ಹಲವಾರು ಸೀರಿಯಲ್‌ನಲ್ಲಿ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡು ಮನೆ ಮಾತಾಗಿರುವ ಮಂಜು ಭಾಷಿಣಿ ಇದೀಗ ಹೊಸ ಜರ್ನಿ ಆರಂಭಿಸಿದ್ದಾರೆ.
ಬಿಗ್‌ಬಾಸ್ ಸೀಸನ್ 12ರ ಸ್ಪರ್ಧಿಯಾಗಿ ಎಂಟ್ರಿಕೊಡುತ್ತಿದ್ದಾರೆ ಮಂಜು ಭಾಷಿಣಿ. ಈ ಬಗ್ಗೆ ವಿಡಿಯೋ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಬಿಗ್‌ಬಾಸ್ ಮನೆಗೆ ಎಂಟ್ರಿಕೊಡುವ ಬಗ್ಗೆ ಸ್ವತಃ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಬಿಗ್‌ಬಾಸ್ ಸೀಸನ್-12 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಒಬ್ಬೊಬ್ಬರಾಗಿ ಬಿಗ್‌ಬಾಸ್ ಮನೆಯೊಳಗೆ ಎಂಟ್ರಿಕೊಡುತ್ತಿದ್ದಾರೆ. ಈ ದಿನ ಸಂಜೆ ಯಾರೆಲ್ಲ ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧೆ ನೀಡಲಿದ್ದಾರೆ ಅನ್ನೋ ಕ್ಯೂರಿಯಾಸಿಟಿಗೆ ತೆರೆಬೀಳಲಿದೆ. ಅಲ್ಲಿಯವರೆಗೂ ಬಿಗ್‌ಬಾಸ್ ಹೌಸ್‌ನಿಂದ ಬರುವನ ಒಂದೊಂದೇ ಸುದ್ದಿಯನ್ನ ನೋಡಿ ಎಂಜಾಯ್ ಮಾಡುತ್ತಾ ಇರಿ.
ಬಿಗ್‌ಬಾಸ್‌ನ ಮೊದಲ ಸ್ಪರ್ಧಿಯಾಗಿ ಕಾಕ್ರೋಚ್ ಸುಧೀ ಎಂಟ್ರಿಕೊಡುತ್ತಿದ್ದಾರೆ. ಮಾಸ್ಕ್ ಧರಿಸಿಕೊಂಡು ಪಬ್ಲಿಕ್‌ನಲ್ಲಿ ಓಪಿನಿಯನ್ ಪಡೆದುಕೊಂಡಿದ್ದ ಸುಧೀ ಮೊದಲ ಸ್ಪರ್ಧಿಯಾಗಿ ಗ್ರ್ಯಾಂಡ್ ಆಗಿ ಎಂಟ್ರಿಕೊಡ್ತಿದ್ದಾರೆ. ಇನ್ನು ಸುದೀಪ್ ಮೊದಲ ದಿನ ಯಾವ ರೀತಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಹೇಗೆ ಮಾತಾಡಲಿದ್ದಾರೆ ಅಂತಾ ನೋಡಲು ಕಾದು ಕುಳಿತಿದೆ ಅಭಿಮಾನಿ ವರ್ಗ.