ಕೊಪ್ಪಳ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್ ನೀರಿನ ರಭಸಕ್ಕೆ ಕೊಚ್ಚಿ (TB Dam Gate Broken) ಹೋಗಿರುವುದು ರಾಜ್ಯಾದ್ಯಂತ ಸುದ್ದಿಯಾಗಿದೆ. ಸ್ಥಳಕ್ಕೆ ಬೆಂಗಳೂರು, ಹೈದರಾಬಾದ್ ಮೂಲದ ತಾಂತ್ರಿಕ ತಜ್ಞರ ತಂಡ ಭೇಟಿ ನೀಡಿ ಪರಿಶೀಲಿಸಲು ಮುಂದಾಗಿದೆ. ಕ್ರಸ್ಟ್ ಗೇಟ್ ಕಳಚಿಕೊಂಡ ಹಿನ್ನೆಲೆ 19ನೇ ಗೇಟ್‌ನಿಂದ ನೀರು ಮುಗಿಲೆತ್ತರಕ್ಕೆ ಪುಟಿಯುತ್ತಿದೆ. ಒಂದೇ ಗೇಟ್ ನಿಂದ ಬರೋಬ್ಬರಿ 35 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದೆ. ನೀರಿನ ರಭಸ ಹೆಚ್ಚಾಗುತ್ತಿದ್ದಂತೆ ಜಲಾಶಯದ 32 ಗೇಟ್‌ಗಳ ಪೈಕಿ 28 ಗೇಟ್‌ಗಳನ್ನ ತೆರೆಯಲಾಗಿದೆ. ಇದರಿಂದ 30 ಗ್ರಾಮಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದ್ದು, 4 ಜಿಲ್ಲೆಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಸದ್ಯದ ಬೆಳವಣಿಗೆಗಳು ಹೇಗಿವೆ ಎಂಬುದನ್ನು ತಿಳಿಯಲು ಮುಂದೆ ಓದಿ..
Advertisement
ಹೈದರಾಬಾದ್‌ನಿಂದ ಹೊಸ ಗೇಟ್:
ತುಂಗಭದ್ರಾ ಜಲಾಶಯದ (Tungabhadra Reservoir) 19ನೇ ಕ್ರಸ್ಟ್‌ಗೇಟ್ ಕೊಚ್ಚಿ ಹೋದ ಹಿನ್ನೆಲೆಯಲ್ಲಿ ಹೈದರಾಬಾದ್ (Hyderabad) ಮೂಲದ ಕಂಪನಿಯಿಂದ ಹೊಸ ಗೇಟ್ ತಂದು ಅಳವಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಆದ್ರೆ ಹೊಸಗೇಟ್ ಸಿದ್ಧವಾಗಿ, ಅಳವಡಿಸಬೇಕಾದ್ರೆ ವಾರಕ್ಕೂ ಹೆಚ್ಚು ಸಮಯ ಬೇಕಾಗಬಹುದು. ಅಲ್ಲದೇ ದುರಸ್ತಿ ಕಾರ್ಯ ವಿಳಂಭವಾದರೂ ಡ್ಯಾಂನಲ್ಲಿ ನೀರು ಖಾಲಿಯಾಗುವ ಸಾಧ್ಯತೆಯಿದೆ ಅಂತ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
Advertisement
Advertisement
ಆಂಧ್ರ, ತೆಲಂಗಾಣದ ಜಿಲ್ಲೆಗಳಿಗೂ ಸಂಕಷ್ಟ:
ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕಳಚಿಹೋಗಿರುವುದಿಂದ ಗೇಟ್ ರಿಪೇರಿ ಮಾಡಬೇಕಾದ್ರೆ 60 ಟಿಎಂಸಿ ನಷ್ಟು ನೀರನ್ನು ಹೊರಹರಿಸಬೇಕಾಗಿದೆ ಎಂದು ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದ್ದಾರೆ. ಇದರಿಂದ ಸುಮಾರು 30 ಗ್ರಾಮಗಳಿಗೆ ನೀರು ನುಗ್ಗುವ ಭೀತಿ ಉಂಟಾಗಿದೆ. ಲಕ್ಷಾಂತರ ರೈತರಿಗೂ ಸಂಕಷ್ಟ ತಂದೊಡ್ಡಿದೆ. ಅಲ್ಲದೇ ಈ ಬೆಳವಣಿಗೆಯಿಂದ ಕರ್ನಾಟಕ ಮಾತ್ರವಲ್ಲ, ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಜನರಿಗೂ ಸಂಕಷ್ಟ ಉಂಟಾಗಿದೆ.
Advertisement
ಆಂಧ್ರ ಮತ್ತು ತೆಲಂಗಾಣದ ಆದೋನಿ, ಕರ್ನೂಲ, ಕಡಪ, ಮಹೆಬೂಬ ನಗರ ಜಿಲ್ಲೆಗಳಿಗೂ ಇಲ್ಲಿನ ತುಂಗಭದ್ರಾ ಜಲಾಶಯ ಜೀವನಾಡಿಯಾಗಿದೆ. ನದಿ, ಕಾಲುವೆ ಮೂಲಕ ಈ ಎರಡು ರಾಜ್ಯಗಳಿಗೆ ನೀರು ಸರಬರಾಜಾಗುತ್ತದೆ. ನದಿ ನೀರು ಖಾಲಿಯಾದರೇ ಕೃಷಿ ಜಮೀನುಗಳಿಗೂ ನೀರು ಸಿಗದ ಪರಿಸ್ಥಿತಿ ಅಲ್ಲಿನ ಜಿಲ್ಲೆಗಳಿಗೂ ಕಾಡಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಕ್ರಮಗಳ ಕುರಿತು ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳ ಅಧಿಕಾರಿಗಳು ಕರ್ನಾಟಕದ ಉನ್ನತ ಅಧಿಕಾರಿಗಳು ಮತ್ತು ಟಿಬಿ ಡ್ಯಾಂ ಬೋರ್ಡ್ ಅಧಿಕಾರಿಗಳ ಜೊತೆ ಸಂಪರ್ಕ ಸಾಧಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಬೆಳೆಗೆ ನೀರಿನ ಕೊರೆತೆ ಸಾಧ್ಯತೆ:
ಕಲ್ಯಾಣ ಕರ್ನಾಟಕದ ಕೊಪ್ಪಳ, ವಿಜಯನಗರ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳಿಗೆ ಈ ಡ್ಯಾಂ ಆಧಾರವಾಗಿದ್ದು, 6 ಲಕ್ಷ ಹೆಕ್ಟೇರ್ ಬೆಳೆಗೆ ನೀರಿನ ಸಂಪರ್ಕ ಕಲ್ಪಿಸುತ್ತದೆ. ಆದ್ರೆ 105 ಟಿಎಂಸಿ ಸಾರ್ಮಥ್ಯದ ತುಂಗಭದ್ರಾ ಜಲಾಶಯದಲ್ಲೀಗ 60 ಟಿಎಂಸಿ ನೀರು ಹೊರಹರಿಸಬೇಕಿರುವುದರಿಂದ ಒಂದು ಬೆಳೆಗೆ ನೀರಿನ ಕೊರೆತೆ ಉಂಟಾಗಲಿದೆ ಎಂದು ರೈತರು ಆತಂಕದಲ್ಲಿದ್ದಾರೆ.