ಅಂಕಾರ: ಸರಣಿ ಭೂಕಂಪಗಳಿಂದ ತತ್ತರಿಸುತ್ತಿರುವ ಟರ್ಕಿ (Turkey) ಹಾಗೂ ಸಿರಿಯಾ (Syria) ದೇಶದ ನೆರವಿಗೆ ವಿಶ್ವಬ್ಯಾಂಕ್ (World Bank) ಧಾವಿಸಿದ್ದು, 1.78 ಬಿಲಿಯನ್ ಡಾಲರ್ ನೆರವು ಘೋಷಣೆ ಮಾಡಿದೆ.
ಟರ್ಕಿ ಹಾಗೂ ಸಿರಿಯಾ ಮತ್ತೆ ಚೇತರಿಕೆ ಕಾಣಲು ಸಹಾಯ ಮಾಡುವ ಸಲುವಾಗಿ ವಿಶ್ವಬ್ಯಾಂಕ್ (World Bank) ನೆರವು ಘೋಷಣೆ ಮಾಡಿದೆ. ತಕ್ಷಣವೇ ಸಹಾಯ ಒದಗಿಸುತ್ತಿದ್ದೇವೆ ಎಂದು ವಿಶ್ವ ಬ್ಯಾಂಕ್ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ತಿಳಿಸಿದ್ದಾರೆ. ಇದನ್ನೂ ಓದಿ: Earthquakeː ಟರ್ಕಿಯಲ್ಲಿ ಸಿಲುಕಿರೋದು ಬೆಂಗಳೂರು ಟೆಕ್ಕಿಯಲ್ಲ- ಕನ್ನಡಿಗರ ರಕ್ಷಣೆಗೆ ಮುಂದಾದ ಸರ್ಕಾರ
Advertisement
Advertisement
ಈ ಬೆನ್ನಲ್ಲೇ ಅಮೆರಿಕ (USA) ಸಹ 70.19 ಕೋಟಿ ರೂ. ನೆರವು ಘೋಷಣೆ ಮಾಡಿದೆ. ಲಕ್ಷಾಂತರ ಜನರಿಗೆ ತುರ್ತಾಗಿ ಅಗತ್ಯವಿರುವ ಆಹಾರ, ಆಶ್ರಯ, ಆರೋಗ್ಯ ಸೇವೆಗಳನ್ನು ಪೂರೈಸಲು ನೆರವು ನೀಡಲಾಗುತ್ತಿದೆ ಎಂದು ಹೇಳಿದೆ.
Advertisement
ಸರಣಿ ಭೂಕಂಪಗಳಿಂದ (Earthquake) ತತ್ತರಿಸುತ್ತಿರುವ ಟರ್ಕಿಯಲ್ಲಿ ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿವೆ. ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರನ್ನ ರಕ್ಷಣೆ ಮಾಡುವ ಕೆಲಸ ಮಾಡಲಾಗುತ್ತಿದೆ. ರಕ್ಷಣಾ ಕಾರ್ಯಚರಣೆಯಲ್ಲಿ ಅಮೆರಿಕ, ರಷ್ಯಾ, ಚೀನಾ ಭಾರತದ ರಕ್ಷಣಾ ತಂಡಗಳು ಭಾಗಿಯಾಗಿವೆ. ಬದುಕುಳಿದರ ಶೋಧಕ್ಕಾಗಿ ಹೊಸ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ. ಇದನ್ನೂ ಓದಿ: Turkey, Syria Earthquakeː ಮೈಕ್ರೋಫೋನ್, ಡ್ರೋನ್, ರೊಬೋಟ್ ತಂತ್ರಜ್ಞಾನ ಬಳಸಿ ಜನರ ರಕ್ಷಣೆ
Advertisement
ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಥರ್ಮಲ್ ಕ್ಯಾಮೆರಾಗಳನ್ನ ಹೊಂದಿರುವ ಚಿಕ್ಕ ವಾಹನಗಳಿಂದ ಮೈಕ್ರೋಫೋನ್ ಕಳುಹಿಸಿ ಬದುಕಿರುವ ಜನರನ್ನು ಹುಡುಕಲಾಗುತ್ತಿದೆ. ಡ್ರೋನ್ (Drone) ಕ್ಯಾಮೆರಾಗಳು ಮತ್ತು ರೋಬೋಟ್ ಗಳನ್ನು ಬಳಸಲಾಗುತ್ತಿದೆ. ಸಣ್ಣ, ಅತಿಸಣ್ಣ ಪ್ರದೇಶಗಳಲ್ಲಿ ಆಕ್ಸಿಜನ್ ಪೈಪ್ಗಳನ್ನ (Oxygen Pipe) ಕಳುಹಿಸಿ ಉಸಿರಾಟದ ಮೂಲಕ ಜನರ ಇರುವಿಕೆಯನ್ನು ಖಚಿತಪಡಿಸಕೊಳ್ಳಲಾಗುತ್ತಿದೆ. ಗುರುವಾರ 44 ಗಂಟೆಗಳಿಂದ ಕಟ್ಟಡದ ಅವಶೇಷಗಳ ಅಡಿಯಲ್ಲಿದ್ದ ಬಾಲಕಿಯನ್ನು ರಕ್ಷಣೆ ಮಾಡಲಾಗಿದೆ.
ಮೃತರ ಸಂಖ್ಯೆ 21 ಸಾವಿರಕ್ಕೆ ಏರಿಕೆ: ಈ ನಡುವೆ ಟರ್ಕಿ ಮತ್ತು ಸಿರಿಯಾದಲ್ಲಿ ಸಾವನ್ನಪ್ಪಿದವರ ಸಂಖ್ಯೆ 21 ಸಾವಿರಕ್ಕೆ ಏರಿಕೆಯಾಗಿದೆ. ಸದ್ಯದಮಟ್ಟಿಗೆ ಟರ್ಕಿಯಲ್ಲಿ 17,674 ಮಂದಿ ಸಾವನ್ನಪ್ಪಿದ್ದರೆ, ಸಿರಿಯಾದಲ್ಲಿ ಕನಿಷ್ಠ 3,377 ಜನರು ಸಾವನ್ನಪ್ಪಿದ್ದಾರೆ. ಈವರೆಗೆ 70 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ಸುಮಾರು 3 ಸಾವಿರಕ್ಕೂ ಹೆಚ್ಚು ಕಟ್ಟಡಗಳು ನೆಲಕಚ್ಚಿವೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k