ಲಕ್ನೋ: ದೇಶದಲ್ಲೇ ಅತಿ ಎತ್ತರದ ದೈತ್ಯ ಅವಳಿ ಕಟ್ಟಡ ಕೊನೆಗೂ ನೆಲಸಮಗೊಂಡಿದ್ದು, ಇದೇ ವೇಳೆ ಅಕ್ಕಪಕ್ಕದ ಕಾಂಪ್ಲೆಕ್ಸ್‌ಗಳ ಗೋಡೆ ಹಾಗೂ ಗಾಜಿನ ಕಿಟಕಿಗಳು ಹಾನಿಯಾಗಿದೆ.
Twin Tower Demolition in Noida #TwinTowers pic.twitter.com/FlRiOiP3MP
— ShubhamTotu.eth | CM (@ShubhamTotu) August 28, 2022
Advertisement
ನೆರೆಯ ಎಟಿಸ್ ಗ್ರಾಮದಲ್ಲಿ ಗೋಡೆಯೊಂದು ಕುಸಿದಿದೆ. ಕೆಲವು ಗಾಜಿನ ಕಿಟಕಿಗಳು ಒಡೆದಿವೆ. ಆದರೆ 100 ಕೋಟಿ ವಿಮಾ ಯೋಜನೆ ಅಡಿಯಲ್ಲಿ ಕಟ್ಟಡ ನೆಲಸಮ ಕಾರ್ಯ ನಡೆದಿದ್ದು, ಅಕ್ಕಪಕ್ಕದ ಯಾವುದೇ ಕಟ್ಟಡಗಳು ಹಾನಿಗೆ ಒಳಗಾಗಿದ್ದರೆ ಇದೇ ವಿಮೆ ಪಾಲಿಸಿ ಅಡಿಯಲ್ಲಿ ಬರುತ್ತದೆ. ಅದರ ವೆಚ್ಚವನ್ನು ಸೂಪರ್‌ಟೆಕ್ ಗ್ರೂಪ್ ಭರಿಸಬೇಕಾಗುತ್ತದೆ ಎಂದು ಪೊಲೀಸ್ ಅಧಿಕಾರಿ ಎಸ್.ರಾಜೇಶ್ ತಿಳಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರಕ್ಕಾಗಿ ಖಾದಿ, ಆದ್ರೆ ರಾಷ್ಟ್ರಧ್ವಜಕ್ಕೆ ಚೈನೀಸ್ ಪಾಲಿಸ್ಟರ್ : ಮೋದಿ ವಿರುದ್ಧ ರಾಹುಲ್ ಟೀಕೆ
Advertisement
Advertisement
ಇಂದು ಮಧ್ಯಾಹ್ನ 2:30 ಸುಮಾರಿಗೆ 3,700 ಕೆಜಿ ಸ್ಫೋಟಕಗಳನ್ನು ಬಳಸಿ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ. ಕಟ್ಟಡ ನೆಲಸಮಗೊಂಡ ಅರ್ಧಗಂಟೆಯ ಬಳಿಕ ಇಲ್ಲಿನ ಎಕ್ಸ್ಪ್ರೆಸ್‌ವೇ ಅನ್ನು ಸಂಸಾರಕ್ಕೆ ಮುಕ್ತಗೊಳಿಸಲಾಗಿದೆ.
