ಹಿಂದಿ ಕಿರುತೆರೆ ನಟಿ ಅಂಕಿತಾ ಲೋಖಂಡೆ (Ankitha Lokhande) ಮತ್ತು ಪತಿ ವಿಕ್ಕಿ ಜೈನ್ (Vicky Jain) ಜೋಡಿ ತಮ್ಮ ಬೆಡ್ ರೂಮ್ ಫೋಟೋಶೂಟ್ (Bedroom Photoshoot) ಮೂಲಕ ಸದ್ದು ಮಾಡ್ತಿದ್ದಾರೆ. ಅಂಕಿತಾ ಲೋಖಂಡೆ ಫೋಟೋಶೂಟ್ ಈಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
View this post on Instagram
`ಪವಿತ್ರಾ ರಿಶ್ತಾ’ (Pavithra Rishta) ಖ್ಯಾತಿಯ ನಟಿ ಅಂಕಿತಾ ಲೋಖಂಡೆ ತಮ್ಮ ಹೊಸ ಫೋಟೋಶೂಟ್ ಮೂಲಕ ಸುದ್ದಿಯಲ್ಲಿದ್ದಾರೆ. ತಮ್ಮ ಪತಿ ವಿಕ್ಕಿ ಜೈನ್ ಅವರೊಂದಿಗೆ ಬೆಡ್ ರೂಮ್‌ನಲ್ಲಿ ಫೋಟೋವನ್ನ ಇತ್ತೀಚೆಗೆ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಹಂಚಿಕೊಂಡಿದ್ದರು. ಈ ಫೋಟೋಶೂಟ್ ಇದೀಗ ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ. ಇದನ್ನೂ ಓದಿ: ದೇವಸ್ಥಾನದ ಬಾಗಿಲಲ್ಲೇ `ಹೆಬ್ಬುಲಿ’ ನಟಿಗೆ ಅವಮಾನ
View this post on Instagram
ಫೋಟೋಶೂಟ್‌ನಲ್ಲಿ ಅಂಕಿತಾ ಕಪ್ಪು ಪೈಟಿನಿ ಸೀರೆಯಲ್ಲಿ ಪರಿಪೂರ್ಣ ಮರಾಠಿ ವಧುವಿನಂತೆ ಕಾಣುತ್ತಿದ್ದಾರೆ. ಅದೇ ಸಮಯದಲ್ಲಿ, ಅವರ ಪತಿ ವಿಕ್ಕಿ ಜೈನ್ ಕೂಡ ಕಪ್ಪು ಕುರ್ತಾದಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಆದರೆ, ಬೆಡ್‌ರೂಮ್‌ನಲ್ಲಿರುವ ಆಕೆಯ ರೋಮ್ಯಾಂಟಿಕ್ ಫೋಟೋಗಳಿಂದಾಗಿ ಜನರು ಅವರನ್ನು ತೀವ್ರವಾಗಿ ಟ್ರೋಲ್ ಮಾಡುತ್ತಿದ್ದಾರೆ.
View this post on Instagram
ಪತಿ ವಿಕ್ಕಿ ಜೈನ್ ಜೊತೆ ಅಂಕಿತಾ ಫೋಟೋ ನೋಡಿ, ಅನೇಕರು ಸುಶಾಂತ್ ಸಿಂಗ್ ರಜಪೂತ್ ಅವರನ್ನ ನೆನಪು ಮಾಡಿಕೊಂಡಿದ್ದಾರೆ. ಸುಶಾಂತ್ ನೀವು ಚೆನ್ನಾಗಿ ಕಾಣುತ್ತೀರಾ, ಅವರು ಇರಬೇಕಿತ್ತು ಎಂದೆಲ್ಲಾ ಕಾಮೆಂಟ್ ಮಾಡಿದ್ರೆ, ಹಬ್ಬದ ವೇಳೆ ಬೆಡ್ ರೂಮ್ ಫೋಟೋಶೂಟ್ ಶೋಕಿ ಬೇಕಿತ್ತಾ ಅಂತಾ ನೆಟ್ಟಿಗರು ಕಿಡಿಕಾರಿದ್ದಾರೆ.
2021ರಲ್ಲಿ ವಿಕ್ಕಿ ಜೈನ್ ಜೊತೆ ಅಂಕಿತಾ ಲೋಖಂಡೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 2022ರಲ್ಲಿ ಖಾಸಗಿ ವಾಹಿನಿಯಲ್ಲಿ ನಡೆದ `ಸ್ಮಾರ್ಟ್ ಜೋಡಿ’ (Smart Jodi Show) ಕಾರ್ಯಕ್ರಮದಲ್ಲಿ ಬೆಸ್ಟ್ ಜೋಡಿಯಾಗಿ ಗೆದ್ದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k