ತುಮಕೂರು: ಇತ್ತೀಚೆಗೆ ತುಮಕೂರು ನಗರದ ದಂಪತಿ ಸಾಕಿದ್ದ ಮುದ್ದಿನ ಗಿಳಿಯೊಂದು ಕಾಣೆಯಾಗಿದ್ದ ಸುದ್ದಿ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಆ ದಂಪತಿ ಗಿಳಿಗಳ ವಿಷಯದಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಎರಡು ಗಿಳಿಗಳನ್ನು ಗುಜರಾತ್‍ನ ಸರ್ದಾರ್ ಪಟೇಲ್ ಝುವಾಲಜಿಕಲ್ ಪಾರ್ಕ್‍ನಲ್ಲಿ ಬಿಟ್ಟು ಬಂದಿದ್ದಾರೆ.
ತುಮಕೂರು ನಗರದ ಜಯನಗರದ ದಂಪತಿ ಅರ್ಜುನ್ ಹಾಗೂ ರಂಜನಾ ಅವರ ಮುದ್ದಿನ ಗಿಳಿಯಲ್ಲಿ ಒಂದಾದ ರುಸ್ತುಮಾ ಈ ಹಿಂದೆ ಅಚಾನಕ್ಕಾಗಿ ಹಾರಿ ಹೋಗಿತ್ತು. ಆಗ ಗಿಳಿಯನ್ನು ಹುಡುಕಿಕೊಟ್ಟವರಿಗೆ ಬರೋಬ್ಬರಿ 85 ಸಾವಿರ ರೂ. ಬಹುಮಾನವನ್ನೂ ಕೊಟ್ಟಿದ್ದರು. ಆದರೆ ಇದೀಗ ಅರ್ಜುನ್-ರಂಜನಾ ದಂಪತಿಯೇ ಸ್ವತಃ ಗಿಳಿಗಳನ್ನು ಹಾರಿ ಬಿಟ್ಟಿದ್ದಾರೆ. ಇದನ್ನೂ ಓದಿ: ಸುತ್ತೂರು ಮಠ ಧರ್ಮನಿಷ್ಠೆ, ಸಕರಾತ್ಮಕ ಶಕ್ತಿಗೆ ಪ್ರಸಿದ್ಧಿ: ರಾಜ್ಯಪಾಲ ಗೆಹ್ಲೋಟ್ ಶ್ಲಾಘನೆ
Advertisement
Advertisement
ಹಾಗಂತ ಬೇಕಾಬಿಟ್ಟಿಯಾಗಿ ತಮ್ಮ ಪ್ರೀತಿಯ ಗಿಳಿಯನ್ನು ಬೀದಿಪಾಲು ಮಾಡಿಲ್ಲ. ತಾವು ನೋಡಿಕೊಳ್ಳುವುದಕ್ಕಿಂತಲೂ ಅದು ಸುರಕ್ಷಿತವಾಗಿರಲಿ ಎಂದು ಸುರಕ್ಷಿತ ತಾಣಕ್ಕೆ ಇವರೇ ಬಿಟ್ಟು ಬಂದಿದ್ದಾರೆ. ತಮ್ಮ ಗಿಳಿಗಳನ್ನು ಗುಜರಾತ್‍ನ ಸರ್ದಾರ್ ಪಟೇಲ್ ಝುವಾಲಜಿಕಲ್ ಪಾರ್ಕ್‍ನಲ್ಲಿ ಬಿಟ್ಟಿದ್ದಾರೆ. ಮತ್ತೆ ಈ ಗಿಳಿಗಳು ಹಾರಿ ಹೋಗಿ ಇತರೆ ಪ್ರಾಣಿಗಳ ಆಹಾರ ಆಗುವುದಕ್ಕಿಂತ ಪಾರ್ಕ್‍ನಲ್ಲಿ ಸುರಕ್ಷಿತವಾಗಿರಲಿ ಎಂದು ಬಿಟ್ಟು ಬಂದಿದ್ದಾರೆ. ಈ ಗಿಳಿಗಳನ್ನು ಪಾರ್ಕ್‍ಗೆ ಬಿಟ್ಟು ಬರಲು 8 ದಿನಗಳ ಕಾಲ ಕಾರಿನಲ್ಲಿ ಜರ್ನಿ ಮಾಡಿದ್ದಾರೆ. ಇದನ್ನೂ ಓದಿ: ಕ್ಯಾನ್ಸರ್ ಇದೆ ಎಂದು ತಿಳಿದು ಇಡೀ ಫ್ಯಾಮಿಲಿ ಆತ್ಮಹತ್ಯೆಗೆ ಶರಣು