ಬೀದರ್: 75 ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಬೀದರ್‌ನಿಂದ ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದವರೆಗೆ ಅವಳಿ ಸಹೋದರರು ಸೈಕಲ್ ಸವಾರಿ ಮಾಡಲಿದ್ದಾರೆ.
ಬೀದರ್‌ನ 16 ವರ್ಷದ ಅವಳಿ ಸಹೋದರರು ಔರಾದ್‍ನಿಂದ ಚಾಮರಾಜನಗರದವರೆಗೆ ಸೈಕಲ್ ಯಾತ್ರೆ ಪ್ರಾರಂಭ ಮಾಡಿದ್ದು, 25 ದಿನಗಳ ಕಾಲ 1,250 ಕಿಮೀವರೆಗೆ ಪುಟಾಣಿಗಳು ಸೈಕಲ್ ತುಳಿಯಲಿದ್ದಾರೆ.
Advertisement
Advertisement
ಔರಾದ್ ತಾಲೂಕಿನ ಕೊಳ್ಳೂರು ಗ್ರಾಮದ ಅರುಣ್ ಹಾಗೂ ಕರಣ್ ರ್ಯಾಕಲೆ ಎಂಬ ಅವಳಿ ಸಹೋದರರಿಂದ ಸೈಕಲ್ ಯಾತ್ರೆ ಪ್ರಾರಂಭವಾಗಿದೆ. 75 ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ಸ್ವಾತಂತ್ರ್ಯ ಹೋರಾಟಗಾರರನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡಿ ನಮನ ಸಲ್ಲಿಸುವ ಸದುದ್ದೇಶದಿಂದ ಈ ಸೈಕಲ್ ಯಾತ್ರೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಹೀಗೆ ಮಾತನಾಡಿದ್ರೆ ಹಿಟ್ ವಿಕೆಟ್ ಆಗ್ತೀರಾ: ಆರ್.ಅಶೋಕ್ ತಿರುಗೇಟು
Advertisement
Advertisement
ಬೀದರ್‌ನಿಂದ ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ತುಮಕೂರು, ಬೆಂಗಳೂರು, ಮಂಡ್ಯ ಮೂಲಕ ಚಾಮರಾಜನಗರ ಮಲೆ ಮಹದೇಶ್ವರನ ಬೆಟ್ಟ ತಲುಪಲಿದ್ದು, ಬಳಿಕ ಮಹದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ಈ ಪುಟಾಣಿಗಳು ತಮ್ಮ ಸೈಕಲ್ ಯಾತ್ರೆಯನ್ನು ಮುಕ್ತಾಯಗೊಳಿಸಲಿದ್ದಾರೆ. ಇದನ್ನೂ ಓದಿ: ಇತಿಹಾಸ ಪ್ರಸಿದ್ಧ ಬನವಾಸಿ ಮಧುಕೇಶ್ವರ ರಥೋತ್ಸವಕ್ಕೆ ಹಿಂದೂಯೇತರ ವ್ಯಾಪಾರಿಗಳಿಗೆ ನಿರ್ಬಂಧ