ನವದೆಹಲಿ: ಪ್ರಬಲ ಭೂಕಂಪದಿಂದ ನಾಶಗೊಂಡಿರುವ ಟರ್ಕಿ (Turkey) ಯಲ್ಲಿ ಎನ್‍ಡಿಆರ್ ಎಫ್ (NDRF) ತಂಡ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಇಂದು ಎಂಟು ವರ್ಷದ ಬಾಲಕಿಯನ್ನು ರಕ್ಷಿಸಿದೆ. ಟರ್ಕಿಯ ನೂರ್ಡಗಿ, ಗಾಜಿಯಾಂಟೆಪ್‍ನಲ್ಲಿ ಭೂಕಂಪದಿಂದ ನೆಲಸಮವಾದ ಕಟ್ಟಡದ ಅವಶೇಷಗಳಡಿಯಲ್ಲಿ ಬಾಲಕಿ ಜೀವಂತವಾಗಿ ಸಿಲುಕಿದ್ದಳು.
#WATCH | India’s NDRF & Turkish Army rescue an 8-year-old girl who was stuck alive under rubble of a building flattened by the massive earthquake in Nurdagi, Gaziantep in Turkey.
So far 24,000 people are dead in Turkey & Syria earthquakes that led to devastation.
(Source: NDRF) pic.twitter.com/6NNAAAzKml
— ANI (@ANI) February 11, 2023
ಕಟ್ಟಡಗಳ ಅವಶೇಷಗಳಡಿಯಲ್ಲಿ ಸಿಲುಕಿದ್ದ ಬಾಲಕಿಯನ್ನು ಟರ್ಕಿಶ್ ಸೇನಾ ನೆರವಿನೊಂದಿಗೆ ವಿಶೇಷ ರಕ್ಷಣಾ ಕಾರ್ಯಾಚರಣೆ ಮಾಡಿದ ತಂಡ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಎನ್‍ಡಿಆರ್ ಎಫ್, ಕಠಿಣ ಪರಿಶ್ರಮದೊಂದಿಗೆ ಬಾಲಕಿಯನ್ನು ರಕ್ಷಿಸಿದೆ ಎಂದು ಫೋಟೋ ಹಂಚಿಕೊಂಡಿದೆ.
Advertisement
Advertisement
ಪ್ರಬಲ ಭೂಕಂಪದಿಂದಾಗಿ ಈವರೆಗೂ ಟರ್ಕಿ ಮತ್ತು ಸಿರಿಯಾ (Siriya) ದಲ್ಲಿ 24,000 ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಭೂಕಂಪದ ನಂತರ ಎರಡು ದೇಶಗಳಲ್ಲಿ ಕನಿಷ್ಠ 8,70,000 ಜನರಿಗೆ ತುರ್ತಾಗಿ ಆಹಾರದ ಅಗತ್ಯವಿದೆ. ಸಿರಿಯಾದಲ್ಲಿ ಭೂಕಂಪ 53 ಲಕ್ಷ ಜನರನ್ನು ನಿರಾಶ್ರಿತರನ್ನಾಗಿ ಮಾಡಿದೆ ಎಂದು ಯುಎನ್ ಎಚ್ಚರಿಸಿದೆ.
Advertisement
Advertisement
ಟರ್ಕಿ ಮತ್ತು ಸಿರಿಯಾಕ್ಕೆ ಅಂತಾರಾಷ್ಟ್ರೀಯ ಮಟ್ಟದಿಂದ ನೆರವು ಹರಿದು ಬರುತ್ತಿದೆ. ಯುನೈಟೆಡ್ ನೇಷನ್ಸ್ ವಲ್ರ್ಡ್ ಫುಡ್ ಪ್ರೋಗ್ರಾಂ ಟರ್ಕಿಯಲ್ಲಿ ಕನಿಷ್ಠ 590,000 ಮತ್ತು ಸಿರಿಯಾದಲ್ಲಿ 284,000 ಹೊಸದಾಗಿ ಸ್ಥಳಾಂತರಗೊಂಡ ಜನರಿಗೆ ಆಹಾರ ಪಡಿತರವನ್ನು ಒದಗಿಸಲು 635 ಕೋಟಿ ನೆರವಿಗೆ ಮನವಿ ಮಾಡಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k