ಕೊಪ್ಪಳ: ತುಗಭದ್ರಾ ಜಲಾಶಯದ (Tungabhadra Dam) 19ನೇ ಕ್ರಸ್ಟಗೇಟ್ (Crest Gate) ಕೊಚ್ಚಿಕೊಂಡು ಹೋಗಿದ್ದು ದೊಡ್ಡ ಮಟ್ಟದ ಆತಂಕವನ್ನು ಹೆಚ್ಚಿಸಿತ್ತು. ಆದರೆ ವಾರದ ನಂತರ ಜಲಾಶಯಕ್ಕೆ ಸ್ಟಾಪ್ ಲಾಗ್‌ಗೇಟ್ ಅಳವಡಿಸುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದರು. ಸದ್ಯ ಡ್ಯಾಂ ಗೆ ಒಳಹರಿವು ಹೆಚ್ಚಾಗ್ತಿದ್ದು, ಕಳೆದ 4 ದಿನಗಳಲ್ಲಿ 7 ಟಿಎಂಸಿ ನೀರು ಹರಿದು ಬಂದಿದೆ. ಮತ್ತೊಮ್ಮೆ ಡ್ಯಾಂ ತುಂಬುವ ಭರವಸೆ ಮೂಡಿದೆ.
Advertisement
ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿಯಿರುವ ಜಲಾಶಯದಿಂದ ಒಂದೇ ವಾರದಲ್ಲಿ 41 ಟಿಎಂಸಿಗೂ ಹೆಚ್ಚು ನೀರು ವ್ಯರ್ಥವಾಗಿ ಹರಿದು ಹೋಗಿತ್ತು. ಸತತ ಶ್ರಮದಿಂದ ಸ್ಟಾಪ್‌ಲಾಗ್ ಗೇಟ್‌ನ ಐದು ಎಲಿಮೆಂಟ್‌ಗಳನ್ನು ಅಳವಡಿಸಿ, ಹರಿಯುವ ನೀರನ್ನು ತಡೆಯುವಲ್ಲಿ ಗೇಟ್ ನಿಪುಣ ಕನ್ನಯ್ಯ ನಾಯ್ಡು ಮತ್ತು ತಂಡ ಸಫಲವಾಗಿದೆ. ಡ್ಯಾಂ ನೀರು ಖಾಲಿಯಾಗುವ ಆತಂಕದಲ್ಲಿದ್ದ ಈ ಭಾಗದ ಜನರ ಆತಂಕವನ್ನು ದೂರ ಮಾಡಿದ್ದಾರೆ. ಸದ್ಯ ಒಳಹರಿವು ಹೆಚ್ಚಾಗಿದ್ದು ಜನರಲ್ಲಿ ಡ್ಯಾಂ ತುಂಬುವ ಆಶಾಭಾವನೆ ಮೂಡಿದೆ. ಇದನ್ನೂ ಓದಿ: ಮೀನು ಸಂಸ್ಕರಿಸಿ ಯಶಸ್ವಿ ಉದ್ಯಮಿಯಾದ ಕೊಡಗಿನ ಮಹಿಳೆ – PMFME ಯೋಜನೆಯ ಲಾಭ ನೀವೂ ಪಡೆಯಿರಿ!
Advertisement
Advertisement
ಆಗಸ್ಟ್ 17 ರಂದು ಜಲಾಶಯದಲ್ಲಿ 71 ಟಿಎಂಸಿ ನೀರು ಇತ್ತು. ಆದರೆ ಕಳೆದ ನಾಲ್ಕು ದಿನಗಳಲ್ಲಿ ಪ್ರತಿ ದಿನ ಒಂದೂವರೆ ಟಿಎಂಸಿ ಅಷ್ಟು ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಇಂದು ಕೂಡ 31,033 ಕ್ಯೂಸೆಕ್ ನೀರು ಒಳ ಹರಿವು ಇದ್ದು, ಜಲಾಶಯದ ನೀರಿನ ಸಂಗ್ರಹ 78 ಟಿಎಂಸಿಗೆ ಹೆಚ್ಚಳವಾಗಿದೆ. ನಾಲ್ಕು ದಿನದಲ್ಲಿ ಏಳು ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ.
Advertisement
ಜಲಾಶಯದ ಗೇಟ್ ಸಂಪೂರ್ಣವಾಗಿ ಬಂದ್ ಆಗಿರುವುದು ಒಂದು ಕಡೆ ಖುಷಿ ಹೆಚ್ಚಾದ್ರೆ ಇನ್ನೊಂದು ಕಡೆ ಮತ್ತೆ ಜಲಾಶಯಕ್ಕೆ ನೀರು ಬರುತ್ತಿರುವುದು ಜನರ ಸಂತಸವನ್ನು ಇಮ್ಮಡಿಗೊಳಿಸಿದೆ. ಇದನ್ನೂ ಓದಿ: ಅಂಗಡಿ ಬಳಿ ಕುಳಿತಿದ್ದ ಆರ್‌ಜೆಡಿ ನಾಯಕನ ಗುಂಡಿಕ್ಕಿ ಹತ್ಯೆ
ಕ್ಯುಸೆಕ್ ಮತ್ತು ಟಿಎಂಸಿ ಎಂದರೆ ಎಷ್ಟು?
ಕ್ಯೂಸೆಕ್ ಎಂಬುದು Cubic feet per Secondನ ಹ್ರಸ್ವರೂಪ ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯುಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯುಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯುಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.