ಸದ್ಯಕ್ಕೀಗ ಚುನಾವಣೆಗೆ ಸಿದ್ಧರಾಗ್ತಿರುವ ವಿಜಯ್ ನಟನೆಯ ಮುಂಬರುವ ಚಿತ್ರ `ಜನನಾಯಕನ್’. ಮೂಲಗಳ ಪ್ರಕಾರ ಜನನಾಯಕನ್ ಚಿತ್ರವೇ ವಿಜಯ್ ಕೊನೆಯ ಚಿತ್ರವಾಗಲಿದ್ದು, ಬಳಿಕ ರಾಜಕೀಯದಲ್ಲೇ ಮುಂದುವರಿಯುತ್ತಾರೆ. ಎಂಬ ಮಾತಿದೆ. ಹೀಗಾಗಿ ಈ ಚಿತ್ರ ಬಲು ವಿಶೇಷ. ಇದೀಗ ಈ ಚಿತ್ರದ ಫಸ್ಟ್ ಸಿಂಗಲ್ ರಿಲೀಸ್ ಆಗಿದ್ದು, ವಿಜಯ್ ಜಬರ್ದಸ್ತ್ ಸ್ಟೆಪ್ ಹಾಕಿದ್ದಾರೆ. `ದಳಪತಿ ಕಛೇರಿ’ ಎಂಬ ಲಿರಿಕ್ಸ್‌ನ್ನು ಈ ಹಾಡು ಒಳಗೊಂಡಿದೆ.
ವಿಜಯ್ ಫ್ಯಾನ್ಸ್‌ಗೆ ಒಂದು ಡ್ಯಾನ್ಸಿಂಗ್ ನಂಬರ್ ಕೊಡುವುದು ವಿಜಯ್ ಸಿನಿಮಾಗಳ ಸ್ಟೈಲ್. ಅದರಂತೆ ವಿಜಯ್ ಈ ಸಿನಿಮಾದಲ್ಲಿ ದಳಪತಿ ಕಛೇರಿ ಎಂಬ ಹಾಡನ್ನ ಅಭಿಮಾನಿಗಳಿಗಾಗಿಯೇ ರಿಲೀಸ್ ಮಾಡಿದಂತಿದೆ. ಅನಿರುದ್ಧ್ ರವಿಚಂದರ್ ಹಾಡಿನ ಜೊತೆ ಸಂಗೀತ ನೀಡಿದ್ದಾರೆ. ವೈಟ್ & ವೈಟ್ ಉಡುಗೆಯಲ್ಲಿ ವಿಜಯ್ ಬಿಂದಾಸ್ ಸ್ಟೆಪ್ ಹಾಕಿದ್ದಾರೆ.ಇದನ್ನೂ ಓದಿ: ಧರ್ಮಂ ಸಿನಿಮಾದ `ನಾನು ದಿಲ್ಲಿ ಹಳ್ಳಿ’ ಸಾಂಗ್ ರಿಲೀಸ್
ಜನನಾಯಕನ್ ಚಿತ್ರವನ್ನ ಕನ್ನಡದ ಚಿತ್ರ ನಿರ್ಮಾಣ ಸಂಸ್ಥೆ ಕೆವಿಎನ್ ಫಿಲಂಸ್ ನಿರ್ಮಿಸಿದೆ. ಚಿತ್ರ ಜನವರಿಗೆ ರಿಲೀಸ್ ಆಗುತ್ತಿದೆ. ಈಗಾಗ್ಲೇ ಸಣ್ಣದೊಂದು ಟೀಸರ್ ಮೂಲಕ ಫ್ಯಾನ್ಸ್ ಕುತೂಹಲ ಬ್ಲಾಸ್ಟ್ ಮಾಡಿದ್ದ ವಿಜಯ್ ಇದೀಗ ದಳಪತಿ ಕಛೇರಿ ಎಂಬ ಹಾಡಿನ ಸಾಲಿನಲ್ಲಿ ಬರುವ ಲಿರಿಕ್ಸ್‌ನಂತೆ ವಿಜಯ್ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಹಾಡು ರಿಲೀಸ್ ಆಗಿರುವ ಒಂದೇ ಗಂಟೆಯಲ್ಲಿ ಮಿಲಿಯನ್‌ಗಟ್ಟಲೆ ವೀವ್ಸ್ ಆಗಿದೆ. `ಜನನಾಯಕನ್’ ಮೇಲಿನ ಕುತೂಹಲ ಹೆಚ್ಚಾಗಿದೆ.

