ಅಂಕಾರ: ಫೆಬ್ರವರಿ 6 ರಂದು ಸಂಭವಿಸಿದ ಮಾರಣಾಂತಿಕ ಭೂಕಂಪದಿಂದಾಗಿ (Earthquake) ಟರ್ಕಿ (Turkey) ಹಾಗೂ ಸಿರಿಯಾ (Syria) ದೇಶಗಳು ಅಕ್ಷರಶಃ ನಲುಗಿ ಹೋಗಿದೆ. ಇದೀಗ ಸಾವಿನ ಸಂಖ್ಯೆ 41,000 ತಲುಪಿದೆ. ಅವಶೇಷಗಳಡಿಯಿಂದ ಬದುಕುಳಿದವರ ಚೀರಾಟ ಇನ್ನೂ ಕೂಡಾ ಕೇಳಿಬರುತ್ತಿದೆ. ಬದುಕುಳಿದವರನ್ನು ರಕ್ಷಿಸಲು ರಕ್ಷಣಾ ತಂಡಗಳು ಕಳೆದೊಂದು ವಾರದಿಂದ ಹಗಲು ರಾತ್ರಿಯೆನ್ನದೇ ಶ್ರಮಿಸುತ್ತಿವೆ.
Advertisement
ಮಂಗಳವಾರ ಟರ್ಕಿಯಲ್ಲಿ ಅವಶೇಷಗಳಡಿಯಿಂದ 9 ಜನ ಬದುಕುಳಿದವರನ್ನು ರಕ್ಷಿಸಲಾಗಿದೆ. ನಿರಾಶ್ರಿತರು ಈಗ ಕೊರೆಯುವ ಚಳಿಯಲ್ಲಿ ಹಾಗೂ ಆಹಾರದ ಕೊರತೆಯಿಂದಾಗಿ ಹೆಣಗಾಡುತ್ತಿದ್ದಾರೆ. ನಗರವಿಡೀ ಸತ್ತ ಜನರ ವಾಸನೆ ಬರುತ್ತಿದೆ. ಅವಶೇಷಗಳಡಿ ಇನ್ನೂ ಹಲವರು ಜೀವಂತವಾಗಿರುವ ಸಾಧ್ಯತೆಯಿದ್ದು, ಎಲ್ಲರನ್ನೂ ರಕ್ಷಿಸುವ ಪ್ರಯತ್ನ ಮಾಡಲಾಗುತ್ತಿದೆ.
Advertisement
Advertisement
ಈಗಾಗಲೇ ಸುಮಾರು 2 ಕೋಟಿ ಜನರು ಭೂಕಂಪ ಪೀಡಿತ ಪ್ರದೇಶವನ್ನು ತೊರೆದಿದ್ದಾರೆ. ಭೂಕಂಪ ಪೀಡಿತ ಪ್ರದೇಶದಲ್ಲಿ ಇನ್ನೂ ನೂರಾರು ಕಟ್ಟಡಗಳು ವಾಸಕ್ಕೆ ಯೋಗ್ಯವಾಗಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ಭಾರತೀಯ ಸೇನೆಯಲ್ಲಿ ಮುಸ್ಲಿಮರಿಗೆ ಶೇ.30 ಮೀಸಲಾತಿ ಕೊಡಿ: ಜೆಡಿಯು ನಾಯಕ ಒತ್ತಾಯ
Advertisement
वसुधैव कुटुम्बकम की अवधारणा के साथ भारत कर रहा सीरिया और तुर्की की मदद।@MoHFW_India provided life-saving emergency medicines, protective items, medical equipment, critical care drugs, etc as part of ????????’s efforts to provide humanitarian assistance to ???????? & ????????. #OperationDost pic.twitter.com/n6IlgXhaCL
— Dr Mansukh Mandaviya (@mansukhmandviya) February 14, 2023
ಭಾರತ ಆಪರೇಷನ್ ದೋಸ್ತ್ ಅಡಿಯಲ್ಲಿ ಭೂಕಂಪ ಪೀಡಿತ ಟರ್ಕಿ ಹಾಗೂ ಸಿರಿಯಾಗೆ ಮಾನವೀಯ ವೈದ್ಯಕೀಯ ನೆರವು ನೀಡುವುದನ್ನು ಮುಂದುವರಿಸಿದೆ. ಔಷಧಗಳು, ರಕ್ಷಣಾತ್ಮಕ ವಸ್ತುಗಳು, 7 ಕೋಟಿ ರೂ. ಗೂ ಅಧಿಕ ಮೌಲ್ಯದ ಕ್ರಿಟಲ್ ಕೇರ್ ಉಪಕರಣಗಳನ್ನೊಳಗೊಂಡಂತೆ ತುರ್ತು ಪರಿಹಾರ ಸಾಮಾಗ್ರಿಗಳನ್ನು ರವಾನಿಸಿದೆ. ಇದನ್ನೂ ಓದಿ: Shivamogga Airport ನಾಮಕರಣ ವಿವಾದ- ಉದ್ಘಾಟನೆಗೆ ಡೇಟ್ ಫಿಕ್ಸ್ ಆದ್ರೂ ಫೈನಲ್ ಆಗಿಲ್ಲ ಹೆಸರು!
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k