ನವದೆಹಲಿ: ಭಾರಿ ಭೂಕಂಪನದಿಂದ ನಿರಾಶ್ರಿತರಾದ ಟರ್ಕಿ (Turkey) ಜನರಿಗೆ ಬೆಂಗಳೂರಿನ ಆರೋಗ್ಯ ಸೇವಾ ಸಂಸ್ಥೆ (Aarogya Seva Samsthe) ಸಹಾಯ ಹಸ್ತ ಚಾಚಿದೆ. ದೆಹಲಿಯಲ್ಲಿರುವ ಟರ್ಕಿ ರಾಯಭಾರಿ ಕಚೇರಿಗೆ ಸಾವಿರಕ್ಕೂ ಅಧಿಕ ಕಂಬಳಿಗಳನ್ನು ನೀಡಿದ್ದು, ಮತ್ತಷ್ಟು ಅಗತ್ಯ ವಸ್ತುಗಳನ್ನು ಪೂರೈಸುವ ಭರವಸೆ ನೀಡಿದೆ.
Advertisement
ವಿವಿಧ ವಲಯಗಳಲ್ಲಿ ಕಾರ್ಯನಿರ್ವಹಿಸುವ ಸಮಾನ ಮನಸ್ಕರ ಗುಂಪು ಸೂರ್ಯ ಫೌಂಡೇಶನ್ ಅಡಿಯಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು, ಟರ್ಕಿ ಮತ್ತು ಸಿರಿಯಾದಲ್ಲಿ (Turkey-Syria Earthquake) ಭಾರಿ ಭೂಕಂಪವಾದ ಹಿನ್ನೆಲೆ ನಿರಾಶ್ರಿತರಿಗೆ ಆರೋಗ್ಯ ಸೇವಾ ಸಂಸ್ಥೆ ನೇತೃತ್ವದಲ್ಲಿ ಅಗತ್ಯ ವಸ್ತುಗಳನ್ನು ನೀಡಲು ನಿರ್ಧರಿಸಿದ್ದರು. ಇದನ್ನೂ ಓದಿ: ಟರ್ಕಿ, ಸಿರಿಯಾ ಭೂಕಂಪ- ಸಾವಿನ ಸಂಖ್ಯೆ 41 ಸಾವಿರಕ್ಕೆ ಏರಿಕೆ
Advertisement
Advertisement
ಟರ್ಕಿ ಮತ್ತು ಸಿರಿಯಾ ರಾಯಭಾರಿ ಕಚೇರಿಯನ್ನು ಸಂಪರ್ಕ ಮಾಡಿದ ಆರೋಗ್ಯ ಸೇವಾ ಸಂಸ್ಥೆ, ಅಗತ್ಯವಿರುವ ವಸ್ತುಗಳ ಮಾಹಿತಿಯನ್ನು ಪಡೆದುಕೊಂಡು ಬಳಿಕ ಟರ್ಕಿಗೆ ಸಾವಿರ ಕಂಬಳಿಗಳನ್ನು ಮೊದಲ ಹಂತದಲ್ಲಿ ನೀಡಿದೆ. ಎರಡನೇ ಹಂತದಲ್ಲಿ ವೈದ್ಯಕೀಯ ವಸ್ತುಗಳನ್ನು ನೀಡಲು ತಯಾರಿ ಮಾಡಿಕೊಳ್ಳಲಾಗಿದೆ. ಸಿರಿಯಾ ಹಣಕಾಸಿನ ನೆರವು ಕೇಳಿದ್ದು, ಅದರ ಕ್ರೋಢೀಕರಣವನ್ನು ಮಾಡಲಾಗುತ್ತಿದೆ.
Advertisement
ಈ ಬಗ್ಗೆ ಮಾತನಾಡಿರುವ ಸೂರ್ಯ ಫೌಂಡೇಶನ್ ಸದಸ್ಯ ಪುನೀತ್, ಪ್ರಕೃತಿ ವಿಕೋಪಗಳು, ದೊಡ್ಡ ಪ್ರಮಾಣದಲ್ಲಿ ಅನಾಹುತಗಳು ಸಂಭವಿಸಿದ ವೇಳೆ ಬೇರೆ ಬೇರೆ ರಾಜ್ಯಗಳು ಸೇರಿದಂತೆ ಹಲವು ದೇಶಗಳಿಗೆ ಆರೋಗ್ಯ ಸೇವಾ ಸಂಸ್ಥೆ ನೆರವು ನೀಡಿದೆ. ಸೂರ್ಯ ಫೌಂಡೇಶನ್ ಅಡಿಯಲ್ಲೂ ಹಲವು ಕಾರ್ಯಗಳನ್ನು ಮಾಡಿದೆ. ಈಗ ಟರ್ಕಿ, ಸಿರಿಯಾಗೆ ಅಗತ್ಯವಿರುವ ವಸ್ತುಗಳನ್ನು ರಾಯಭಾರಿ ಕಚೇರಿ ಮೂಲಕ ತಲುಪಿಸುತ್ತಿದ್ದೇವೆ ಎಂದರು. ಇದನ್ನೂ ಓದಿ: PublicTV Explainer: ಟರ್ಕಿಯಲ್ಲೇ ಹೆಚ್ಚು ಭೂಕಂಪ ಯಾಕೆ? – ಇಲ್ಲಿದೆ ವೈಜ್ಞಾನಿಕ ಕಾರಣ..
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k