ಅಭಿಮಾನಿಗಳನ್ನು ಸದಾ ರಂಜಿಸುತ್ತಾ, ಮನೆಮಾತಾಗಿದ್ದ ಕಿರುತೆರೆಯ (Television) ಕಲಾವಿದ ನಾಪತ್ತೆಯಾಗಿದ್ದಾನೆ (Missing). ತನ್ನ ಮಗನನ್ನು ಹುಡುಕಿಕೊಡುವಂತೆ ಅವರ ಕುಟುಂಬ ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಂಡಿದೆ. ತನ್ನ ಮಗ ಕಾಣೆಯಾಗಿರೋದಕ್ಕೆ ಉದ್ದೇಶಿತ ಕೈವಾಡದ ಶಂಕೆಯನ್ನು ಅವರು ವ್ಯಕ್ತ ಪಡಿಸಿದ್ದಾರೆ.
ಚಿತ್ರೀಕರಣಕ್ಕೆ ತೆರಳುತ್ತೇನೆಂದು ಮನೆಯಲ್ಲಿ ಹೇಳಿ ಮನೆಯಿಂದ ಹೊರಟ ತಾರಕ್ ಮೆಹ್ತಾ ಚಶ್ಮಾ ಧಾರಾವಾಹಿ ಖ್ಯಾತಿಯ ನಟ ಗುರುಚರಣ್ ಸಿಂಗ್ (Gurucharan) ನಾಪತ್ತೆಯಾಗಿದ್ದಾರೆ. ದೆಹಲಿಯಿಂದ ಮುಂಬೈಗೆ ತೆರಳಿದ್ದ ಅವರು ಏರ್ಪೋರ್ಟ್ನಿಂದ ಕಾಣೆಯಾಗಿದ್ದಾರೆ ಎಂದು ಅವರ ತಂದೆ ಹರ್ಜಿತ್ ಸಿಂಗ್ ದೂರು ದಾಖಲಿಸಿದ್ದಾರೆ.
ಐವತ್ತರ ವಯಸ್ಸಿನ ನಟ ಮುಂಬೈ ತಲುಪಿಲ್ಲ ಎಂದು ಗೊತ್ತಾಗುತ್ತಿದ್ದಂತೆಯೇ ಕುಟುಂಬಸ್ಥರು ಅವರ ಮೊಬೈಲ್ ಗೆ ಕಾಲ್ ಮಾಡಿದರೂ, ಸ್ವಿಚ್ ಆಫ್ ಬಂದಿರೋದು ಆತಂಕಕ್ಕೆ ಕಾರಣವಾಗಿದೆ. ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ನಾಪತ್ತೆಯಾದ ನಟನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.