Connect with us

Crime

ವಿದ್ಯುತ್ ತಂತಿ ಮೇಲೆ ಬಿದ್ದ ಗಾಳಿಪಟ- ತೆಗೆಯಲು ಹೋದ ವ್ಯಕ್ತಿ ಭಸ್ಮ

Published

on

ತುಮಕೂರು: ವಿದ್ಯುತ್ ತಂತಿ ಮೇಲೆ ಬಿದ್ದ ಗಾಳಿಪಟ ತೆಗೆಯಲು ಹೋಗಿ ವ್ಯಕ್ತಿಯೊಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ತುಮಕೂರಿನ ಸದಾಶಿವನಗರ 6ನೇ ಮುಖ್ಯರಸ್ತೆಯಲ್ಲಿ ನಡೆದಿದೆ.

50 ವರ್ಷದ ಅಪ್ಸಲ್ ಮೃತ ದುರ್ದೈವಿ. ಅಪ್ಸಲ್ ಹೈಟೆನ್ಷನ್ ವೈರ್ ತಗುಲಿ ಸಾವಗೀಡಾಗಿದ್ದಾರೆ. ಈ ಘಟನೆಯನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಗಾಳಿಪಟ ಹಾರಿಸೋ ವೇಳೆ ಅದು ವೈರ್‍ಗೆ ಸಿಕ್ಕಿಹಾಕಿಕೊಂಡಿತ್ತು. ಈ ವೈರ್ ನಿಂದ ಗಾಳಿಪಟ ಬಿಡಿಸಲು ಅಪ್ಸಲ್ ಹೋಗಿದ್ದರು. ಪರಿಣಾಮ ಹೈಟೆನ್ಷನ್ ವೈರ್ ತಗುಲಿ ಸ್ಥಳದಲ್ಲೇ ಸುಟ್ಟುಕರಕಲಾಗಿದ್ದಾರೆ.

ಘಟನೆಯಲ್ಲಿ ಮಗನ ಎಡಗೈಗೆ ಕರೆಂಟ್ ತಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ದುರ್ಘಟನೆ ತಿಲಕ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Click to comment

Leave a Reply

Your email address will not be published. Required fields are marked *