ಹುಬ್ಬಳ್ಳಿ: ಲವ್ ಜಿಹಾದ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ನನ್ನನ್ನು ಯಾರು ಒತ್ತಾಯ ಪೂರ್ವಕವಾಗಿ ಕರೆದುಕೊಂಡು ಬಂದಿಲ್ಲ ಎಂದು ಯುವತಿ ಹೇಳಿಕೆ ನೀಡಿದ್ದಾರೆ.
Advertisement
ಹಿಂದೂ ಯುವತಿಯನ್ನು ಮುಸ್ಲಿಂ ಯುವಕ ಪ್ರೀತಿಸಿ ಮದುವೆಯಾಗಿದ್ದು, ಆರೋಪಿಯನ್ನು ಬಂಧಿಸಿ ನಮ್ಮ ಮಗಳನ್ನು ಲವ್ ಜಿಹಾದ್ ನಿಂದ ಕಾಪಾಡಿ ಎಂದು ಯುವತಿ ಪೋಷಕರು ಮತ್ತು ಹಿಂದೂಪರ ಸಂಘಟನೆಗಳು ಇಂದು ಬೆಳಗ್ಗೆ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆ ಪ್ರತಿಭಟನೆ ನಡೆಸಿದ್ದರು. ಇದನ್ನೂ ಓದಿ: ಹಿಂದೂ ಯುವಕನಂತೆ ಸೋಗು – ಮಗಳನ್ನು ಕರೆ ತರುವಂತೆ ಪೋಷಕರಿಂದ ಪ್ರತಿಭಟನೆ
Advertisement
Advertisement
ಇಂದು ಅಜ್ಞಾತ ಸ್ಥಳದಿಂದ ಯುವತಿ ಸ್ನೇಹ ವೀಡಿಯೋ ಬಿಡುಗಡೆ ಮಾಡಿದ್ದಾಳೆ. ನಾನು ಇಬ್ರಾಹಿಂ ಜೊತೆಯಲ್ಲಿಯೇ ಇದ್ದೇನೆ. ನಾನು ಇಬ್ರಾಹಿಂ ಜೊತೆಯಲ್ಲಿರುವುದು ಅವರ ಮನೆಯವರಿಗೂ ತಿಳಿದಿಲ್ಲ. ನನ್ನನ್ನು ಯಾರು ಒತ್ತಾಯ ಪೂರ್ವಕವಾಗಿ ಕರೆದುಕೊಂಡು ಬಂದಿಲ್ಲ. ನಾನೇ ಪ್ರೀತಿಯಿಂದ ಬಂದಿದ್ದೇನೆ ಎಂದು ಹೇಳಿಕೆ ನೀಡಿದ್ದಾಳೆ. ಆದರೆ ಈ ವೀಡಿಯೋವನ್ನು ಆಕೆಯ ಕೈಯಲ್ಲಿ ಬಲವಂತವಾಗಿ ಮಾಡಿಸಿದ್ದಾರೆ ಎಂದು ಯುವತಿಯ ಪೋಷಕರು ಆರೋಪಿಸಿದ್ದಾರೆ.
Advertisement
ಕಳೆದ ಆರು ತಿಂಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ ಈ ವರ್ಷ ಫೆಬ್ರವರಿ 11 ರಂದು ಗದಗ ಉಪ ನೋಂದಣಿ ಕಚೇರಿಯಲ್ಲಿ ಮದುವೆಯಾಗಿದ್ದಾರೆ. ಹುಬ್ಬಳ್ಳಿಯ ಕೇಶ್ವಾಪುರದ ನಿವಾಸಿ ಇಬ್ರಾಹಿಂ ಮತ್ತು ಕಮರಿಪೇಟೆ ಸ್ನೇಹ ಅವರ ಪ್ರೀತಿಗೆ ಯುವತಿಯ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 9 ಮಂದಿ ಮದುವೆಯಾದ ಮಾಡೆಲ್, ಒಬ್ಬಳಿಗೆ ಡಿವೋರ್ಸ್, ಮತ್ತಿಬ್ಬರನ್ನು ಮದುವೆಯಾಗುವ ಬಯಕೆ
ಪ್ರೀತಿ ಹೆಸರಲ್ಲಿ ಲವ್ ಜಿಹಾದ್ ಮಾಡಿ ತಮ್ಮ ಮಗಳನ್ನು ಇಬ್ರಾಹಿಂ ಮೋಸದಿಂದ ಮದುವೆಯಾಗಿದ್ದಾನೆ. ಅಲ್ಲದೆ ಮದುವೆಯಾದಾಗ ಅವಳು ಅಪ್ರಾಪ್ತೆಯಾಗಿದ್ದಳು. ದಾಖಲೆಗಳಲ್ಲಿ ಇರುವ ಮದುವೆಯ ದಿನ ಅಂದರೆ ಫೆ.11 ರಂದು ಸ್ನೇಹ ಮನೆಯಲ್ಲೇ ಇದ್ದಳು. ಮದುವೆ ಪತ್ರದಲ್ಲಿ ಸಹಿ ಸ್ನೇಹಳದ್ದಲ್ಲ. ಸುಳ್ಳು ದಾಖಲೆ ಸೃಷ್ಟಿ ಮಾಡಿ ಇಬ್ರಾಹಿಂ ಸ್ನೇಹಳನ್ನು ಮದುವೆಯಾಗಿದ್ದಾನೆ. ಈ ಮದುವೆಗೆ ಗದಗ್ ಸಬ್ ರಿಜಿಸ್ಟರ್ ಕುಮ್ಮಕ್ಕಿದೆ ಎಂದು ಸ್ನೇಹ ತಾಯಿ ಯಲ್ಲಮ್ಮ ಆರೋಪಿಸಿದ್ದಾರೆ.
ಈ ವಿಚಾರವಾಗಿ ಪೊಲೀಸರು ತನಿಖೆ ನಡೆಸದೇ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಇಂದು ಬೆಳಗ್ಗೆಯಿಂದ ಸ್ನೇಹ ಕುಟುಂಬಸ್ಥರು ಹಿಂದೂ ಪರ ಸಂಘಟನೆಗಳೊಂದಿಗೆ ಪ್ರತಿಭಟನೆ ನಡೆಸಲು ಆರಂಭಿಸಿದ್ದಾರೆ. ಇದನ್ನೂ ಓದಿ: ಕೊಚ್ಚಿ ಕೊಲೆ ಮಾಡಲು ಯತ್ನಿಸಿದ ಪತಿ- ಪತ್ನಿಯಿಂದ ಲವ್ ಜಿಹಾದ್ ಆರೋಪ
ರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು, ಇಂದು ಮಧ್ಯಾಹ್ನ 12 ಗಂಟೆಯ ತನಕ ಸಮಯ ನೀಡುತ್ತವೆ. ಒಂದು ವೇಳೆ ಯುವಕನನ್ನು ಬಂಧಿಸಿ ಯುವತಿಯನ್ನು ಕರೆತರದಿದ್ದರೆ, ಹೋರಾಟ ಹಾದಿ ಬೇರೆ ರೂಪ ಪಡೆದುಕೊಳ್ಳುತ್ತದೆ. ಮುಂದಾಗುವ ಅನಾಹುತಕ್ಕೆ ಬಿಜೆಪಿ ನಾಯಕರೇ ಕಾರಣವಾಗಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದರು.