ತುಮಕೂರು: ಜಿಲ್ಲೆಯಾ ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳು, ಕೊಲೆ ಸುಲಿಗೆಗಳು ಮಿತಿ ಮೀರಿದ್ದು ಪೊಲೀಸರು ಕತ್ತೆ ಕಾಯ್ತಾ ಇದ್ದಾರಾ ಎಂದು ಗ್ರಾಮಾಂತರ ಶಾಸಕ ಗೌರಿ ಶಂಕರ್ ಖಾಕಿಗಳ ವಿರುದ್ಧ ಹರಿಹಾಯ್ದಿದ್ದಾರೆ.
ಎಸ್ಪಿ, ಎಎಸ್ಪಿ, ಡಿವೈಎಸ್ಪಿ ಹೊರತುಪಡಿಸಿದರೆ ಇನ್ಯಾವ ಪೊಲೀಸ್ ಅಧಿಕಾರಿಗಳು ಕೂಡ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಇತ್ತೀಚೆಗೆ ಬೆಳಗುಂಬದ ಬಸ್ ನಿಲ್ದಾಣದಲ್ಲಿ ನಡೆದಿದ್ದ ರೌಡಿಶೀಟರ್ ಕೊಲೆ ಹಿಂದೆ ರಾಜಕೀಯ ವ್ಯಕ್ತಿಗಳು ಇದ್ದಾರೆ. ಅಂಥವರನ್ನು ಹಿಡಿಯುವ ಬದಲು ಟೆಂಪರ್ ರಾಜಾ ಎಂಬವರ ಮೇಲೆ ಪೊಲೀಸರು ನಕಲಿ ಫೈರಿಂಗ್ ನಡೆಸಿದ್ದಾರೆ ಎಂದು ಗೌರಿಶಂಕರ್ ಆರೋಪಿಸಿದ್ದಾರೆ.
Advertisement
Advertisement
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಮಟ್ಕಾ, ಇಸ್ಪೀಟ್ ದಂಧೆ ಮಿತಿಮೀರಿದ್ದು, ಇವುಗಳೆಲ್ಲ ಪೊಲೀಸ್ ನೆರಳಿನಲ್ಲೇ ನಡೆಯುತ್ತಿದೆ. ತಾನು ಶಾಸಕನಾದರೂ ಏನೂ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ. ಮಾಜಿ ಶಾಸಕರೊಬ್ಬರು ಪೊಲೀಸ್ ಅಧಿಕಾರಿಗಳ ವರ್ಗಾವಣೆ ದಂಧೆ ನಡೆಸುತ್ತಿದ್ದು ಡಿವೈಎಸ್ಪಿಗಿಂತ ಕೆಳಹಂತದ ಪೊಲೀಸ್ ಅಧಿಕಾರಿಗಳು ಆ ಮಾಜಿ ಶಾಸಕನ ಕೈಗೊಂಬೆಯಾಗಿದ್ದಾರೆ ಎಂದು ಹೆಸರು ಹೇಳದೆ ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡರ ವಿರುದ್ಧ ಗುಡುಗಿದ್ದಾರೆ.