ಆರು ವರ್ಷದ ನಂತರ ಕಾರವಾರಕ್ಕೆ ಬಂದಿಳಿದ ಟುಪೋಲೆವ್ ಯುದ್ಧ ವಿಮಾನ

Public TV
3 Min Read
KARWAR TU142

ಕಾರವಾರ: ಆರು ವರ್ಷದ ಸತತ ಪ್ರಯತ್ನದ ಬಳಿಕ ಭಾರತೀಯ ನೌಕಾದಳದ ವಿಶ್ರಾಂತಿ ಯುದ್ಧ ವಿಮಾನ ಟುಪೋಲೆವ್ (TU-142) ಕೊನೆಗೂ ಕಾರವಾರ (Karwar) ಸೇರಿದೆ. ತಮಿಳುನಾಡಿನ (Tamil Nadu) ಅರಕ್ಕೋಡಮ್‌ನಲ್ಲಿರುವ ಐಎನ್‌ಎಸ್ ರಾಜೋಲಿಯಿಂದ ಬ್ಲೂ ಸ್ಕೈ ಸಂಸ್ಥೆಯು 50 ಟನ್ ತೂಕದ ಬಿಡಿಭಾಗಗಳನ್ನು 9 ಟ್ರಕ್ ಮೂಲಕ 5 ದಿನಗಳ ದೀರ್ಘ ಪ್ರಯಾಣದ ಬಳಿಕ ಕಾರವಾರಕ್ಕೆ ತರಲಾಗಿದೆ.

ರಷ್ಯಾ (Russia) ನಿರ್ಮಾಣದ ಟುಪೋಲೆವ್-142 ಯುದ್ಧ ವಿಮಾನ 1988ರಲ್ಲಿ ಭಾರತೀಯ ನೌಕಾದಳವನ್ನು ಸೇರ್ಪಡೆಗೊಂಡಿತು. 2017ರಲ್ಲಿ ಸೇವಾ ಅವಧಿ ಪೂರ್ಣಗೊಳಿಸಿದ ಬಳಿಕ ರಾಜೋಲಿಯ ನೌಕಾನೆಲೆಯಲ್ಲಿ ಇರಿಸಲಾಗಿತ್ತು. ಇದೇ ಮಾದರಿಯ ಯುದ್ಧ ವಿಮಾನವನ್ನು ವಿಶಾಖಪಟ್ಟಣಂ ವಸ್ತು ಸಂಗ್ರಹಾಲಯದಲ್ಲಿ ಇರಿಸಲಾಗಿದೆ. ಇದನ್ನೂ ಓದಿ: ನಾಪತ್ತೆಯಾದ ಯುವಕನ ಪತ್ತೆ ಮಾಡಿದ ಸಾಕುನಾಯಿ- ಗ್ರಾಮಸ್ಥರಿಂದ ಇಬ್ಬರ ಮೆರವಣಿಗೆ

ಟುಪೋಲೆವ್-142 ಯುದ್ಧ ವಿಮಾನ ಸೇನೆಯಿಂದ ನಿವೃತ್ತಿಯಾದ ಬಳಿಕ ಸಂಗ್ರಹಾಲಯ ಸ್ಥಾಪನೆಗೆ ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು. ಆ ವೇಳೆ ಹಲವು ರಾಜ್ಯಗಳು ವಿಮಾನವನ್ನು ತಮಗೆ ಹಸ್ತಾಂತರಿಸಲು ಕೇಂದ್ರದ ಮೇಲೆ ಒತ್ತಡ ಹೇರಿದ್ದವು. ಕಳೆದ 2020 ಮಾರ್ಚ್ನಲ್ಲಿ ಜಿಲ್ಲಾಡಳಿತ ಹಾಗೂ ಕದಂಬ ನೌಕಾನೆಲೆ ನಡುವೆ ಒಪ್ಪಂದ ಆಗಿತ್ತಾದರೂ ಸಾಗಾಟ ವೆಚ್ಚ ಭರಿಸುವುದು ಸೇರಿದಂತೆ ಇನ್ನಿತರ ಮಾತುಕತೆಯಿಂದ ಬಾಕಿ ಉಳಿದಿತ್ತು. ಇದನ್ನೂ ಓದಿ: ಆದೇಶ ಪಾಲನೆ ನಮ್ಮ ದೌರ್ಬಲ್ಯ ಅಲ್ಲ: ಸುತ್ತೂರು ಶ್ರೀ

