ಹೊಟ್ಟೆಪಾಡಿಗಾಗಿ ಬೀದಿ ವ್ಯಾಪಾರಿಯಾದ ಅಫ್ಘಾನಿಸ್ತಾನದ ಫೇಮಸ್ ಟಿವಿ ಆ್ಯಂಕರ್

Public TV
2 Min Read
afghanistan tv anchor

ಕಾಬೂಲ್: ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕವಂತೂ ಅಲ್ಲಿನ ಜನರ ಪರಿಸ್ಥಿತಿ ಹೇಳ ತೀರದಂತಾಗಿದೆ. ಮಹಿಳೆಯರ ಮೇಲೆ ಅಲ್ಲಿನ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ, ಪುರುಷರೂ ಅಲ್ಲಿನ ಸಂಕಷ್ಟಕ್ಕೆ ಹೊರತಾಗಿಲ್ಲ. ಈ ಪರಿಸ್ಥಿತಿಗೆ ಸಾಕ್ಷಿ ಎಂಬಂತೆ ಪತ್ರಕರ್ತನೊಬ್ಬನ ಫೋಟೋಗಳು ವೈರಲ್ ಆಗಿವೆ.

ವಿವಿಧ ಟಿವಿ ಚಾನೆಲ್‌ಗಳಲ್ಲಿ ಆ್ಯಂಕರ್ ಹಾಗೂ ವರದಿಗಾರನಾಗಿ ಹಲವು ವರ್ಷಗಳಿಂದ ಕೆಲಸ ಮಾಡಿದ್ದ ಅಫ್ಘಾನಿಸ್ತಾನದ ಮೂಸಾ ಮೊಹಮ್ಮದಿ ಈಗ ತನ್ನ ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡಬೇಕಾದ ಸಂದರ್ಭ ಬಂದೊದಗಿದೆ. ಅಫ್ಘಾನಿಸ್ತಾನದ ಭೀಕರ ಬಡತನದಿಂದಾಗಿ ಮೊಹಮ್ಮದಿಯೂ ಬೀದಿಪಾಲಾಗಿದ್ದು, ತನ್ನ ಕುಟುಂಬವನ್ನು ಪೋಷಿಸಲು ಇದೀಗ ಬೀದಿ ಬೀದಿಗಳಲ್ಲಿ ಆಹಾರವನ್ನು ಮಾರಾಟ ಮಾಡುತ್ತಿದ್ದಾರೆ. ಇದನ್ನೂ ಓದಿ: ಹಿಜಬ್ ಧರಿಸದಿದ್ದರೆ ಮಹಿಳೆಯರು ಪ್ರಾಣಿಗಳಂತೆ ಕಾಣ್ತಾರೆ: ತಾಲಿಬಾನ್

afghanistan tv anchor 1

ಈ ಫೋಟೋವನ್ನು ಟ್ವಿಟ್ಟರ್ ಬಳಕೆದಾರ ಕಬೀರ್ ಹಕ್ಮಲ್ ಫೋಸ್ಟ್ ಮಾಡಿದ್ದು, ಶೀರ್ಷಿಕೆಯಲ್ಲಿ ಇಲ್ಲಿನ ಗಣರಾಜ್ಯ ಪತನವಾದ ಬಳಿಕ ಅಫ್ಘನ್ನರು ಭೀಕರ ಬಡತನವನ್ನು ಅನುಭವಿಸುತ್ತಿದ್ದಾರೆ. ವಿವಿಧ ಟಿವಿ ಚಾನೆಲ್‌ಗಳಲ್ಲಿ ಆ್ಯಂಕರ್ ಹಾಗೂ ವರದಿಗಾರನಾಗಿ ವರ್ಷಗಳಿಂದ ಕೆಲಸ ಮಾಡಿದ ಮೂಸಾ ಮೊಹಮ್ಮದಿ ಈಗ ತಮ್ಮ ಕುಟುಂಬವನ್ನು ಮುನ್ನಡೆಸಲು ಕೈಯಲ್ಲಿ ಹಣವಿಲ್ಲ. ಅಲ್ಪ ಸ್ವಲ್ಪ ಹಣ ಗಳಿಸಲು ಈಗ ಅವರು ಬೀದಿಗಳಲ್ಲಿ ಆಹಾರವನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಬರೆದಿದ್ದಾರೆ. ಇದನ್ನೂ ಓದಿ: ಪ್ರವಾದಿ ಕುರಿತ ಬಿಜೆಪಿ ನಾಯಕರ ಹೇಳಿಕೆ ಖಂಡಿಸಿದ ಅಮೆರಿಕ

ಮೂಸಾ ಮೊಹಮ್ಮದಿ ಅವರ ಫೋಟೋಗಳು ವೈರಲ್ ಆದ ಬಳಿಕ ಇದು ಅಫ್ಘಾನಿಸ್ತಾನದ ರಾಷ್ಟ್ರೀಯ ರೇಡಿಯೋ ಹಾಗೂ ದೂರದರ್ಶನ ಮಹಾನಿರ್ದೇಶಕ ಅಹ್ಮದುಲ್ಲಾ ವಾಸಿಕ್ ಅವರ ಗಮನಕ್ಕೆ ಬಂದಿದೆ. ಮಾಜಿ ದೂರದರ್ಶನದ ಆ್ಯಂಕರ್ ಹಾಗೂ ವರದಿಗಾರನನ್ನು ತಮ್ಮ ಏಜೆನ್ಸಿಗೆ ನಿಯೋಜಿಸಲಾಗುವುದು ಎಂದು ತಿಳಿಸಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *