ಮುಂಬೈ: ಕಿರುತೆರೆ ನಟಿ ತುನಿಷಾ ಶರ್ಮಾ (Tunisha Sharma) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಕುಟುಂಬಸ್ಥರು ಮಾಡಿರುವ ಆರೋಪಗಳನ್ನು ನಟ ಶೀಜಾನ್ ಖಾನ್ (Sheezan Khan) ಸಹೋದರಿ ಶಫಕ್ ನಾಜ್ (Shafaq Naaz) ತಳ್ಳಿಹಾಕಿದ್ದಾರೆ.
ನಟಿ ಕುಟುಂಬಸ್ಥರು ನನ್ನ ಸಹೋದರನ ಮೇಲೆ ಮಾಡಿರುವ ಆರೋಪಗಳು ಆಧಾರರಹಿತ ಮತ್ತು ಸುಳ್ಳಿನಿಂದ ಕೂಡಿದೆ. ತುನಿಷಾ ಶರ್ಮಾಳನ್ನು ಇಸ್ಲಾಂಗೆ ಮತಾಂತರವಾಗುವಂತೆ ಯಾರೂ ಕೂಡ ಒತ್ತಾಯಿಸಿರಲಿಲ್ಲ. ಆಕೆ ಹಿಜಬ್ ಧರಿಸಿದ್ದಳು ಎನ್ನುವುದು ಕೂಡ ಸುಳ್ಳು ಎಂದು ಶಫಕ್ ನಾಜ್ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ನಟಿ ತುನಿಷಾ ಆತ್ಮಹತ್ಯೆ: ಬಾಯ್ ಫ್ರೆಂಡ್ ಶಿಜಾನ್ ಜೊತೆಗಿನ ವಾಗ್ವಾದದ ದೃಶ್ಯ ಪತ್ತೆ
Advertisement
Advertisement
ಶೀಜಾನ್ ಯಾವತ್ತೂ ಡ್ರಗ್ಸ್ ಸೇವಿಸುತ್ತಿರಲಿಲ್ಲ. ತುನಿಷಾ ಶರ್ಮಾ ಅವರ ತಾಯಿ ಮಾಡಿರುವ ಆರೋಪ ಸಂಪೂರ್ಣ ತಪ್ಪು. ಈ ಆರೋಪಗಳು ಆಧಾರರಹಿತ, ಸುಳ್ಳಿನಿಂದ ಕೂಡಿದೆ ಎಂದು ತಿಳಿಸಿದ್ದಾರೆ.
Advertisement
ತುನಿಷಾಳ ತಾಯಿ ಮಗಳನ್ನು ಸದಾ ನಿರ್ಲಕ್ಷಿಸುತ್ತಿದ್ದರು. ಅವರು ತುನಿಷಾಳನ್ನು ಕೇರ್ ಮಾಡುತ್ತಿರಲಿಲ್ಲ. ಈ ವಿಚಾರವನ್ನು ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ. ಈ ಕಾರಣಗಳಿಂದಾಗಿ ತುನಿಷಾ ಬಾಲ್ಯದಿಂದಲೂ ಖಿನ್ನತೆಗೆ ಒಳಗಾಗುತ್ತಿದ್ದಳು ಎಂದು ಶಫಕ್ ನಾಜ್ ಆರೋಪಿಸಿದ್ದಾರೆ. ಇದನ್ನೂ ಓದಿ: ಆತ್ಮಹತ್ಯೆಗೂ 2 ನಿಮಿಷ ಮುನ್ನ ಬಾಯ್ ಫ್ರೆಂಡ್ ಗೆ ಕಾಲ್ ಮಾಡಿದ್ದ ತುನಿಷಾ ಶರ್ಮಾ
Advertisement
ತುನಿಷಾ ಹಿಜಬ್ ಧರಿಸುವಂತೆ ಮಾಡಿದ್ದರು ಅನ್ನೋದೆಲ್ಲ ಸುಳ್ಳು. ಚಿತ್ರೀಕರಣದ ಭಾಗವಾಗಿದ್ದ ಕಾರ್ಯಕ್ರಮದ ಸೆಟ್‌ನಿಂದ ಹಿಜಬ್ ಧರಿಸಿರುವ ತುನಿಷಾ ಚಿತ್ರವು ಎಲ್ಲೆಡೆ ವೈರಲ್ ಆಗುತ್ತಿದೆ. ಆಕೆ ಚಿತ್ರೀಕರಣಕ್ಕೆ ಹಿಜಬ್ ಧರಿಸಿದ್ದ ದೃಶ್ಯ ಅದು ಎಂದು ಸಾಕ್ಷಿ ಸಮೇತ ನಾಜ್ ಸ್ಪಷ್ಟಪಡಿಸಿದ್ದಾರೆ.