ಅಂಕಾರಾ/ನವದೆಹಲಿ: ಸರಣಿ ಭೂಕಂಪಗಳಿಂದ (Earthquake) ತತ್ತರಿಸುತ್ತಿರುವ ಟರ್ಕಿಯಲ್ಲಿ (Turkey) ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿವೆ. ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರನ್ನ ರಕ್ಷಣೆ ಮಾಡುವ ಕೆಲಸ ಮಾಡಲಾಗುತ್ತಿದೆ. ರಕ್ಷಣಾ ಕಾರ್ಯಚರಣೆಯಲ್ಲಿ ಅಮೆರಿಕ (USA), ರಷ್ಯಾ (Russia), ಚೀನಾ (China) ಭಾರತದ ರಕ್ಷಣಾ ತಂಡಗಳು ಭಾಗಿಯಾಗಿವೆ. ಬದುಕುಳಿದರ ಶೋಧಕ್ಕಾಗಿ ಹೊಸ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ.
Advertisement
ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಥರ್ಮಲ್ ಕ್ಯಾಮೆರಾಗಳನ್ನ ಹೊಂದಿರುವ ಚಿಕ್ಕ ವಾಹನಗಳಿಂದ ಮೈಕ್ರೋಫೋನ್ (Microphone) ಕಳುಹಿಸಿ ಬದುಕಿರುವ ಜನರನ್ನು ಹುಡುಕಲಾಗುತ್ತಿದೆ. ಡ್ರೋನ್ ಕ್ಯಾಮರಾಗಳು (Drone Camera) ಮತ್ತು ರೊಬೋಟ್ ಗಳನ್ನು ಬಳಸಲಾಗುತ್ತಿದೆ. ಸಣ್ಣ, ಅತಿಸಣ್ಣ ಪ್ರದೇಶಗಳಲ್ಲಿ ಆಕ್ಸಿಜನ್ ಪೈಪ್ಗಳನ್ನ (Oxygen Pipe) ಕಳುಹಿಸಿ ಉಸಿರಾಟದ ಮೂಲಕ ಜನರ ಇರುವಿಕೆಯನ್ನು ಖಚಿತಪಡಿಸಕೊಳ್ಳಲಾಗುತ್ತಿದೆ. ಗುರುವಾರ 44 ಗಂಟೆಗಳಿಂದ ಕಟ್ಟಡದ ಅವಶೇಷಗಳ ಅಡಿಯಲ್ಲಿದ್ದ ಬಾಲಕಿಯನ್ನು ರಕ್ಷಣೆ ಮಾಡಲಾಗಿದೆ.
Advertisement
Advertisement
ಈ ನಡುವೆ ಟರ್ಕಿ ಮತ್ತು ಸಿರಿಯಾದಲ್ಲಿ ಸಾವನ್ನಪ್ಪಿದರ ಸಂಖ್ಯೆ 16,000ಕ್ಕೆ ಏರಿದೆ. ಟರ್ಕಿಯಲ್ಲಿ ಕನಿಷ್ಠ 12,873 ಜನರು ಸಾವನ್ನಪ್ಪಿದ್ದರೆ, ಸಿರಿಯಾದಲ್ಲಿ ಕನಿಷ್ಠ 3,142 ಜನರು ಸಾವನ್ನಪ್ಪಿದ್ದಾರೆ. ಈವರೆಗೆ 60 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಟರ್ಕಿ ಸರ್ಕಾರ ಹೇಳಿದೆ. ಇದನ್ನೂ ಓದಿ: Earthquakeː ಟರ್ಕಿಯಲ್ಲಿ ಸಿಲುಕಿರೋದು ಬೆಂಗಳೂರು ಟೆಕ್ಕಿಯಲ್ಲ- ಕನ್ನಡಿಗರ ರಕ್ಷಣೆಗೆ ಮುಂದಾದ ಸರ್ಕಾರ
Advertisement
ಟರ್ಕಿ ತಲುಪಿದ ಭಾರತದ 6ನೇ ವಿಮಾನ: ಟರ್ಕಿಗೆ ಭಾರತದ ನೆರವು ಮುಂದುವರಿದಿದೆ. ಗುರುವಾರ ವಾಯುಸೇನೆಯ 6ನೇ ವಿಮಾನ ಹೆಚ್ಚುವರಿ ವೈದ್ಯಕೀಯ ಸಾಮಾಗ್ರಿಗಳು ಹೊತ್ತು ತೆರಳಿದೆ. ಇದರಲ್ಲಿ 44 ಮಂದಿ ತಂತ್ರಜ್ಞರಿದ್ದು ಟರ್ಕಿಯಲ್ಲಿ ವೈದ್ಯಕೀಯ ನೆರವು ನೀಡಲಿದ್ದಾರೆ. ಇದಕ್ಕೂ ಮುನ್ನ ಎನ್ಡಿಆರ್ಎಫ್ (NDRF) ತಂಡಗಳು ಹಾಗೂ ವೈದ್ಯರನ್ನ ಭಾರತ ಕಳುಹಿಸಿತ್ತು. ಇದನ್ನೂ ಓದಿ: Turkey, Syria Earthquake: 7,900ಕ್ಕೇರಿದ ಸಾವಿನ ಸಂಖ್ಯೆ – ಅವಶೇಷಗಳಡಿ ಕೇಳುತ್ತಿದೆ ಸಂತ್ರಸ್ತರ ಚೀತ್ಕಾರ
ಬೆಂಗಳೂರು ಮೂಲದ ಟೆಕ್ಕಿ ಸುಳಿವಿಲ್ಲ: ಟರ್ಕಿಯಲ್ಲಿ ನಾಪತ್ತೆಯಾಗಿರುವ ಬೆಂಗಳೂರು ಮೂಲದ ಟೆಕ್ಕಿ (Bengaluru Techie) ಸುಳಿವು ಸಿಕ್ಕಿಲ್ಲ. ಮಾಹಿತಿಗಳ ಪ್ರಕಾರ ಡೆಹ್ರಾಡೂನ್ ಮೂಲದ ವಿಜಯಕುಮಾರ್ ಎಂದು ತಿಳಿದುಬಂದಿದೆ. ಬೆಂಗಳೂರಿನ ಕಂಪನಿಯೊಂದರಲ್ಲಿ ಪ್ಲ್ಯಾನೆಟ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ವಿಜಯ್ ಕುಮಾರ್, ಕಳೆದವಾರ ಟರ್ಕಿಯ ಪ್ರಮುಖ ಕೈಗಾರಿಕಾ ಅನಿಲ ಪೂರೈಕೆ ಕಂಪನಿಯಾದ ಕುಲ್ಕು ಗಾಜ್ ಎಂಬ ಕಂಪನಿಗೆ ಕರಗಿದ ಅಸಿಟಿಲೀನ್ ಗ್ಯಾಸ್ ಪ್ಲಾಂಟ್ನ ನಿರ್ಮಾಣ ಮತ್ತು ಕಾರ್ಯಾರಂಭ ಹಿನ್ನೆಲೆ ಟರ್ಕಿಗೆ ತೆರಳಿದ್ದರು. ಸದ್ಯ ಅವರ ಹುಡುಕಾಟವೂ ಮುಂದುವರಿದಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k