ಮುಂಬೈ: ಕಿರುತೆರೆ ನಟಿ ತುನಿಷಾ ಶರ್ಮಾ (Tunisha Sharma) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹನಟ ಶಿಜಾನ್ ಖಾನ್ (Sheezan Khan) ವಿರುದ್ಧ ʼಲವ್ ಜಿಹಾದ್ʼ (Love Jihad) ಆರೋಪಗಳು ಕೇಳಿ ಬರುತ್ತಿವೆ. ನಟಿ ತುನಿಷಾ ಅವರ ಚಿಕ್ಕಪ್ಪ ಪವನ್ ಶರ್ಮಾ ಅವರು ಶಿಜಾನ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.
ನಮ್ಮ ಮಗಳು ತುನಿಷಾ ಶರ್ಮಾ, ಶಿಜಾನ್ ಖಾನ್ ಭೇಟಿಯಾದ ಬಳಿಕ ಆಕೆ ನಡೆ, ಉಡುಗೆ-ತೊಡುಗೆಯಲ್ಲಿ ಸಾಕಷ್ಟು ಬದಲಾವಣೆಯಾಗಿತ್ತು. ತುನಿಷಾ ಹಿಜಬ್ (Hijab) ಕೂಡ ಧರಿಸುತ್ತಿದ್ದಳು. ಆಕೆ ಲವ್ ಜಿಹಾದ್ಗೆ ಬಲಿಯಾಗಿದ್ದಾಳೆ ಎಂದು ಪವನ್ ಶರ್ಮಾ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ‘ಲವ್ ಜಿಹಾದ್’ ಗೆ ಹೆದರಿಕೊಂಡು ತುನಿಷಾ ಶರ್ಮಾಳಿಂದ ದೂರವಾಗಿದ್ದ ಬಾಯ್ ಫ್ರೆಂಡ್
Advertisement
Advertisement
ಶಿಜಾನ್ ಇತರ ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಇಂದು ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಸಾಧ್ಯವಿರುವ ಎಲ್ಲ ಕೋನಗಳಿಂದ ಅವರು ತುನಿಷಾ ಸಾವಿನ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
Advertisement
Advertisement
ತುನಿಷಾ ಸಾವನ್ನಪ್ಪಿದ ದಿನ ಶಿಜಾನ್ ತನ್ನ ಮತ್ತೊಬ್ಬ ಗೆಳತಿಯೊಂದಿಗೆ ಒಂದರಿಂದ ಒಂದೂವರೆ ಗಂಟೆಗಳ ಕಾಲ ಚಾಟ್ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಶಿಜಾನ್ ವಿಚಾರಣೆ ವೇಳೆ ಸಹಕರಿಸುತ್ತಿಲ್ಲ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ನಟಿ ತುನಿಷಾ ಶರ್ಮಾ ಗರ್ಭಿಣಿ ಆಗಿದ್ದು ನಿಜ: ಗೆಳತಿ ನೀಡಿದ ಶಾಕಿಂಗ್ ನ್ಯೂಸ್
ಕೆಲ ದಿನಗಳ ಹಿಂದಷ್ಟೇ ಕಿರುತೆರೆ ನಟಿ ತುನಿಷಾ ಶರ್ಮಾ ಶೂಟಿಂಗ್ ಸೆಟ್ನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಹನಟ ಶಿಜಾನ್ ಖಾನ್ನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ನಟನ ವಿರುದ್ಧ ತುನಿಷಾ ಅವರ ಪೋಷಕರು ಲವ್ ಜಿಹಾದ್ ಆರೋಪ ಮಾಡಿದ್ದಾರೆ.