ಮುಂಬೈ: ಬಾಲಿವುಡ್ ನಟ ಶಾರೂಕ್ ಖಾನ್ ಮಗ ಶಾರೂಖ್ ಖಾನ್ ಡ್ರಗ್ಸ್ ಕೇಸ್‍ಗೆ ಟ್ವಿಸ್ಟ್ ಸಿಕ್ಕಿದೆ. ಎನ್‍ಸಿಬಿ ಮುಖ್ಯಸ್ಥ ಸಮೀರ್ ವಾಂಖೆಡೆ ವಿರುದ್ಧ ಬಿಜೆಪಿಯ ಕೆಪಿ ಗೋಸಾವಿ ಆಪ್ತ ಪ್ರಭಾಕರ್ ಸೈಲ್ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.
Advertisement
ಆರ್ಯನ್ ಬಿಡುಗಡೆ ಮಾಡೋಕೆ 25 ಕೋಟಿಗೆ ಬೇಡಿಕೆ ಇಟ್ಟಿದ್ದಾರೆ. 18 ಕೋಟಿಗೆ ಡೀಲ್ ಆಗುವಂತೆ ಕಾಣುತ್ತಿದೆ. ಇದರಲ್ಲಿ ಸಮೀರ್ ವಾಂಖೆಡೆಗೆ 8 ಕೋಟಿ ಹೋಗ್ಬೇಕು ಅಂತಾ ಎನ್‍ಸಿಬಿ ಕಚೇರಿಯಲ್ಲಿಯೇ ಕೆಪಿ ಗೋಸಾವಿ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಕ್ರೂಸ್ ರೇಡ್‍ಗೆ ಸಂಬಂಧಿಸಿದಂತೆ ಖಾಲಿ ಪುಟುಗಳ ಪಂಚನಾಮೆ ಪತ್ರಕ್ಕೆ ಸಮೀರ್ ವಾಂಖೆಡೆ ತಮ್ಮಿಂದ ಸಹಿ ಹಾಕಿಸಿಕೊಂಡಿದ್ದಾರೆ ಎಂದು ಪ್ರಭಾಕರ್ ಸೈಲ್ ಕೂಡ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಶಾರೂಖ್ ಖಾನ್ ಬಿಜೆಪಿ ಸೇರಿದ್ರೆ ಡ್ರಗ್ಸ್ ಸಕ್ಕರೆ ಪುಡಿಯಾಗುತ್ತೆ: ಛಗನ್ ಭುಜ್‍ಬಲ್
Advertisement
Advertisement
ಇದಕ್ಕೆ ಸಂಬಂಧಿಸಿ ವೀಡಿಯೋ ರಿಲೀಸ್ ಮಾಡಿರುವ ಸಂಜಯ್ ರೌತ್, ಇದೆಲ್ಲ ಸುಳ್ಳು ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡು ಸೈಲ್‍ನ್ನು ಬಂಧಿಸಬೇಕು ಎಂದು ಸಮೀರ್ ಒತ್ತಾಯಿಸಿದ್ದಾರೆ. ಜೊತೆಗೆ ಈ ಆರೋಪಗಳೆಲ್ಲ ಸುಳ್ಳು. ಶೀಘ್ರ ಸ್ಪಷ್ಟನೆ ಕೊಡುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ಎನ್‍ಸಿಬಿ ಕೂಡ ಸಮೀರ್ ಬೆಂಬಲಕ್ಕೆ ಧಾವಿಸಿದೆ. ಸದ್ಯ ಕೆಪಿ ಗೋಸಾವಿ ನಾಪತ್ತೆಯಾಗಿದ್ದಾರೆ. ತಮ್ಮ ಜೀವಕ್ಕೆ ಸಮೀರ್‍ರಿಂದ ಅಪಾಯವಿದೆ ಎಂಬ ಆತಂಕವನ್ನು ಸೈಲ್ ಹೊರಹಾಕಿದ್ದಾರೆ. ಇದನ್ನೂ ಓದಿ: ಶಾರೂಖ್ ಖಾನ್ ಪುತ್ರನಾಗಿದ್ದರಿಂದ ಆರ್ಯನ್ ಖಾನ್ ಬಲಿಪಶು: ದಿಗ್ವಿಜಯ್ ಸಿಂಗ್
Advertisement