ಬೆಂಗಳೂರು: ತುಂಗಾಭದ್ರಾ ಜಲಾಶಯದ ಗೇಟೊಂದು ಕೊಚ್ಚಿಹೋದ ಬೆನ್ನಲ್ಲೇ ರಾಜ್ಯದ ಉಳಿದ ಜಲಾಶಯಗಳ ಸುರಕ್ಷತೆ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಹೀಗಾಗಿ ರಾಜ್ಯ ಸರ್ಕಾರ ತಜ್ಞರ ತಂಡವನ್ನು ಎಲ್ಲಾ ಡ್ಯಾಂಗಳಿಗೂ ಕಳಿಸಿ ವರದಿ ತರಿಸಿಕೊಳ್ಳಲು ಮುಂದಾಗಿದೆ.
ಇದಕ್ಕಾಗಿ ತಜ್ಞರ ಸಮಿತಿ ರಚಿಸಲು ಕಸರತ್ತು ನಡೆಸಿದೆ. ಇದರ ಮಧ್ಯೆಯೇ, ಶಿವಮೊಗ್ಗದ ತುಂಗಾ ಜಲಾಶಯದ ಎಂಟನೇ ಗೇಟ್‌ನ ವೈಯರ್ ರೋಪ್‌ನಲ್ಲಿ ತೊಂದರೆ ಕಾಣಿಸಿಕೊಂಡಿತ್ತು ವಿಚಾರ ಬಯಲಾಗಿದೆ. ಸಮಸ್ಯೆ ಗೊತ್ತಾದ ಕೂಡಲೇ ಎಚ್ಚೆತ್ತ ಜಲಾಶಯದ ಎಂಜಿನಿಯರ್‌ಗಳು, ಸಮಸ್ಯೆ ಇರುವ ಗೇಟನ್ನು ಎತ್ತದೇ ಇರಲು ತೀರ್ಮಾನಿಸಿದ್ದಾರೆ.
22 ಗೇಟ್‌ಗಳ ಪೈಕಿ 8ನೇ ಗೇಟ್ ಹೊರತುಪಡಿಸಿ ಉಳಿದ ಗೇಟ್‌ಗಳಿಂದ ನೀರನ್ನು ಹೊರಕ್ಕೆ ಬಿಡುತ್ತಿದ್ದಾರೆ. ಒತ್ತಡ ಹಾಕಿ 8ನೇ ಗೇಟ್ ಎತ್ತಲು ಹೋದರೆ ಅನಾಹುತ ಸಂಭವಿಸಬಹುದು ಎಂಬ ಕಾರಣಕ್ಕೆ ಹೀಗೆ ಮಾಡಿದ್ದಾರೆ. ಜಲಾಶಯದ ನೀರಿನ ಮಟ್ಟ ಕಡಿಮೆಯಾದ ಮೇಲೆ 8ನೇ ಗೇಟ್ ದುರಸ್ತಿಗೆ ಡ್ಯಾಂ ಅಧಿಕಾರಿಗಳು ಪ್ಲಾನ್ ಮಾಡಿದ್ದಾರೆ.
ಹಳೆ ಮೈಸೂರು ಭಾಗದ ಜೀವನಾಡಿ, 92 ವರ್ಷದ ಕೆಆರ್‌ಎಸ್ ಡ್ಯಾಂನ ಸುರಕ್ಷಿತವಾಗಿದ್ಯಾ? ಕೆಆರ್‌ಎಸ್ ಡ್ಯಾಂನಲ್ಲಿ ಬಳಸಿರುವ ತಂತ್ರಜ್ಞಾನ ಯಾವುದು? ಬೇರೆ ಡ್ಯಾಂಗಳಿಗೂ ಕೆಆರ್‌ಎಸ್‌ಗೂ ಇರುವ ವ್ಯತ್ಯಾಸವೇನು?
ಕೆಆರ್‌ಎಸ್ ಡ್ಯಾಂ ಸುರಕ್ಷಿತವಾಗಿದ್ಯಾ?
* 1932ರಲ್ಲಿ ಕೆಆರ್‌ಎಸ್ ಡ್ಯಾಂ ನಿರ್ಮಾಣ
* ಸರ್.ಎಂ.ವಿ ದೂರದೃಷ್ಟಿ.. ಡ್ಯಾಂ ಇಂದಿಗೂ ಸುಭದ್ರ.
* ಚುರ್ಕಿ ಗಾರೆ, ಕಲ್ಲು, ಕಬ್ಬಿಣ ಬಳಸಿ ನಿರ್ಮಾಣ
* ಹಾವು ಹರಿಯುವ ವಿನ್ಯಾಸದಲ್ಲಿದೆ ಕೆಆರ್‌ಎಸ್ ಡ್ಯಾಂ.
* ಕೆಆರ್‌ಎಸ್ ಡ್ಯಾಂನಲ್ಲಿರೋದು ವರ್ಟಿಕಲ್ ಗೇಟ್
* ಒಟ್ಟು 162 ವರ್ಟಿಕಲ್ ಗೇಟ್ ಹೊಂದಿರುವ ಡ್ಯಾಂ
* ಈವರೆಗೂ 2 ಹಂತದಲ್ಲಿ ಎಲ್ಲಾ ಗೇಟ್ ಬದಲಾವಣೆ
* 10 ವರ್ಷದ ಹಿಂದೆ +60, +80 ಗೇಟ್‌ಗಳ ಚೇಂಜ್
* ಕಳೆದ 2 ವರ್ಷದಲ್ಲಿ ಒಟ್ಟು 136 ಗೇಟ್ ಬದಲಾವಣೆ
* ಕೆಆರ್‌ಎಸ್ ಡ್ಯಾಂ ಗೇಟ್‌ಗಳಿಗೆ ಇಲ್ಲ ಸ್ಟಾಪ್‌ಲಾಗ್ ಸಿಸ್ಟಂ
* ಆದರೆ, ಡ್ಯಾಂ ಗೇಟ್‌ಗಳು ಕಿತ್ತು ಬರುವ ಸಾಧ್ಯತೆ ಬಹಳ ಕಡಿಮೆ