ಇಸ್ಲಾಮಾಬಾದ್ : ಆಲಿಂಗನ ಹಾಗೂ ಚುಂಬನ ದೃಶ್ಯಗಳನ್ನು ಪ್ರಸಾರ ಮಾಡದಂತೆ ಸ್ಥಳೀಯ ಟಿವಿ ಚಾನೆಲ್‍ಗಳಿಗೆ ಪಾಕಿಸ್ತಾನ ಇಲೆಕ್ಟ್ರಾನಿಕ್ ಮಾಧ್ಯಮ ನಿಯಂತ್ರಣ ಪ್ರಾಧಿಕಾರ ಸೂಚನೆ ನೀಡಿದೆ.
ಆಲಿಂಗನ, ಚುಂಬನಗಳಂತಹ ದೃಶ್ಯಗಳು ಸಂಸ್ಕೃತಿಯನ್ನು ಹಾಳು ಮಾಡುತ್ತಿದೆ ಎನ್ನುವ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ. ಇದನ್ನೂ ಓದಿ: 14 ವರ್ಷದ ಬಳಿಕ ಬೆಂಕಿಪೊಟ್ಟಣದ ಬೆಲೆ ಏರಿಕೆ
Advertisement
Advertisement
ಅನುಚಿತ ಬಟ್ಟೆಗಳನ್ನು ಧರಿಸಿರುವ, ಚುಂಬನ ಹಾಗೂ ಆಲಿಂಗನದ ದೃಶ್ಯಗಳು ಹೆಚ್ಚು ಹೆಚ್ಚು ಪ್ರಸಾರವಾಗುತ್ತಿವೆ. ಇದು ಇಸ್ಲಾಮಿಕ್ ಸಂಸ್ಕೃತಿಯನ್ನು ನಾಶಮಾಡುತ್ತದೆ. ಇಂತಹ ದೃಶ್ಯಗಳನ್ನು ವಿಸ್ತಾರವಾಗಿ ತೋರಿಸುವುದರಿಂದ ಜನರ ಮನಸ್ಸು ಚಂಚಲಗೊಂಡು ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ. ಕಾಂಗ್ರೆಸ್ ಸದಸ್ಯತ್ವ ಬೇಕಾದ್ರೆ ಷರತ್ತು ಅನ್ವಯ
Advertisement
“All Satellite TV channels are here h directed to refrain from airing caress/hug scenes” pic.twitter.com/ULAOfESZLf
— Mirza Moiz Baig (@MoizBaig26) October 22, 2021
Advertisement
ಅಪ್ಪುಗೆ, ವಿವಾಹೇತರ ಸಂಬಂಧಗಳು, ಅಸಭ್ಯ, ಬೋಲ್ಡ್ ಡ್ರೆಸ್ಸಿಂಗ್, ವಿವಾಹಿತ ದಂಪತಿ ಅನ್ಯೋನ್ಯತೆಯನ್ನು ಇಸ್ಲಾಮಿಕ್ ಬೋಧನೆಗಳು ಮತ್ತು ಪಾಕಿಸ್ತಾನಿ ಸಮಾಜದ ಸಂಸ್ಕೃತಿಯನ್ನು ಸಂಪೂರ್ಣವಾಗಿ ಕಡೆಗಣಿಸುತ್ತದೆ. ಹೀಗಾಗಿ ಪಾಕಿಸ್ತಾನದಲ್ಲಿ ಇಂತಹ ದೃಶ್ಯ ಪ್ರಸಾರ ಮಾಡದಂತೆ ಸೂಚನೆ ನೀಡಿದೆ. ಈ ಕುರಿತಾಗಿ ಹಲವು ದೂರುಗಳು ಬಂದಿವೆ. ಹೀಗಾಗಿ ಇಂತಹ ದೃಶ್ಯಗಳನ್ನು ನಿಷೇಧಿಸುವಂತೆ ಆದೇಶ ನೀಡಲಾಗಿದೆ.