ಇಸ್ತಾಂಬುಲ್: ಪ್ರಾಕೃತಿಕ ವಿಕೋಪಕ್ಕೆ ಟರ್ಕಿ (Turkey) – ಸಿರಿಯಾ (Syria) ದೇಶಗಳಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿದೆ. ಒಂದೇ ದಿನ 2 ದೇಶಗಳಲ್ಲಿ 3 ಬಾರಿ ಪ್ರಬಲ ಭೂಕಂಪ (Earthquake) ಸಂಭವಿಸಿದ್ದು, ಸಾವಿನ ಸಂಖ್ಯೆ 4 ಸಾವಿರಕ್ಕೆ ಏರಿಕೆಯಾಗಿದೆ. ಸುಮಾರು 15 ಸಾವಿರ ಮಂದಿ ಗಾಯಗೊಂಡಿದ್ದಾರೆ. 4,900 ಕಟ್ಟಡಗಳು ಸಂಪೂರ್ಣ ನೆಲಸಮಗೊಂಡಿವೆ.
Advertisement
ಟರ್ಕಿಯಲ್ಲಿ ಸೋಮವಾರ ನಸುಕಿನ ಜಾವದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಬೆನ್ನಲ್ಲೇ ಮತ್ತೆರಡು ಬಾರಿ ಭೂಕಂಪ ಸಂಭವಿಸಿದ್ದು, ಕಳೆದ 24 ಗಂಟೆಯಲ್ಲಿ ಸರಿಸುಮಾರು 2,600 ಮಂದಿ ಬಲಿಯಾಗಿದ್ದರು. 8 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಇದೀಗ ಸಾವಿನ ಸಂಖ್ಯೆ ಹಾಗೂ ಗಾಯಗೊಂಡ ಸಂತ್ರಸ್ತರ ಸಂಖ್ಯೆ ಏರುತ್ತಲೇ ಇದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಭಾರತದ ಪ್ರತಿಷ್ಠೆ ಹಾಳುಮಾಡಲು ದಿವಾಳಿ ಪಾಕಿಸ್ತಾನ ಸಂಚು- ಇಂಟಲಿಜೆನ್ಸ್ ರಿಪೋರ್ಟ್
Advertisement
Advertisement
ಟರ್ಕಿಯಲ್ಲಿ 1939ರಲ್ಲಿ 7.8 ತೀವ್ರತೆಯ ಭೂಕಂಪ (1939 Earthquake) ಕಾಣಿಸಿಕೊಂಡಿತ್ತು. ಆಗ ಪೂರ್ವ ಎರ್ಜಿಂಕನ್ ಪ್ರಾಂತ್ಯದಲ್ಲಿ ಸುಮಾರು 33 ಸಾವಿರ ಮಂದಿ ದಾರುಣವಾಗಿ ಸಾವಿಗೀಡಾಗಿದ್ದರು. ಎರ್ಜಿಂಕನ್ ಬಯಲು ಮತ್ತು ಕೆಲ್ಕಿಟ್ ನದಿ ಕಣಿವೆಯಲ್ಲಿ ತೀವ್ರ ಹಾನಿಯನ್ನುಂಟುಮಾಡಿತ್ತು. 360 ಕಿಮೀ ನಷ್ಟು ಭೂಪ್ರದೇಶವನ್ನು ಛಿದ್ರ-ಛಿದ್ರಗೊಳಿಸಿತ್ತು. ಈ ಬಗ್ಗೆ 2003ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯ (Harvard University) ಅಧ್ಯಯನ ಮಾಡಿತ್ತು. ಆ ನಂತರ ಸಂಭವಿಸಿದ ಅತಿದೊಡ್ಡ ದುರಂತ ಇದಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: 15 ವರ್ಷ ಏರೋಸ್ಪೇಸ್‌ನಲ್ಲಿ ತಯಾರಾಗಿದ್ದ ರಕ್ಷಣಾ ಸಾಮಾಗ್ರಿಗಳ 5 ಪಟ್ಟು ಕಳೆದ 8 ವರ್ಷಗಳಲ್ಲಿ ತಯಾರಾಗಿದೆ: ಮೋದಿ
Advertisement
ದಕ್ಷಿಣ ಟರ್ಕಿ, ಉತ್ತರ ಸಿರಿಯಾ, ಲೆಬನಾನ್, ಇಸ್ರೇಲ್‌ನಲ್ಲೂ ತೀವ್ರ ಕಂಪನ ಉಂಟಾಗಿದೆ. ಟರ್ಕಿಯ ದಿಯರ್‌ಬಕರ್, ಸಿರಿಯಾದ ಅಲೆಪ್ಪೀ, ಹುಮಾ ನಗರಗಳಲ್ಲಿ ಸಾವಿರಾರು ಕಟ್ಟಡ ನೆಲಸಮವಾಗಿವೆ. 7.8 ರಷ್ಟು ತೀವ್ರತೆಯ ಭೂಕಂಪದ ಬಳಿಕ ಗಂಟೆಗಳ ಅವಧಿಯಲ್ಲಿ 20ಕ್ಕೂ ಹೆಚ್ಚು ಬಾರಿ ಭೂಮಿ ಕಂಪಿಸಿದ್ದು, ಹೆಚ್ಚು ಸಾವು ನೋವಿಗೆ ಕಾರಣವಾಗಿದೆ. ಭೂಕಂಪ ಪೀಡಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
45 ದೇಶಗಳಿಂದ ನೆರವು: ಈಗಾಗಲೇ ಟರ್ಕಿ, ಸಿರಿಯಾಗೆ ವಿಶ್ವದ 45 ರಾಷ್ಟ್ರಗಳು ನೆರವು ಘೋಷಣೆ ಮಾಡಿವೆ. ಭಾರತ (India) ಸಹ ಎನ್‌ಡಿಆರ್‌ಎಫ್ (NDRF) ಮೊದಲ ತಂಡವನ್ನು ಕಳಿಸಿಕೊಟ್ಟಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k