ನವದೆಹಲಿ: ಟರ್ಕಿಯಲ್ಲಿ (Turkey) ಸಂಭವಿಸಿದ ಪ್ರಬಲ ಭೂಕಂಪದಲ್ಲಿ ನಾಪತ್ತೆಯಾಗಿದ್ದ ಬೆಂಗಳೂರು (Bengaluru) ಮೂಲದ ಟೆಕ್ಕಿ ವಿಜಯ್ ಕುಮಾರ್ ಪಾಸ್‌ಪೋರ್ಟ್ ಪತ್ತೆಯಾಗಿದೆ. ಪೂರ್ವ ಟರ್ಕಿಯ ಅನಾಟೋಲಿಯಾ ಪ್ರದೇಶದ ಮಲತ್ಯದಲ್ಲಿರುವ ಅವಸರ್ ಹೋಟೆಲ್‌ನ ಅವಶೇಷಗಳ ತೆರವು ಕಾರ್ಯಾಚರಣೆ ವೇಳೆ ಪಾಸ್‌ಪೋರ್ಟ್ (Passport) ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
24 ಅಂತಸ್ತಿನ ಅವಸರ್ ಹೋಟೆಲ್‌ನ (Hotel) ಎರಡನೇ ಮಹಡಿಯಲ್ಲಿ ವಿಜಯ್ ಕುಮಾರ್ ತಂಗಿದ್ದ ಎನ್ನಲಾಗಿದ್ದು, ಅವರ ಪಾಸ್‌ಪೋರ್ಟ್ ಜೊತೆಗೆ ಕೆಲವು ವಸ್ತುಗಳು ಲಭ್ಯವಾಗಿವೆ. ಕಟ್ಟಡ ತೆರವು ಕಾರ್ಯಚರಣೆ ವೇಳೆ ವಸ್ತುಗಳು ಹೊರೆತು ಯಾವುದೇ ಮೃತದೇಹಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ವಿಜಯ್ ಕುಮಾರ್ ಇನ್ನು ಜೀವಂತವಾಗಿರಬಹುದು ಎಂದು ಭರವಸೆ ವ್ಯಕ್ತಪಡಿಸಲಾಗುತ್ತಿದೆ. ಇದನ್ನೂ ಓದಿ: ನಿರಾಣಿ ಬೆಂಬಲಿಗರಿಂದ ಮುಂದುವರಿದ ಗಿಫ್ಟ್ ಪಾಲಿಟಿಕ್ಸ್- ಸಕ್ಕರೆ ತಿರಸ್ಕರಿಸಿದ ಮತ್ತೊಬ್ಬ ವ್ಯಕ್ತಿ!
Advertisement
Advertisement
ಸದ್ಯ ಭಾರತದ ರಕ್ಷಣಾ ತಂಡಗಳು ವಿಜಯ್ ಕುಮಾರ್ ಹುಡುಕಾಟ ನಡೆಸಿದ್ದು, ಇನ್ನು ಅವರು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯ ಆಸ್ಪತ್ರೆಗಳಲ್ಲಿ ಅವರ ಹುಡುಕಾಟ ಮುಂದುವರಿದಿದೆ. ಉತ್ತರಾಖಂಡ್‌ನ ಪೌರಿ ಗರ್ವಾಲ್‌ನ ವಿಜಯ್ ಕುಮಾರ್ ಮತ್ತು ಬೆಂಗಳೂರು ಮೂಲದ ಕಂಪನಿಯೊಂದರ ಉದ್ಯೋಗಿಯಾಗಿದ್ದರು. ಸದ್ಯ ಡೆಹ್ರಾಡೋನ್‌ನಲ್ಲಿ ನೆಲೆಯಾಗಿರುವ ಕುಟುಂಬ ವಿಜಯ್ ಕುಮಾರ್ ಜೀವಂತವಾಗಿ ವಾಪಸ್ ಬರಲಿ ಎಂದು ಪ್ರಾರ್ಥಿಸುತ್ತಿದೆ. ಇದನ್ನೂ ಓದಿ: ದೇವಿ ಜಾತ್ರೆಗೆ ಹೋಗಿ ವಾಪಸ್ ಬರುವಾಗ ಅಪರಿಚಿತ ವಾಹನ ಡಿಕ್ಕಿ – ಮೂವರು ಸ್ಥಳದಲ್ಲೇ ಸಾವು
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k