ಬೆಂಗಳೂರು: ಕಾಂಗ್ರೆಸ್‍ನ್ನು ಟೀಕಿಸುವ ಭರದಲ್ಲಿ ತಮ್ಮ ಪಕ್ಷದ ಮುಖಂಡನ ಹೆಸರನ್ನೇ ಹಾಕುವ ಮೂಲಕ ಕರ್ನಾಟಕದ ಬಿಜೆಪಿ ಖಾತೆ ಟ್ವಿಟ್ಟರ್ ನಲ್ಲಿ ಎಡವಟ್ಟು ಮಾಡಿದೆ.
ಕುಟುಂಬ ರಾಜಕಾರಣದ ವಿಚಾರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಜಿದ್ದಿಗೆ ಬಿದ್ದಂತಿವೆ. ಜೆಡಿಎಸ್ ಕುಟುಂಬದ ಅಧಿಕಾರ ಶಾಖೆ ನೋಡಾಗಿದೆ. ಈಗ ಕಾಂಗ್ರೆಸ್ ಪಕ್ಷದ ರೆಂಬೆಕೊಂಬೆಗಳ ಸರದಿ ಎಂದು ಟ್ವಿಟ್ಟರ್ ನಲ್ಲಿ ಬಿಜೆಪಿ ಕಾಂಗ್ರಸ್‍ನ್ನು ಟೀಕಿಸುವ ಕುರಿತು ಪೋಸ್ಟ್‍ವೊಂದನ್ನು ಹಾಕಿತ್ತು.
Advertisement
Advertisement
ಅದರಲ್ಲಿ ಕಾಂಗ್ರೆಸ್ ಮತ್ತು ಕುಟುಂಬ ಎಂದು ಬರೆದು ಕಾಂಗ್ರಸ್‍ನ ಮುಖಂಡರ ಹಾಗೂ ಅವರ ಸಂಬಂಧಿಗಳು ಯಾರಾರೂ ರಾಜಕೀಯಕ್ಕೆ ಪ್ರವೇಶಿಸಿದ್ದಾರೆ ಎನ್ನುವುದರ ಬಗ್ಗೆ ಮಾಹಿತಿ ಇತ್ತು.
Advertisement
ಈ ಪಟ್ಟಿಯಲ್ಲಿ ಹಾಸನ ಬಿಜೆಪಿ ನಾಯಕ ವಾಲೆ ಮಂಜು ಪುತ್ರ ಮಂಥರ್ ಗೌಡ ಹೆಸರೂ ಸೇರ್ಪಡೆಯಾಗಿದೆ. ಸದ್ಯ ಬಿಜೆಪಿಯಲ್ಲಿರುವ ಎ ಮಂಜು ಅವರನ್ನು ಕಾಂಗ್ರೆಸ್ ನಾಯಕ ಎಂದು ಭಾವಿಸಿ ಬಿಜೆಪಿ ತನ್ನ ಖಾತೆಯಲ್ಲಿ ಟ್ವೀಟ್ ಮಾಡಿಕೊಂಡಿತ್ತು. ಇದನ್ನೂ ಓದಿ: ಪ್ರಾಣವನ್ನೇ ಪಣಕ್ಕಿಟ್ಟು ಅರ್ಚಕನನ್ನು ರಕ್ಷಿಸಿದ ಟ್ರಾಫಿಕ್ ಪೊಲೀಸ್ – ವೀಡಿಯೋ ವೈರಲ್
Advertisement
ಕಾಂಗ್ರೆಸ್ ವಿರುದ್ಧ ಬಿಜೆಪಿ ಕುಟುಂಬ ರಾಜಕಾರಣ ಅಸ್ತ್ರವಾಗಿಸಲು ಹೋಗಿ ತನ್ನ ಪಕ್ಷದ ನಾಯನ ಹೆಸರನ್ನೇ ಹಾಕಿದ್ದರು. ಈ ಪೋಸ್ಟ್‍ನ್ನು ಹಾಕಿದ ಕೆಲವೇ ಕ್ಷಣದಲ್ಲಿ ಬಿಜೆಪಿ ಡಿಲೀಟ್ ಮಾಡಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಟ್ರೋಲ್ ಮಾಡಲಾಗುತ್ತಿದೆ
ಟ್ವಿಟ್ಟರ್ ನಲ್ಲಿ ಏನಿತ್ತು?
ಕುಟುಂಬ ರಾಜಕಾರಣದ ವಿಚಾರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಜಿದ್ದಿಗೆ ಬಿದ್ದಂತಿವೆ.
ಜೆಡಿಎಸ್ ಕುಟುಂಬದ ಅಧಿಕಾರ ಶಾಖೆ ನೋಡಿಯಾಯ್ತು. ಈಗ ಕಾಂಗ್ರೆಸ್ ಪಕ್ಷದ ರೆಂಬೆಕೊಂಬೆಗಳ ಸರದಿ.
ಕಾಂಗ್ರೆಸ್ ಮತ್ತು ಕುಟುಂಬ
ಎಸ್. ರವಿ – ಡಿಕೆಶಿ ಸೋದರ ಸಂಬಂಧಿ
ಚನ್ನರಾಜ್ ಹಟ್ಟಿಹೊಳಿ – ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ
ಭೀಮರಾವ್ ಪಾಟೀಲ್ – ರಾಜಶೇಖರ್ ಹುಮನಾಬಾದ್ ಸೋದರ.
ಸುನೀಲ್ ಗೌಡ ಪಾಟೀಲ್ – ಎಂ.ಬಿ. ಪಾಟೀಲ್ ಸಹೋದರ
ಕಾಂಗ್ರೆಸ್ ಮತ್ತು ಕುಟುಂಬ
ಆರ್. ರಾಜೇಂದ್ರ – ಮಾಜಿ ಶಾಸಕ ಕೆ.ಎನ್.ರಾಜಣ್ಣ ಪುತ್ರ
ಮಂಥರ್ ಗೌಡ – ಮಾಜಿ ಶಾಸಕ ಎ. ಮಂಜು ಪುತ್ರ
ಶರಣಗೌಡ ಅನ್ನದಾನ – ಶಾಸಕ ಅಮರೇಗೌಡ ಭಯ್ಯಾಪುರ ಸಹೋದರ ಪುತ್ರ