Advertisement
ದೈತ್ಯ ಅವಳಿ ಕಟ್ಟಡ ನೆಲಸಮಗೊಳಿಸಿದ ಬಳಿಕ ಧೂಳು ನೆಲೆಸಿದ್ದರಿಂದ ಸುಮಾರು ಅರ್ಧಗಂಟೆಗಳ ಕಾಲ ಎಕ್ಸ್‌ಪ್ರೆಸ್ ವೇ ಅನ್ನು ಮುಚ್ಚಲಾಗಿತ್ತು ಎಂದು ನೋಯ್ಡಾದ ಸಹಾಯಕ ಪೊಲೀಸ್ ಆಯುಕ್ತ ಎಸ್.ರಾಜೇಶ್ ಹೇಳಿದ್ದಾರೆ. ಇದನ್ನೂ ಓದಿ: 3,700 ಕೆ.ಜಿ ಸ್ಫೋಟಕ, 10 ಸೆಕೆಂಡ್- 1,200 ಕೋಟಿಯ ದೈತ್ಯ ಅವಳಿ ಕಟ್ಟಡ ಉಡೀಸ್
ಸೂಪರ್‌ಟೆಕ್ ಕಂಪನಿ ನಿರ್ಮಿಸಿದ್ದ ಅವಳಿ ಕಟ್ಟಡ ನೆಲಸಮದಿಂದಾಗಿ ಸರಿಸುಮಾರು 55 ಸಾವಿರ ಟನ್ ಕಟ್ಟಡ ತ್ಯಾಜ್ಯ ಸೃಷ್ಟಿಯಾಗಿದೆ. ಈ ತ್ಯಾಜ್ಯವನ್ನು ತೆರವುಗೊಳಿಸಲು ಸುಮಾರು 3 ತಿಂಗಳು ಕಾಲಾವಕಾಶ ಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ. ಕಟ್ಟಡ ನೆಲಸಮಗೊಳಿಸಲು 3,700 ಕೆಜಿ ಸ್ಫೋಟಕಗಳನ್ನು ಬಳಸಲಾಗಿತ್ತು. ಇದರಿಂದ ಮುಗಿಲು ಮುಟ್ಟುವಂತೆ ಧೂಳು ಎದ್ದಿದ್ದು, ಸ್ಥಳದಲ್ಲೇ ಸನ್ನದ್ಧವಾಗಿದ್ದ ಅಗ್ನಿಶಾಮಕ ವಾಹನಗಳು ನೀರು ಹಾಕಿ ಧೂಳನ್ನು ಶಮನಗೊಳಿಸಿವೆ.
यातायात अपडेट
दिनांक 28.08.2022 को टी-16 व टी-17 टावर सेक्टर-93 के सुरक्षित ध्वस्तीकरण के दौरान प्रतिबंधित नॉएडा-ग्रेटर नॉएडा एक्सप्रेस-वे को जनसामान्य के प्रयोग हेतु खोल दिया गया है।
आमजन उक्त एक्सप्रेस-वे का प्रयोग कर अपने गंतव्य को जा सकते हैं।
यातायात ☎️ नं0- 9971009001
— Noida Traffic Police (@noidatraffic) August 28, 2022
ಈ ಕಟ್ಟಡ ಬೀಳಿಸುವ ಮೊದಲು ಮುನ್ನೆಚ್ಚರಿಕಾ ಕ್ರಮವಾಗಿ ಸಮೀಪದ ಕಟ್ಟಡಗಳಿಂದ 5,000 ನಾಗರಿಕರು, 2,700 ವಾಹನ, 200 ಸಾಕು ಪ್ರಾಣಿಗಳನ್ನು ಸ್ಥಳಾಂತರಗೊಳಿಸಲಾಗಿತ್ತು. ಅವಳಿ ಕಟ್ಟಡಗಳ ಸುತ್ತ 500 ಮೀಟರ್ ಪ್ರದೇಶವನ್ನು ನಿರ್ಬಂಧಿತ ವಲಯ ಎಂದು ಘೋಷಿಸಲಾಗಿತ್ತು. ಅಲ್ಲಿ ಕಟ್ಟಡ ನೆಲಸಮಗೊಳಿಸುವ ಕಾರ್ಯಾಚರಣೆ ಸಿಬ್ಬಂದಿ ಹೊರತುಪಡಿಸಿ ಉಳಿದವರಿಗೆ ಪ್ರವೇಶ ನಿಷೇಧಿಸಲಾಗಿತ್ತು.