ತುಮಕೂರು: ವಿಚಿತ್ರ ರೋಗಕ್ಕೆ ನೂರಾರು ಕುರಿಗಳು ಬಲಿಯಾಗಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ನಿರುವಗಲ್ ಗೊಲ್ಲರಹಟ್ಟಿಯಲ್ಲಿ ಕಳೆದ ಒಂದು ತಿಂಗಳಿನಿಂದ ಕುರಿಗಳು ವಿಚಿತ್ರ ಕಾಯಿಲೆಯಿಂದ ಸಾವನ್ನಪ್ಪುತ್ತಿದೆ. ಇದರಿಂದಾಗಿ ರೈತರು ಆತಂಕಕ್ಕೊಳಗಾಗಿದ್ದಾರೆ. ಕೃಷ್ಣಮೂರ್ತಿ, ನಿಂಗಯ್ಯ, ಪರಮೇಶ್, ರಾಘವೇಂದ್ರ, ಬಾಲಯ್ಯ, ದೊಡ್ಡ ಈರಯ್ಯ ಎನ್ನುವವರಿಗೆ ಸೇರಿದ ನೂರಾರು ಕುರಿಗಳು ಸಾವನ್ನಪ್ಪಿದೆ.
Advertisement
Advertisement
ನೂರಾರು ಕುರಿಗಳು ಸಾವನ್ನಪ್ಪಿದರೂ ರೈತರ ಕಷ್ಟಕ್ಕೆ ಪಶುಸಂಗೋಪನಾ ಇಲಾಖೆ ಸ್ಪಂದಿಸದೇ ನಿರ್ಲಕ್ಷ್ಯವಹಿಸಿದೆ. ಅಷ್ಟೇ ಅಲ್ಲದೆ ಕುರಿಗಳಿಗೆ ಚಿಕಿತ್ಸೆ ನೀಡಲು ಬಂದಿಲ್ಲ. ವೈದ್ಯರೂ ಹಳ್ಳಿಗೆ ಬರುವುದಿಲ್ಲ ಎಂದು ಸತಾಯಿಸುತ್ತಿದ್ದಾರೆ. ಜೊತೆಗೆ ಕುರಿಯನ್ನೆ ಪಟ್ಟಣಕ್ಕೆ ಕರೆದುಕೊಂಡು ಬರುವಂತೆ ತಿಳಿಸುತ್ತಾರೆ ಎಂದು ಪಶು ವೈದ್ಯರ ವಿರುದ್ಧ ರೈತರು ಆಕ್ರೋಶ ವ್ಯಕ್ತಡಿಸಿದರು. ಜೊತೆಗೆ ಕುರಿಗಳ ಸಾವಿನಿಂದಾಗಿ ಉಂಟಾದ ನಷ್ಟವನ್ನು ಭರಿಸಲು ಪರಿಹಾರ ನೀಡಲು ಒತ್ತಾಯಿಸಿದರು. ಇದನ್ನೂ ಓದಿ: ಪುತ್ರನ ಮದುವೆ ಕಾರ್ಡ್ ಹಂಚಲು ಹೋದ ದಂಪತಿ ಮಸಣಕ್ಕೆ