ತುಮಕೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಇಂದು ಎಡೆಯೂರು ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಈ ವೇಳೆ ಪರಿಚಾರಕರು ಪಾದಪೂಜೆ ಮಾಡಿರುವ ಪ್ರಸಂಗ ನಡೆದಿದೆ.
ಹೌದು. ಮುಖ್ಯಮಂತ್ರಿಯವರು ಎಡೆಯೂರು ಸಿದ್ಧಲಿಂಗೇಶ್ವರ ದೇವಸ್ಥಾನದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮ ಹಾಗೂ ಪತ್ನಿ ಮೈತ್ರಾ ದೇವಿ ಹೆಸರಲ್ಲಿ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಲು ಆಗಮಿಸಿದ್ದರು. ಈ ವೇಳೆ ಸಿಎಂ ಪುತ್ರ ರಾಘವೇಂದ್ರ, ವಿಜಯೇಂದ್ರ, ಸೊಸೆಯಂದಿರರು, ಮೊಮ್ಮಕ್ಕಳು, ಹೆಣ್ಣು ಮಕ್ಕಳಾದ ಉಮಾದೇವಿ, ಅರುಣಾ ದೇವಿ ಉಪಸ್ಥಿತರಿದ್ದರು.
Advertisement
Advertisement
ಈ ವೇಳೆ ಬಿಎಸ್‍ವೈ ಅವರು ದೇವಮಾನವರಾಗಿದ್ದು, ಎಡೆಯೂರು ಸಿದ್ಧಲಿಂಗೇಶ್ವರ ದೇವಸ್ಥನಾದಲ್ಲಿ ಸಿಎಂಗೆ ಪಾದಪೂಜೆ ಮಾಡಲಾಯಿತು. ಪೂಜೆ ಮುಗಿಸಿ ಹೊರಬಂದ ಸಿಎಂ ಬಿಎಸ್‍ವೈ, ಎಡೆಯೂರು ದೇವಾಲಯ ಆವರಣ ವೇದಿಕೆ ಕಾರ್ಯಕ್ರಮಕ್ಕೆ ತೆರಳಿ ಸುಮಾರು 10 ಕೋಟಿ ಮೊತ್ತದ ಕಾಮಗಾರಿಗೆ ಶಂಕುಸ್ಥಾಪನೆ ಹಾಗೂ ಎಡೆಯೂರು ಸಿದ್ದಲಿಂಗೇಶ್ವರಸ್ವಾಮಿ ದೇವಾಲಯದ ನವೀಕರಣ ಕಾಮಗಾರಿಗೆ ಚಾಲನೆ ನೀಡಿದರು. ಈ ಕಾರ್ಯಕ್ರಮವನ್ನು ಜಿಲ್ಲಾಡಳಿತ ಏರ್ಪಡಿಸಿತ್ತು.
Advertisement
Advertisement
ಈ ವೇಳೆ ಸಂಸದ ಬಸವರಾಜು, ಕುಣಿಗಲ್ ಶಾಸಕ ಡಾ.ರಂಗನಾಥ್, ಸಿಎಂ ಪುತ್ರ ರಾಘವೇಂದ್ರ, ವಿಜಯೇಂದ್ರ, ಡಿಸಿ ಸೇರಿ ಅನೇಕರು ಭಾಗಿಯಾಗಿದ್ದರು.