ಬಳ್ಳಾರಿ: ತುಂಗಭದ್ರಾ ಜಲಾಶಯಕ್ಕೆ (Tungabhadra Dam) ಜಲಕಂಟಕ ಎದುರಾಗಿದ್ದು, ಜಲಾಶಯದ ನೀರು ಸಂಪೂರ್ಣ ಮಲೀನವಾಗಿ, ಹಸಿರು ಬಣ್ಣಕ್ಕೆ (Green Color) ತಿರುಗಿದೆ.
ಇದೇ ಹಸಿರು ಬಣ್ಣಕ್ಕೆ ತಿರುಗಿದ, ಕುಡಿಯಲು ಯೋಗ್ಯವಲ್ಲದ ನೀರೇ ಮೂರು ರಾಜ್ಯಗಳ 8 ಜಿಲ್ಲೆಗಳ ಜನರಿಗೆ ಅನಿವಾರ್ಯ ಎನ್ನುವಂತಾಗಿದೆ. ಈಗಾಗಲೇ ಹಲವು ಬಾರಿ ತುಂಗಭದ್ರಾ ಜಲಾಶಯದ ನೀರು ಕುಡಿಯಲು ಯೋಗ್ಯವಲ್ಲ ಎಂಬ ವರದಿ ಬಂದಿದೆ. ಇದನ್ನೂ ಓದಿ: 1 ಲಕ್ಷ ಪಾವತಿಸಿ ಶೂಟಿಂಗ್ | ಗೋಪಾಲಸ್ವಾಮಿ ಬೆಟ್ಟದ ಜಾಗ ಯಾರಿಗೆ ಸೇರಿದ್ದು? ಈಗ ಮತ್ತೊಂದು ವಿವಾದ
ಜಲಾಶಯದ ನೀರು ಮಲೀನಗೊಂಡಿದ್ದರಿಂದ ಬೃಹತ್ ಗಾತ್ರದ ಮೀನುಗಳು ಆಮ್ಲಜನಕದ ಕೊರತೆಯಿಂದ ಸಾಯುತ್ತಿವೆ. ಹೀಗೇ ಸತ್ತು ಬಿದ್ದ ಮೀನುಗಳು ಜಲಾಶಯದ ಹಿನ್ನೀರು ಪ್ರದೇಶಕ್ಕೆ ತೇಲಿ ಬರುತ್ತಿವೆ. ಇದನ್ನೂ ಓದಿ: ಬಾಂಬ್ ದಾಳಿಗೂ ಜಗ್ಗಲ್ಲ – ಮುಂಬೈ ದಾಳಿಕೋರನನ್ನ ಕರೆತರಲು ಸಿದ್ಧವಾಯ್ತು NIA ಬುಲೆಟ್ ಪ್ರೂಫ್ ಕಾರು
ಕಾರ್ಖಾನೆಗಳು ಹಾಗೂ ನಗರಗಳ ತ್ಯಾಜ್ಯವನ್ನು ನದಿಗೆ ಹರಿಬಿಟ್ಟಿದ್ದರಿಂದ ನೀರು ಹಸಿರುಬಣ್ಣಕ್ಕೆ ತಿರುಗಿದೆ.