕಿ.ಮೀ ದೂರದಲ್ಲಿ ನಿಟ್ಟಿಗೆರೆ ಎಂಬಲ್ಲಿ ಪಿಸ್ತೂಲ್‍ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರದೀಪ್ ಕಾರು ಹತ್ತಿರ ಬಂದು ಸಂಬಂಧಿಕರು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರೋದು ಬೆಳಕಿಗೆ ಬಂದಿದೆ. ತಾನು ಆತ್ಮಹತ್ಯೆ ಮಾಡಿಕೊಂಡ್ರೆ ಅನಾಥ ಶವವಾಗಬಾರದು ಅನ್ನೋ ಕಾರಣಕ್ಕೆ ಇಷ್ಟೆಲ್ಲಾ ಸರ್ಕಸ್ ಮಾಡಿದ್ದರು ಎನ್ನಲಾಗ್ತಿದೆ.
Advertisement
Advertisement
ಸದ್ಯ ಡೆತ್‍ನೋಟ್‍ನಲ್ಲಿದ್ದ ಶಾಸಕ ಅರವಿಂದ ಲಿಂಬಾವಳಿ (Aravind Limbavali) ಸೇರಿದಂತೆ ಐವರು ಆರೋಪಿಗಳಿಗೆ ಕಗ್ಗಲೀಪುರ ಪೊಲೀಸ (Kaggalipura Police) ರಿಂದ ನೊಟೀಸ್ ನೀಡಲಾಗಿದೆ. ಪ್ರದೀಪ್ ಪತ್ನಿಯ ಮೇಲೂ ಕೆಲವು ಅನುಮಾನಗಳು ಇರುವುದರಿಂದ ನಮಿತಾಳ ಫೋನ್‍ನ ಸಿಡಿಆರ್ ಅನ್ನು ಪೊಲೀಸರು ಕಲೆಕ್ಟ್ ಮಾಡಿದ್ದಾರೆ.