ನಿರಂತರ ಮಳೆಯಿಂದ ಹೆಚ್ಚಿದ ಒಳಹರಿವು – ತುಮಕೂರಿನ ಮಾರ್ಕೋನಹಳ್ಳಿ ಜಲಾಶಯ ಭರ್ತಿ

Public TV
1 Min Read
TMK Dam

ತುಮಕೂರು: ನಿರಂತರ ಮಳೆಯಿಂದಾಗಿ (Rainfall) ರಾಜ್ಯಾದ್ಯಂತ ವರುಣನ ಆರ್ಭಟ ಮುಂದುವರಿದಿದೆ. ಕಳೆದ ಎರಡು-ಮೂರು ದಿನಗಳಿಂದ ನಿರಂತರ ಮಳೆಯಿಂದಾಗಿ ಒಳಹರಿವು ಹೆಚ್ಚಳವಾಗಿದ್ದು, ತುಮಕೂರು ಜಿಲ್ಲೆ ಕುಣಿಗಲ್‌ ತಾಲೂಕಿನ ಮಾರ್ಕೋನಹಳ್ಳಿ ಜಲಾಶಯ (Markonahalli dam) ಭರ್ತಿಯಾಗಿದೆ. ಇದು ಸ್ಥಳೀಯ ರೈತರ ಮೊಗದಲ್ಲಿ ಮಂದಹಾಸ ತರಿಸಿದೆ.

ಸತತ ಮಳೆಯಿಂದಾಗಿ ಕಳೆದ ಮೂರು ದಿನಗಳಿಂದ ಜಲಾಶಯಕ್ಕೆ 1,527 ಕ್ಯುಸೆಕ್‌ ಒಳಹರಿವು ಹೆಚ್ಚಿದೆ. ಈ ಹಿನ್ನೆಲೆಯಲ್ಲಿ 2.4 ಟಿಎಂಸಿ ಸಂಗ್ರಹ ಸಾಮರ್ಥ್ಯದ ಡ್ಯಾಂ ಸಂಪೂರ್ಣ ಭರ್ತಿಯಾಗಿದ್ದು, ಎರಡು ಸ್ವಯಂ ಚಾಲಿತ ಸೈಫನ್ ಲಾಕ್‌ ಗೇಟ್‌ ಮೂಲಕ ನೀರು ಹೊರಕ್ಕೆ ಹರಿಸಲಾಗುತ್ತಿದೆ. ಇದನ್ನೂ ಓದಿ: ಸಲ್ಮಾನ್‌ ಖಾನ್‌ಗೆ ಮತ್ತೆ ಬೆದರಿಕೆ – ಬಿಷ್ಣೋಯ್‌ ಜೊತೆಗಿನ ದ್ವೇಷ ಕೊನೆಗೊಳಿಸಲು 5 ಕೋಟಿಗೆ ಬೇಡಿಕೆ

TMK Dam 2

ಎರಡು ಸ್ವಯಂ ಚಾಲಿತ ಸೈಫನ್ ಗೇಟ್‌ ಮೂಲಕ ಶಿಂಷಾ ನದಿಗೆ ನೀರು ಹರಿಸಲಾಗುತ್ತಿದೆ. ಆದ್ದರಿಂದ ಮಾರ್ಕೋನಹಳ್ಳಿ, ಕಾಡುಶೆಟ್ಟಿಹಳ್ಳಿ, ಬಿಸಿನೆಲೆ, ತೊರೆಹಳ್ಳಿ ಸೇರಿದಂತೆ ನದಿ ಪಾತ್ರದ ಗ್ರಾಮಗಳಲ್ಲಿರುವ ಜನರು ಎಚ್ಚರಿಕೆಯಿಂದ ಇರುವಂತೆ ತಹಶೀಲ್ದಾರ್ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಜೈಲಿನಲ್ಲಿರೋ ದರ್ಶನ್‌ಗೆ ಮತ್ತೊಂದು ಸಂಕಷ್ಟ: ಪ್ರೊಡ್ಯೂಸರ್‌ಗೆ ಬೆದರಿಕೆ ಕೇಸ್‌ಗೆ ಮರುಜೀವ

ದಾವಣಗೆರೆಯಲ್ಲಿ ಮಳೆ ಅವಾಂತರ:
ರಾಜ್ಯಾದ್ಯಂತ ಹಿಂಗಾರು ಮಳೆ ಅಬ್ಬರ ಮುಂದುವರಿದಿದೆ. ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಗೆ ದಾವಣಗೆರೆ ನಲುಗಿ ಹೋಗಿದೆ. ಹರಿಹರದ ಕಾಳಿದಾಸ ನಗರ, ಬೆಂಕಿನಗರ, ಪ್ರಶಾಂತ್ ನಗರದಲ್ಲಿ ನೂರಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಅಹೋರಾತ್ರಿ ಇಲ್ಲಿನ ನಿವಾಸಿಗಳು ಜೀವ ಕೈಯಲ್ಲಿ ಹಿಡಿದು ಕಾಲ ಕಳೆಯುವಂತಾಗಿದೆ. ಮನೆಯ ವಸ್ತುಗಳೆಲ್ಲಾ ನೀರಿನಲ್ಲಿ ಚಿಲ್ಲಾಪಿಲ್ಲಿ ಆಗಿವೆ. ದಾವಣಗೆರೆ-ಹರಪನಹಳ್ಳಿ ರಾಜ್ಯ ಹೆದ್ದಾರಿಯಲ್ಲಿನ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ನಗರದ ಹಲವೆಡೆ ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದ ಪರಿಣಾಮ ವಾಹನಗಳು ನೀರಿನಲ್ಲಿ ಮುಳುಗಡೆ ಆಗಿದ್ದವು. ಹರಿಹರ ಪಟ್ಟಣದ ಭೀಮ ನಗರದಲ್ಲಿ ಮನೆ ಗೋಡೆಯ ಸಿಮೆಂಟ್ ಇಟ್ಟಿಗೆ ಬಿದ್ದು ಮಗು ಸಾವು ಬದುಕಿನ ಮಧ್ಯ ಹೋರಾಡ್ತಿದೆ. ಇನ್ನೂ ನೀರು ನುಗ್ಗಿದ ಪ್ರದೇಶಗಳಿಗೆ ಶಾಸಕರು, ಅಧಿಕಾರಿಗಳು ಭೇಟಿ ನೀಡಿದ್ರು.

Share This Article