Latest
ಒಂದೇ ದಿನ ಹುಟ್ಟಿ, ಒಂದೇ ದಿನ ಕಾರಿನಲ್ಲಿ ಪ್ರಾಣಬಿಟ್ಟ ಅವಳಿ ಸಹೋದರಿಯರು

ಗುರ್ಗಾಂವ್: ಅವಳಿ ಸಹೋದರಿಯರು ಒಂದೇ ದಿನ ಸಾವನ್ನಪ್ಪಿರುವ ಘಟನೆ ದೆಹಲಿ ಬಳಿಯ ಗುರ್ಗಾಂವ್ನಲ್ಲಿ ಬುಧವಾರ ನಡೆದಿದೆ.
ಐದು ವರ್ಷದ ಹರ್ಷ ಮತ್ತು ಹರ್ಷಿತ ಸಾವನ್ನಪ್ಪಿದ ಕಂದಮ್ಮಗಳು. ಬೇಸಿಗೆ ರಜೆಗೆಂದು ಅಜ್ಜಿಯ ಊರಾದ ಪಟೋಡಿ ವಿಭಾಗದ ಜಮಲ್ಪುರ್ಗೆ ತೆರಳಿದ್ದರು. ಬುಧವಾರ ಮಧ್ಯಾಹ್ನ ಹರ್ಷ ಮತ್ತು ಹರ್ಷಿತಾ ಆಟ ಆಡುತ್ತಾ ಮನೆಯ ಹಿಂದುಗಡೆಯ ಹುಂಡೈ ಕಾರಿನ ಒಳಗಡೆ ಹೋಗಿದ್ದಾರೆ.
ಕಾರಿನ ಒಳಗಡೆ ಆಡುವಾಗ ಕಾರ್ ಆಟೋಮೆಟಿಕ್ ಲಾಕ್ ಅಗಿದೆ. ಮಕ್ಕಳು ಕಾರಿನ ಲಾಕ್ ತೆಗೆಯಲು ಪ್ರಯತ್ನಿಸಿದ್ರೂ ಅದು ಓಪನ್ ಆಗಿಲ್ಲ. ಸಂಜೆ 4 ಗಂಟೆಗೆ ಮನೆಯ ಸದಸ್ಯರಿಗೆ ಹರ್ಷ ಮತ್ತು ಹರ್ಷಿತಾ ನಾಪತ್ತೆಯಾಗಿದ್ದು ತಿಳಿದಿದೆ. ಮಕ್ಕಳನ್ನು ಹುಡುಕಲು ಆರಂಭಿಸಿದಾಗ ಕಾರಿನಲ್ಲಿ ಹರ್ಷ ಮತ್ತು ಹರ್ಷಿತಾಳ ದೇಹಗಳು ಪತ್ತೆಯಾಗಿವೆ. ಕೂಡಲೇ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ರೂ ಅವಳಿ ಸಹೋದರಿಯರು ಸಾವನ್ನಪ್ಪಿದ್ದಾರೆ.
ನನ್ನ ಮಕ್ಕಳಿಬ್ರೂ ಹುಟ್ಟಿದಾಗ ನಮ್ಮ ಕುಟುಂಬದಲ್ಲಿ ಸಂತೋಷ ಮನೆ ಮಾಡಿತ್ತು. ಇಬ್ಬರನ್ನು ಮೀರತ್ನ ಸೆಂಟ್ರಲ್ ಸ್ಕೂಲ್ ದಾಖಲು ಮಾಡಲಾಗಿತ್ತು. ಮಕ್ಕಳಿಬ್ಬರೂ ತುಂಬಾ ಚೂಟಿಯಾಗಿದ್ದರು ಎಂದು ಮಕ್ಕಳ ತಂದೆ ಗೋವಿಂದ್ ಕಣ್ಣೀರು ಹಾಕುತ್ತಾ ಹೇಳಿದರು.
ಹರ್ಷ ಮತ್ತು ಹರ್ಷಿತಾ ಒಂದೇ ದಿನ ಹುಟ್ಟಿ ನಮಗೆಲ್ಲ ಖುಷಿ ನೀಡಿದ್ದರು. ಇಬ್ಬರು ಒಂದೇ ದಿನ ಸಾವನ್ನಪ್ತಾರೆ ಎಂದು ಗೊತ್ತಿರಲಿಲ್ಲ ಎಂದು ಮಕ್ಕಳ ಚಿಕ್ಕಪ್ಪ ಕನ್ವಾಲ್ ಸಿಂಗ್ ತಿಳಿಸಿದರು.
