ತುಮಕೂರ: 108 ಸಿಬ್ಬಂದಿಯ ಲಂಚಕ್ಕೆ ಡೆಂಘೀ ಪೀಡಿತ ಬಾಲಕನೊಬ್ಬ ಬಲಿಯಾಗಿರುವ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೈಎನ್ ಹಳ್ಳಿಯಲ್ಲಿ ನಡೆದಿದೆ.
ವೆಂಕಟಸ್ವಾಮಿ-ಸುಗುಣಮ್ಮ ದಂಪತಿಯ ಮಗನಾದ ಶ್ರೀನಿಧಿ(8) ಮೃತ ಬಾಲಕ. ಶ್ರೀನಿಧಿ ಕಳೆದ ಮೂರ್ನಾಲ್ಕು ದಿನಗಳಿಂದ ಡೆಂಘೀ ಜ್ವರದಿಂದ ಬಳಲುತ್ತಿದ್ದ. ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸಲಹೆ ನೀಡಿದ್ದರು.
ಈ ವೇಳೆ 108 ಸಿಬ್ಬಂದಿಗೆ ಮೃತ ಶ್ರೀನಿಧಿ ಪೋಷಕರು ತುರ್ತಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಮನವಿ ಮಾಡಿದ್ದಾರೆ. ಸಮಯ ಸಾಧಕ 108 ಸಿಬ್ಬಂದಿ ಹಣ ಕೊಟ್ಟರೆ ಮಾತ್ರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವುದಾಗಿ ಎಂದು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.
- Advertisement
ಕೊನೆಗೂ 108 ಸಿಬ್ಬಂದಿ 2ಗಂಟೆ ತಡವಾಗಿ ಬಾಲಕನನ್ನ ತುಮಕೂರು ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಆ ವೇಳೆಗಾಗಲೇ ಬಾಲಕನ ಸ್ಥಿತಿ ತೀರಾ ಹದಗೆಟ್ಟಿದ್ದು, ವೈದ್ಯರು ಬಾಲಕನನ್ನ ಕೂಡಲೇ ಬೆಂಗಳೂರಿಗೆ ರವಾನಿಸುವಂತೆ ಹೇಳಿದ್ದಾರೆ. ಹಾಗಾಗಿ ಬಾಲಕನನ್ನ ಬೆಂಗಳೂರಿಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲಿ ಬಾಲಕ ಮೃತಪಟ್ಟಿದ್ದಾನೆ.
- Advertisement