ತುಮಕೂರು: ತಾಯಿಯೋರ್ವಳು ತನ್ನ ವಿಕಲಚೇತನ ಮಗುವಿನ ವೇತನಕ್ಕಾಗಿ ಮಗನನ್ನು ಕಚೇರಿ ಕೌಂಟರ್ ಕೆಳಗಡೆ ಮಲಗಿಸಿ ಪರಿಪರಿಯಾಗಿ ಕೇಳಿಕೊಂಡ್ರೂ ಅಲ್ಲಿಯ ಸಿಬ್ಬಂದಿಗಳು ಕ್ಯಾರೆ ಎನ್ನದ ಅಮಾನವೀಯ ಘಟನೆಯೊಂದು ಜಿಲ್ಲೆಯ ಕುಣಿಗಲ್ ತಾಲೂಕು ಕಚೇರಿಯಲ್ಲಿ ನಡೆದಿದೆ.
ಪಾವಸಂದ್ರ ಗ್ರಾಮದ ಮಹಿಳೆ ಕುಮಾರಿ ತನ್ನ 7 ವರ್ಷದ ಮಗ ಹರೀಶನಿಗೆ ಅಂಗವಿಕಲ ವೇತನಕ್ಕಾಗಿ ಅರ್ಜಿ ಹಾಕಲು ಬಂದಿದ್ದರು. ಮಗುವನ್ನು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸೊಂಟದ ಮೇಲೆ ಎತ್ತಿಕೊಂಡು ಸಿಬ್ಬಂದಿಗಳ ಬಳಿ ಮಾಹಿತಿ ಕೇಳಿದ್ದಾರೆ. ಆದರೂ ಯಾರೂ ಈ ಬಡ ಮಹಿಳೆ ಮಾತು ಕೇಳಿಲ್ಲ. ಸೊಂಟ ಸೋತು ಬಂದಾಗ ಕಚೇರಿ ಕೌಂಟರ್ ಕೆಳಗೆ ಮಗುವನ್ನು ಮಲಗಿಸಿ ಪರಿಪರಿಯಾಗಿ ಕೇಳಿಕೊಂಡರೂ ಆಗಲೂ ಅರೆಬರೆ ಮಾಹಿತಿ ನೀಡಿದ್ದಾರೆ.
Advertisement
Advertisement
ಇದನ್ನು ಗಮನಿಸಿದ ಕರ್ನಾಟ ರಕ್ಷಣಾ ವೇದಿಕೆ ಕಾರ್ಯಕರ್ತರ ಮಂಜುನಾಥ್ ಮಹಿಳೆ ಸಹಾಯಕ್ಕೆ ಧಾವಿಸಿದ್ದಾರೆ. ತಾಲೂಕು ಕಚೇರಿ ಸಿಬ್ಬಂದಿಗಳಿಗೆ ತರಾಟೆಗೆ ತೆಗೆದುಕೊಂಡು ಅಂಗವಿಕಲ ವೇತನದ ಅರ್ಜಿ ಹಾಕಲು ಸಹಾಯ ಮಾಡಿದ್ದಾರೆ. ಈ ನಡುವೆ ಒಂದೂವರೆ ವರ್ಷದ ಹಿಂದೆಯೇ ಮಧ್ಯವರ್ತಿ ಕೆಂಪಣ್ಣ ಎನ್ನುವ ವ್ಯಕ್ತಿ ಅಂಗವಿಕಲ ವೇತನ ಕೊಡಿಸುವುದಾಗಿ ಹೇಳಿ 1300 ರೂ ವಸೂಲಿ ಮಾಡಿದ್ದಾನಂತೆ. ಆತನಿಂದ ಕೆಲಸ ಆಗದೇ ಇದ್ದಾಗ ವಿಕಲಚೇತನ ಮಗುವನ್ನೇ ಎತ್ತಿಕೊಂಡು ತಾಲೂಕು ಕಚೇರಿಗೆ ಬಂದಿದ್ದು ಕರುಳು ಚುರ್ ಎನಿಸುತ್ತಿತ್ತು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews