-ಒಂದೇ ದಿನ, ಒಂದೇ ಹೆಸರಿನ ಇಬ್ಬರಿಗೆ ಪರೀಕ್ಷೆ?
-ಪೇದೆಗೆ ಕೊರೊನಾ ಸೋಂಕಿಲ್ವಾ?
ಬೆಂಗಳೂರು/ಚಾಮರಾಜನಗರ: ಬೇಗೂರು ಠಾಣೆಯ ಪೇದೆಗೆ ಕೊರೊನಾ ಸೋಂಕಿಲ್ವಾ ಅನ್ನೋ ಅನುಮಾನ ಮೂಡಿದೆ. ಪೊಲೀಸ್ ಪೇದೆಯ ಪ್ರಕರಣದಲ್ಲಿ ಆರೋಗ್ಯ ಇಲಾಖೆ ಎಡವಿತಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಚಾಮರಾಜನಗರದ ಎಸ್.ಪಿ. ಆನಂದ್ ಕುಮಾರ್ ಹೇಳಿಕೆ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಪೇದೆಗೆ ಮತ್ತೊಮ್ಮೆ ಕೊರೊನಾ ಪರೀಕ್ಷೆ ನಡೆಸುವ ಸಾಧ್ಯತೆಗಳಿವೆ.
Advertisement
ಒಂದೇ ದಿನ ಒಂದೇ ಹೆಸರಿನ ಇಬ್ಬರಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, ಇಬ್ಬರಲ್ಲಿ ಒಬ್ಬರಿಗೆ ಸೋಂಕು ದೃಢವಾಗಿತ್ತು. ಸೋಂಕು ತಗುಲಿದ ವ್ಯಕ್ತಿ ಫೋನ್ ಸ್ವಿಚ್ಛ್ ಆಫ್ ಆಗಿದೆ. ಈ ವೇಳೆ ಸಿಬ್ಬಂದಿಗೆ ನಿರ್ಲಕ್ಷ್ಯದಿಂದ ರಿಪೋರ್ಟ್ ಬದಲಾಗಿರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಬೇಗೂರು ಠಾಣೆಯ ಒಟ್ಟು 18 ಸಿಬ್ಬಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಆದ್ರೆ ಈ ಪಟ್ಟಿಯಲ್ಲಿ ಪೇದೆಯ ಹೆಸರಿಲ್ಲ.
Advertisement
Advertisement
ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಎಸ್.ಪಿ. ಅನಂದ್ ಕುಮಾರ್, ಪೇದೆಗೆ ಸೋಂಕು ಇಲ್ಲ ಅನ್ನೋ ಮಾತುಗಳು ಸಹ ನನ್ನ ಗಮನಕ್ಕೂ ಬಂದಿದೆ. ಆದ್ರೆ ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಇಲ್ಲ. ಒಂದು ವೇಳೆ ಪೇದೆಗೆ ಯಾವುದೇ ಸೋಂಕು ಇರದಿದ್ರೆ ನಮ್ಮ ಜಿಲ್ಲೆ ಹಸಿರು ವಲಯದಲ್ಲಿಯೇ ಇರಲಿದೆ ಎಂದಿದ್ದಾರೆ.
Advertisement
ಪೇದೆಗೆ ಕೊರೊನಾ ನೆಗೆಟಿವ್ ಬಂದಿರೋ ಬಗ್ಗೆ ನಮಗೆ ಮಾಹಿತಿ ಇಲ್ಲ. ಆರೋಗ್ಯ ಇಲಾಖೆ 5 ದಿನಕ್ಕೆ ಒಮ್ಮೆ ಕೊರೊನಾ ಟೆಸ್ಟ್ ಮಾಡುತ್ತಾರೆ. ಕೊರೊನಾ ಪಾಸಿಟಿವ್ ಬಂದಿರುವ ರೋಗಿಗಳ ಹೆಸರನ್ನು ಆರೋಗ್ಯ ಇಲಾಖೆ ಬಹಿರಂಗಗೊಳಿಸಲ್ಲ. ಇನ್ನು ಬೇಗೂರು ಠಾಣೆಯ ಪೇದೆಗೆ ನೆಗೆಟಿವ್ ಬಂದಿದೆ ಎಂಬುದರ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ನಮಗೆ ಮಾಹಿತಿ ಇಲ್ಲ ಎಂದು ಬೆಂಗಳೂರು ಆಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್ ಜೋಶಿ ಹೇಳಿದ್ದಾರೆ.