– ನಾಳೆಗೆ ಗೇಟ್ ಅಳವಡಿಕೆ ಕಾರ್ಯ ಮುಂದೂಡಿಕೆ
ಬಳ್ಳಾರಿ: ತುಂಗಭದ್ರಾ ಜಲಾಶಯದ (Tungabhadra Dam) 19ನೇ ಗೇಟ್ ಕೊಚ್ಚಿ ಹೋಗಿ ಐದು ದಿನಗಳಾಗಿದ್ದು, ಇಂದು ಆರಂಭಗೊಂಡಿದ್ದ ಜಲಾಶಯಕ್ಕೆ ತಾತ್ಕಾಲಿಕ ಗೇಟ್ ಅಳವಡಿಸುವ ಕಾರ್ಯ ಸ್ಥಗಿತಗೊಂಡಿದೆ. ಎರಡು ಮೂರು ಬಾರಿ ಪ್ರಯತ್ನಿಸಿ ತಜ್ಞರು ವಿಫಲರಾಗಿದ್ದಾರೆ. ಗೇಟ್‍ನಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆ ಸಿಬ್ಬಂದಿ ಸ್ಥಗಿತಗೊಳಿಸಿದ್ದಾರೆ. ಇದೀಗ ಶುಕ್ರವಾರ ಗೇಟ್ ಅಳವಡಿಕೆ ಕಾರ್ಯ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಸ್ಟಾಪ್ ಲಾಗ್ ಗೇಟ್ ಕೂರಿಸುವಾಗ ಸಣ್ಣ ಮಟ್ಟದ ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಈ ವೇಳೆ ನೀರಿಗಿಳಿದು ತಾಂತ್ರಿಕ ಸಿಬ್ಬಂದಿ ಸಮಸ್ಯೆ ಸರಿಪಡಿಸಿ ಕೆಲಸ ಆರಂಭಿಸಿದ್ದರು. ಅಲ್ಲದೇ ಎರಡು ಬೃಹತ್ ಕ್ರೇನ್‍ಗಳ ಮೂಲಕ ಸ್ಟಾಪ್ ಲಾಗ್ ಗೇಟ್ ಇಳಿಸಿ, ಇದೇ ಮಾದರಿಯಲ್ಲಿ 5 ಎಲಿಮೆಂಟ್‍ಗಳನ್ನು ಇಳಿಸಿ ಕೂರಿಸುವ ಯೋಜನೆ ಹಾಕಿಕೊಂಡಿದ್ದರು.
Advertisement
Advertisement
ಕಾರ್ಯಚರಣೆಯಲ್ಲಿ 80ಕ್ಕೂ ಹೆಚ್ಚು ಸಿಬ್ಬಂದಿ ಪಾಲ್ಗೊಂಡಿದ್ದಾರೆ. ಮೊದಲ ಎಲಿಮೆಂಟ್ ಅಳವಡಿಕೆ ಯಶಸ್ವಿಯಾದಲ್ಲಿ 25 ಟಿಎಂಸಿ ನೀರು ಜಲಾಶಯದಿಂದ ಹೊರಹೋಗುವುದನ್ನು ತಪ್ಪಿಸಿದಂತಾಗುತ್ತದೆ. ಈ ಮಧ್ಯೆ ನಾಳೆ ಹೊತ್ತಿಗೆಲ್ಲಾ ಶುಭ ಸುದ್ದಿ ಕೊಡುತ್ತೇನೆ ಎಂದು ಡ್ಯಾಂ ಗೇಟ್ ನಿಪುಣ ಕನ್ನಯ್ಯ ನಾಯ್ಡು ಭರವಸೆ ನೀಡಿದ್ದರು. ಇದೊಂದು ದೊಡ್ಡ ಚಾಲೇಂಜ್ ಆಗಿದ್ದು, ಇದೇ ಮೊದಲ ಬಾರಿಗೆ ಈ ರೀತಿ ಪ್ರಯತ್ನ ಮಾಡತ್ತಿದ್ದೇವೆ ಎಂದಿದ್ದರು.
Advertisement
ಸ್ಥಳದಲ್ಲೇ ಬೀಡು ಬಿಟ್ಟಿರುವ ತಜ್ಞ ಕನ್ನಯ್ಯ ನಾಯ್ಡು (Kannaiah Naidu) ನೇತೃತ್ವದ ತಂಡ ಈ ಕಾರ್ಯವನ್ನು ಶುಕ್ರವಾರ ಮುಂದುವರಿಸಲಿದೆ.