ಶಿವಮೊಗ್ಗ: ಕೇಂದ್ರ ಕಾರಾಗೃಹದ (Central Jail) ಮೇಲೆ ತುಂಗಾನಗರ ಠಾಣೆಯ ಪೊಲೀಸರು ದಾಳಿ ನಡೆಸಿದ್ದು, ಬೀಡಿ, ಮೊಬೈಲ್ (Mobile)) ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಕಾರಾಗೃಹದ ಎಲ್ಲಾ ಬ್ಲಾಕ್‌ನ ಸೆಲ್‌ಗಳಲ್ಲಿ ಪೊಲೀಸರು ತಪಾಸಣೆ ನಡೆಸಿದ್ದಾರೆ. ತುಂಗಾನಗರ ಮೆಗಾ ಬ್ಲ್ಯಾಕ್‌ನ ಕೊಠಡಿ ಸಂಖ್ಯೆ 12ರ ಮುಂಭಾಗದ ಕೈ ತೋಟದಲ್ಲಿ ಗಿಡಗಳ ಮಧ್ಯೆ ತಪಾಸಣೆ ನಡೆಸಿದ ಪೊಲೀಸರಿಗೆ ಅನೇಕ ವಸ್ತುಗಳ ಸಿಕ್ಕಿವೆ. ಇದನ್ನೂ ಓದಿ: ನಮ್ಮನ್ನು ಕ್ಷಮಿಸಿಬಿಡಿ ಪಾಕಿಸ್ತಾನ – ಅಫ್ಘಾನ್ ವಿರುದ್ಧ ಸೋಲಿನ ಬಳಿಕ ಅಬ್ದುಲ್ಲಾ ಶಫೀಕ್ ಭಾವುಕ ಟ್ವೀಟ್
Advertisement
Advertisement
ಮಣ್ಣು ಅಗೆದು ಪರಿಶೀಲಿಸಿದಾಗ ಪ್ಲಾಸ್ಟಿಕ್ ಕವರ್ ನಲ್ಲಿ ಮುಚ್ಚಿಟ್ಟಿದ್ದ ಮೊಬೈಲ್ ಪತ್ತೆಯಾಗಿದೆ. ಪತ್ತೆಯಾದ ಮೊಬೈಲ್ ನಲ್ಲಿ ಯಾವುದೇ ಸಿಮ್ ಇರಲಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ತಮ್ಮ ಖಜಾನೆ ವೃದ್ಧಿಗೆ ಕನಕಪುರ ಹೆಸರು ಹೇಳಿ ಹೊಸ ನಾಟಕ ಶುರು ಮಾಡಿದ್ದಾರೆ: ಡಿಕೆಶಿ ವಿರುದ್ಧ ಹೆಚ್‌ಡಿಕೆ ಗುಡುಗು
Advertisement
Advertisement
ಇನ್ನೂ ಸೆಲ್ ನಂ.36ರ ಸಮೀಪ ಗಿಡಗಳ ಮಧ್ಯೆ ಮಂಗಳೂರು ಸ್ಪೆಷಲ್ ಬೀಡಿಗಳು, ಬೆಂಕಿಪೊಟ್ಟಣ, ಯುಎಸ್‌ಬಿ ಚಾರ್ಜರ್, ಚಿಕ್ಕ ಬ್ಲೇಡ್, ಕತ್ತರಿ ಪತ್ತೆಯಾಗಿದೆ. ಇವುಗಳನ್ನೆಲ್ಲಾ ಪೊಲೀಸರು ವಶಕ್ಕೆ ಪಡೆದಿದ್ದು, ತುಂಗಾನಗರ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ‘ಜೇಮ್ಸ್’ ನಿರ್ದೇಶಕನ ಜೊತೆ ಕೈಜೋಡಿಸಿದ ಅಣ್ಣಾವ್ರ ಮೊಮ್ಮಗ ಧೀರೆನ್
Web Stories