2020 ಡಿಸೆಂಬರ್‌ನಲ್ಲಿ ವಿಮಾನ ಕಾರವಾರಕ್ಕೆ ಬರಬೇಕಿತ್ತು. ಆದರೆ ಕೋವಿಡ್ ಕಾರಣದಿಂದ ಹಾಗೇ ಉಳಿದುಕೊಂಡಿತ್ತು. ಆದರೆ ಈಗ ಯುದ್ಧ ವಿಮಾನದ ಬಿಡಿ ಭಾಗಗಳನ್ನು ಹೊತ್ತ 9 ಟ್ರಕ್‌ಗಳು ನಗರವನ್ನು ಪ್ರವೇಶ ಮಾಡಿವೆ. ಚಾಪೆಲ್ ಯುದ್ಧ ನೌಕೆ ಸಂಗ್ರಹಾಲಯದ ಎದುರು ಟ್ರಕ್‌ಗಳನ್ನು ನಿಲ್ಲಿಸಲಾಗಿದೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ಸೇನಾ ವಾಹನಗಳ ಮಾಹಿತಿ ರವಾನೆ – ಸೇನೆಯ ಮಾಜಿ ಸಿಬ್ಬಂದಿ ಅರೆಸ್ಟ್

ಭಾರತೀಯ ನೌಕಾಸೇನೆಯಲ್ಲಿ ಸುಮಾರು 3 ದಶಕಗಳ ಕಾಲ ಕಾರ್ಯನಿರ್ವಹಿಸಿ ನಿವೃತ್ತವಾಗಿರುವ ವಿಮಾನವನ್ನು ಕರ್ನಾಟಕಕ್ಕೆ ಮಂಜೂರು ಮಾಡಿ 6 ವರ್ಷ ಕಳೆದಿದೆ. ಇದನ್ನು ಇಲ್ಲಿನ ಟ್ಯಾಗೋರ್ ಕಡಲ ತೀರದ ಚಾಪೆಲ್ ಯುದ್ಧ ನೌಕಾ ವಸ್ತು ಸಂಗ್ರಹಾಲಯದ ಪಕ್ಕದಲ್ಲಿ ಇನ್ನೊಂದು ವಸ್ತು ಸಂಗ್ರಹಾಲಯವಾಗಿ ಮಾರ್ಪಡಿಸುವ ಯೋಜನೆ ರೂಪಿಸಲಾಗಿದೆ. ಅಲ್ಲದೇ ಚಾಪೆಲ್ ಯುದ್ಧ ನೌಕೆಯ ಪಕ್ಕದಲ್ಲೇ ಟುಪೋಲೆವ್ ಯುದ್ಧ ವಿಮಾನ ಇಡಲು ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅಡಿಪಾಯ ಸಹ ಹಾಲಾಗಿದೆ. ಅದರ ಬಿಡಿ ಭಾಗಗಳನ್ನು ಬಿಚ್ಚಿ, ಕಾರವಾರಕ್ಕೆ ತಂದು ಮರು ಜೋಡಣೆ ಮಾಡುವ ಜವಾಬ್ದಾರಿಯನ್ನು ಭಾರತೀಯ ನೌಕಾಸೇನೆ ವಹಿಸಿಕೊಂಡಿದೆ. ಇದನ್ನೂ ಓದಿ: ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ – ಸಾತೇರಿ ದೇವಿ ಮೂರ್ತಿಗೆ ಉಡಿಸಿದ ಸೀರೆ 1.06 ಲಕ್ಷ ರೂ.ಗೆ ಹರಾಜು

6 ಕೋಟಿಗೂ ಅಧಿಕ ವೆಚ್ಚ: ಟಿಯು-142 ಮ್ಯೂಸಿಯಂ ನಿರ್ಮಾಣಕ್ಕೆ ಈ ಹಿಂದೆ ಕರ್ನಾಟಕ ಸರ್ಕಾರ 2 ಕೋಟಿ ರೂ. ಮಂಜೂರು ಮಾಡಿದೆ. ನೆಲ, ಕಾಂಪೌಂಡ್ ಮುಂತಾದ ಮೂಲ ಸೌಕರ್ಯ ನಿರ್ಮಾಣಕ್ಕೆ ಅದನ್ನು ಬಳಸಿಕೊಳ್ಳಲು ಯೋಜಿಸಲಾಗಿದೆ. ಅದರ ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದೆ. ಸಾಕಷ್ಟು ಮನವಿ, ಬೇಡಿಕೆಗಳ ನಂತರ ಯುದ್ಧ ವಿಮಾನವನ್ನು ಬೇರ್ಪಡಿಸಿ ಸಾಗಿಸಿ, ಇಲ್ಲಿ ಮರು ಜೋಡಣೆ ಮಾಡುವ ಕಾರ್ಯಕ್ಕೆ ಸುಮಾರು 4 ಕೋಟಿ ರೂ. ಬೇಕಾಗಬಹುದು ಎಂದು ಯೋಜಿಸಲಾಗಿದೆ. ಇದನ್ನೂ ಓದಿ: ನಡ್ಡಾ ಪ್ರಾರ್ಥನೆ ವೇಳೆ ಗಣೇಶ ಪೆಂಡಾಲ್‍ನಲ್ಲಿ ಅಗ್ನಿ ದುರಂತ – ಪವಾಡದಂತೆ ಸುರಿದ ಮಳೆಯಿಂದ ತಪ್ಪಿದ ಅನಾಹುತ

Web Stories

Share This Article