– ಸ್ನಾನ ಮಾಡಿಸಿ ಹಾಲು ನೀಡಿದ್ರು
ಕಾಬೂಲ್: ಕಾಬೂಲ್ ವಿಮಾನನಿಲ್ದಾಣದ ಬಳಿ ಅಮ್ಮನಿಂದ ದೂರವಾಗಿದ್ದ ಮಗುವಿಗೆ ಟರ್ಕಿ ಸೈನಿಕರು ಆಹಾರ ನೀಡಿ ರಕ್ಷಿಸಿರುವ ಫೋಟೋ ಮತ್ತು ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಫ್ಘಾನಿಸ್ತಾನ ನರಹಂತಕರ ಕೈವಶಗೊಂಡು ಆರು ದಿನಗಳು ಕಳೆದಿದ್ದು, ಪ್ರತಿನಿತ್ಯ ಹೃದಯವಿದ್ರಾವಕ ದೃಶ್ಯಗಳು ಬೆಳಕಿಗೆ ಬರುತ್ತಿವೆ.
ಟರ್ಕಿ ಸೈನಿಕರನ್ನು ಶುಕ್ರವಾರ ಕಾಬೂಲ್ ವಿಮಾನ ನಿಲ್ದಾಣದ ಬಳಿ ನಿಯೋಜಿಸಲಾಗಿತ್ತು. ಫರಿಶ್ತಾ ರಹಮಾನಿ ಎಂಬಾತ ಎರಡು ತಿಂಗಳ ಮಗುವನ್ನು ತೆಗೆದುಕೊಂಡು ಓಡಾಡುತ್ತಿದ್ದನು. ಮಗುವನ್ನು ಕಂಡು ಸೈನಿಕರು ಆತನನ್ನು ಕರೆದು ವಿಚಾರಿಸಿದ್ದಾರೆ. ಈ ವೇಳೆ ಮಗುವಿನ ತಾಯಿ ಹಿಂದೆ ಉಳಿದುಕೊಂಡರು. ಈಗ ಮಗು ಹಸಿವಿನಿಂದ ಅಳುತ್ತಿದೆ ಎಂದು ಕಣ್ಣೀರು ಹಾಕಿದ್ದಾನೆ.
ಮಗುವಿನ ಆಕ್ರಂದನಕ್ಕೆ ಕರಗಿದ ಟರ್ಕಿ ಸೈನಿಕರು ಕಂದಮ್ಮನ ತಂದೆಯನ್ನು ಸುರಕ್ಷಿತ ಸ್ಥಳದಲ್ಲಿರಲು ಅವಕಾಶ ಮಾಡಿಕೊಟ್ಟಿದ್ದಾರೆ. ನಂತರ ಮಗುವಿಗೆ ಸ್ನಾನ ಮಾಡಿಸಿ ಹಾಲುಣಿಸಿ ಆರೈಕೆ ಮಾಡಿದ್ದಾರೆ. ಅಲ್ಲಿದ್ದ ಮಹಿಳಾ ಸೈನಿಕ ಸಿಬ್ಬಂದಿ ಮಗುವಿಗೆ ಜೋಗುಳ ಹಾಡಿ ಸಮಾಧಾನ ಮಾಡುತ್ತಿರುವ ವೀಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ಷರಿಯತ್ ಕಾನೂನು ಎಂದರೇನು? ಅಫ್ಘಾನ್ ತಾಲಿಬಾನ್ ಹೇಗೆ ಅರ್ಥೈಸುತ್ತದೆ?
ಅಫ್ಘಾನರ ಕಷ್ಟಕ್ಕೆ ಸ್ಪಂದಿಸುತ್ತಿರುವ ಅಮೆರಿಕ ಸೈನಿಕರು:
ಜನರನ್ನ ಏರ್ ಲಿಫ್ಟ್ ಮಾಡಲಾಗ್ತಿದೆ ಎಂದು ಸುದ್ದಿ ತಿಳಿದು ಅಫ್ಘನ್ನರು ವಿಮಾನ ನಿಲ್ದಾಣದತ್ತ ದೌಡಾಯಿಸುತ್ತಿದ್ದಾರೆ. ತಾಲಿಬಾನಿಗಳಿಂದಾಗಿ ವಿಮಾನ ನಿಲ್ದಾಣದ ಹೊರಗಡೆ ಕಾಯುತ್ತಾ, ತಮ್ಮನ್ನು ದೇಶದಿಂದ ಹೊರಗೆ ಕರೆದುಕೊಂಡು ಹೋಗುವಂತೆ ಅಮೆರಿಕ ಸೈನಿಕರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಊಟ, ನೀರು ಇಲ್ಲದೇ ಕುಳಿತ ಅಫ್ಘನ್ನರಿಗೆ ಅಮೆರಿಕ ಸೈನಿಕರು ಆಹಾರ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ. ಇದನ್ನೂ ಓದಿ: ನಮ್ಮ ಸೈನಿಕರ ಮೇಲೆ ದಾಳಿಯಾದ ಮರು ಕ್ಷಣವೇ ಪ್ರತಿದಾಳಿ – ಅಮೆರಿಕ ಅಧ್ಯಕ್ಷ ಬೈಡನ್ ಎಚ್ಚರಿಕೆ