ತುಮಕೂರು: ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಒಡೆತನದ ಸಿದ್ದಾರ್ಥ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಯುವ ಕಾಂಗ್ರೆಸ್ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮೋದಿಪರ ಘೋಷಣೆ ಕೂಗಿದ್ದಾರೆ.
ಜಿಲ್ಲಾ ಯುವ ಕಾಂಗ್ರೆಸ್ “ವಿಭಿನ್ನ ವಿಚಾರಗಳ-ಮುಖಾ ಮುಖಿ” ಹೆಸರಿನಲ್ಲಿ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ವೇಳೆ ಮೋದಿ ಆಡಳಿತ ಅವಧಿಯಲ್ಲಿ ನಿರುದ್ಯೋಗ ಹೆಚ್ಚಾಗಿದೆ. ರಫೇಲ್ ಹಗರಣ ನಡೆದಿದೆ ಎಂಬೆಲ್ಲಾ ಆರೋಪಗಳ ಮೇಲೆ ಸಂವಾದ ನಡೆಯುತ್ತಿತ್ತು. ಈ ವೇಳೆ ವಿದ್ಯಾರ್ಥಿಗಳು ಮೋದಿ ಮೋದಿ ಎಂದು ಕೂಗಿ ಕಾರ್ಯಕ್ರಮ ಆಯೋಜಕರಿಗೆ ಮುಖಭಂಗ ಮಾಡಿದ್ದಾರೆ.
ಸಂವಾದದ ವೇಳೆ ಎದ್ದುನಿಂತ ವಿದ್ಯಾರ್ಥಿಗಳು ನಿರುದ್ಯೋಗ ಸಮಸ್ಯೆ ಕೇವಲ ಐದು ವರ್ಷದಲ್ಲ. ಸ್ವಾತಂತ್ರ್ಯ ಬಂದಾಗಿನಿಂದಲೂ ಇದೆ. ನೀವ್ಯಾಕೆ ಮೋದಿ ಮೇಲೆ ಆರೋಪ ಮಾಡುತ್ತೀರಿ ಎಂದು ತಿರುಗೇಟು ನೀಡಿದ್ರು. ಇದೇ ವೇಳೆ ವಿದ್ಯಾರ್ಥಿಗಳ ಸಹಾಯಕ್ಕೆ ಬಂದ ಪ್ರಾಂಶುಪಾಲ ರವಿಕುಮಾರ್, ಮನಮೋಹನ್ ಸಿಂಗ್ ಕಾಲದಲ್ಲಿ ಪೆಟ್ರೋಲ್ ರೇಟ್ ಜಾಸ್ತಿಯಾದ್ರೆ ಅದನ್ನ ಸಮರ್ಥಿಸಿಕೊಳ್ಳುತ್ತೀರಿ. ಈಗ ಜಾಸ್ತಿಯಾದರೆ ಕಾರಣ ಕೇಳ್ತೀರಾ ಇದ್ಯಾವ ಸೀಮೆ ನ್ಯಾಯ ಎಂದು ಸಂವಾದ ಸಲಹೆಗಾರ ಚೇತನ್ ರೆಡ್ಡಿ ಮರು ಪ್ರಶ್ನೆ ಕೇಳಿದ್ರು.
ಪ್ರಾಂಶುಪಾಲರು ಟಾಂಗ್ ಕೊಡುತಿದ್ದಂತೆಯೇ ವಿದ್ಯಾರ್ಥಿಗಳು ಚಪ್ಪಾಳೆ ಹೊಡೆದು “ಮೋದಿ ಮೋದಿ” ಎಂದು ಘೋಷಣೆ ಕೂಗಿದ್ರು. ಇದರಿಂದ ಕಾರ್ಯಕ್ರಮ ಆಯೋಜಕರಿಗೆ ಮುಜುಗರ ಉಂಟಾಯಿತು.
https://www.youtube.com/watch?v=Whv5zlI1jmw
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv