ಮುಂಬೈ: ಬಾಲಿಕಾ ವಧು ನಟ ಸಿದ್ದಾರ್ಥ್ ಶುಕ್ಲಾರವರ ಕಾರ್ ಅಪಘಾತಕ್ಕೀಡಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮುಂಬೈನ ಒಶಿವಾರದ ಜಂಕ್ಷನ್‍ನ ಬಳಿ ಶನಿವಾರ ಸಂಜೆ ಈ ಅಪಘಾತ ಸಂಭವಿಸಿದೆ. ಬಿಎಂಡಬ್ಲ್ಯೂ ಕಾರನ್ನು ಸ್ವತಃ ಸಿದ್ದಾರ್ಥ್ ಅವರೇ ಚಲಾಯಿಸುತ್ತಿದ್ದು, ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಮೂವರಿಗೆ ಗಾಯಗಳಾಗಿವೆ. ಆದ್ರೆ ಚಾಲಕ ಸಿದ್ದಾರ್ಥ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
Advertisement
ಇನ್ನು ಘಟನೆಯಲ್ಲಿ ಗಾಯಗೊಂಡ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿಲಾಗಿದ್ದು, ಚಿಕಿತ್ಸೆ ನೀಡಲಾಗಿದೆ. ವೇಗವಾಗಿ ಕಾರು ಚಾಲನೆ ಮಾಡಿದ್ದರಿಂದಲೇ ಈ ಅವಘಡ ಸಂಭವಿಸಿದೆ ಅಂತ ಪೊಲೀಸರು ಸಿದ್ದಾರ್ಥ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಟ ಸಿದ್ದಾರ್ಥ್ ಈ ರೀತಿಯ ಅಪಘಾತಕ್ಕೆ ಒಳಗಾಗಿದ್ದು ಇದೇ ಮೊದಲ ಬಾರಿಯಲ್ಲ, 2014 ರಲ್ಲೂ ಈ ರೀತಿಯ ಘಟನೆಗೆ ಸಿಲುಕಿದ್ದರು ಎಂದು ವರದಿಯಾಗಿದೆ.
Advertisement
ಸಿದ್ದಾರ್ಥ್ ಶುಕ್ಲಾ ಅವರು 2008 ರಲ್ಲಿ ಸೋನಿ ಟಿವಿ ಕಾರ್ಯಕ್ರಮದ ‘ಬಾಬುಲ್ ಕಾ ಆಂಗನ್ ಚುಟ್ಟಿ ನಾ’ ದೊಂದಿಗೆ ಮೊದಲ ಬಾರಿಗೆ ಟಿವಿ ರಂಗಕ್ಕೆ ಪ್ರವೇಶಿಸಿದರು. ಆ ಬಳಿಕ ಅನೇಕ ಯಶ್ವಸಿ ಟಿವಿ ಚಾನಲ್‍ಗಳಲ್ಲಿ ಪ್ರಸಾರವಾಗುವ ಬಾಲಿಕಾ ವಧು ಖತರೋಂ ಕೆ ಕಿಲಾಡಿ, ‘ಝಲಕ್ ದಿಕಾಲ ಜಾ’ ಮೊದಲಾದ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಕೊನೆಯ ಬಾರಿಗೆ ಕಲರ್ಸ್ ನ ‘ದಿಲ್ ಸೇ ದಿಲ್ ತಾಕ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Advertisement
Mumbai: Television actor Siddharth Shukla hit three cars, then a divider with his BMW in Oshiwara area earlier today. Police registered a case of rash driving. More details awaited pic.twitter.com/tzN0oOWleW
— ANI (@ANI) July 21, 2018