ಟರ್ಕಿ ಸ್ಫೋಟ – ಸಾವಿನ ಸಂಖ್ಯೆ 6ಕ್ಕೆ ಏರಿಕೆ, ಶಂಕಿತ ಅರೆಸ್ಟ್

Advertisements

ಅಂಕಾರಾ: ಟರ್ಕಿಯ (Turkey) ಇಸ್ತಾಂಬುಲ್‌ನಲ್ಲಿ (Istanbul) ಭಾನುವಾರ ನಡೆದ ಭೀಕರ ಸ್ಫೋಟದಲ್ಲಿ (Blast) 6 ಜನರು ಸಾವನ್ನಪ್ಪಿದ್ದಾರೆ. 81 ಜನರು ಗಾಯಗೊಂಡಿದ್ದಾರೆ. ಇದೀಗ ಸ್ಫೋಟಕ್ಕೆ ಸಂಬಂಧಿಸಿದಂತೆ ಶಂಕಿತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಟರ್ಕಿಯ ಆಂತರಿಕ ಸಚಿವ ಸುಲೇಮಾನ್ ಸೊಯ್ಲು ಹೇಳಿದ್ದಾರೆ.

Advertisements

ಭಾನುವಾರ ಮಧ್ಯಾಹ್ನದ ವೇಳೆ ಇಸ್ತಾಂಬುಲ್‌ನ ಇಸ್ತಿಕ್‌ಲಾಲ್‌ನಲ್ಲಿರುವ (Istiklal) ಮಾರುಕಟ್ಟೆ ಪ್ರದೇಶದಲ್ಲಿ ಸ್ಫೋಟ ಸಂಭವಿಸಿತ್ತು. ಜನನಿಬಿಡ ಪ್ರದೇಶವಾದ್ದರಿಂದ ಹೆಚ್ಚಿನ ಸಂಖ್ಯೆಯ ಜನರು ಗಾಯಗೊಂಡಿದ್ದಾರೆ. 6 ಜನರು ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ.

Advertisements

ಇದೀಗ ಶಂಕಿತನನ್ನು ಪೊಲೀಸರು ಬಂಧಿಸಿದ್ದು, ದಾಳಿಯ ಹಿಂದಿನ ಉದ್ದೇಶ ಹಾಗೂ ಕೃತ್ಯದ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯ ಬಗ್ಗೆ ಭಯೋತ್ಪಾದನೆಯ ಶಂಕೆ ವ್ಯಕ್ತವಾಗಿದೆ. ಘಟನಾ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಇರಾನ್‌ನಲ್ಲಿ ಹಿಜಬ್ ವಿರೋಧಿ ಪ್ರತಿಭಟನೆ- ಮೊದಲ ಮರಣದಂಡನೆ ಶಿಕ್ಷೆ

ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಸ್ಫೋಟ ಸಂಭವಿಸಿದ ಸನ್ನಿವೇಶದ ವೀಡಿಯೋಗಳು ಹರಿದಾಡುತ್ತಿವೆ. ಜನನಿಬಿಡ ಪಾದಾಚಾರಿ ರಸ್ತೆಯಲ್ಲಿ ಸ್ಫೋಟ ಸಂಭವಿಸಿದ್ದು, ಜನರು ಭಾರೀ ಸದ್ದಿಗೆ ವಿಚಲಿತರಾಗಿ ಚೆಲ್ಲಾಪಿಲ್ಲಿಯಾಗಿರುವುದು ವೀಡಿಯೋದಲ್ಲಿ ಕಂಡುಬಂದಿದೆ. ಇದನ್ನೂ ಓದಿ: ಮತದಾರರ ಪಟ್ಟಿಯಲ್ಲಿ ಪಾಕಿಸ್ತಾನಿ ಮಹಿಳೆಯ ಹೆಸರು!

Advertisements

Live Tv

Advertisements
Exit mobile version