ತುಮಕೂರು: ಜಿಲ್ಲೆಯ ಬೈಪಾಸ್ ರಸ್ತೆಯಲ್ಲಿ ಉಗ್ರರು ಕಾಣಿಸಿಕೊಂಡಿದ್ದಾರೆ. ಇಂಡಿಯನ್ ಆರ್ಮಿ ತಂಡ ನಾಲ್ವರ ಮೇಲೆ ದಾಳಿ ನಡೆಸಿದೆ. ಓರ್ವ ಉಗ್ರ ಹತನಾಗಿದ್ದು, ಇನ್ನುಳಿದ ಮೂವರನ್ನು ಬಂಧಿಸಲಾಗಿದೆ ಎಂಬ ಸುಳ್ಳು ಸುದ್ದಿಯೊಂದು ತುಮಕೂರು ಜನತೆಯನ್ನು ಬೆಚ್ಚಿಬೀಳಿಸಿದೆ.
ಸೈನಿಕರು ಕಾರ್ಯಾಚರಣೆ ಮಾಡುವ ಮಾದರಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರಿಂದ ಸಾರ್ವಜನಿಕರು ಇನ್ನಷ್ಟು ಆತಂಕಗೊಂಡಿದ್ದಾರೆ. ಆದರೆ ಅಸಲಿಗೆ ಇದು ತಿರುಪತಿ ಪೊಲೀಸರು ಉಗ್ರರ ದಾಳಿಯಾದರೆ ಯಾವ ರೀತಿಯ ಕಾರ್ಯಾಚರಣೆ ಮಾಡಬೇಕು ಎಂಬ ಕುರಿತಂತೆ ಮಾಡಿದ ಅಣಕು ಪ್ರದರ್ಶನ.
Advertisement
Advertisement
ಕೆಲ ಕಿಡಿಗೇಡಿಗಳು ಈ ವಿಡಿಯೋಗೆ ಸುಳ್ಳು ಕಥೆ ಕಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಆತಂಕಗೊಳಿಸಿದ್ದಾರೆ. ಈ ಕುರಿತು ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ ತುಮಕೂರು ಎಸ್ಪಿ ವಂಶಿ ಕೃಷ್ಣ, ಇದೊಂದು ಸುಳ್ಳು ಸುದ್ದಿಯಾಗಿದ್ದು, ಯಾರು ಆತಂಕ ಪಡಬಾರದು. ಈ ರೀತಿ ಸುಳ್ಳು ಸುದ್ದಿ ಹರಿಡಿದವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv