ತುಮಕೂರು: ಇಂದು ನಡೆದ ತುಮಕೂರು ಜಿ.ಪಂ. ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅಧಿಕಾರಿಗಳ ವಿರುದ್ಧ ಫುಲ್ ಗರಂ ಆಗಿದ್ದರು. ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಗೆ ಗೈರಾಗಿ, ಸಹಾಯಕ ಅಧಿಕಾರಿಗಳನ್ನು ಕಳುಹಿಸಿದಕ್ಕೆ ಸಿಡಿಮಿಡಿಗೊಂಡಿದ್ದಾರೆ.
ಸಭೆಗೆ ಹಾಜರಾಗಿದ್ದ ಸಹಾಯಕ ಅಧಿಕಾರಿಗಳನ್ನು, ಸಭೆಯಿಂದ ಜಾಗ ಖಾಲಿ ಮಾಡಿ ಎಂದು ವಾರ್ನ್ ಮಾಡಿದ್ದಾರೆ. ಕಾರ್ಮಿಕ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ ಇಲ್ಲದೇ ಸಹಾಯಕ ಅಧಿಕಾರಿ ಬಂದಿದ್ದಕ್ಕೆ ಕೋಪಗೊಂಡ ಮಾಧುಸ್ವಾಮಿ, ತಕ್ಷಣ ನೀವ್ಯಾರು ಎಂದು ಪ್ರಶ್ನೆ ಕೇಳಿದ್ದಾರೆ.
Advertisement
Advertisement
ಸಚಿವರ ಪ್ರಶ್ನೆಗೆ ನಾನು ಅವರ ಅಸಿಸ್ಟೆಂಟ್ ಎಂದಾಗ ಯಾತಕ್ಕೆ ಇದ್ದೀರ ಇಲ್ಲಿ? ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಬಿಟ್ಟು ಯಾವುದೇ ಕಾರಣಕ್ಕೂ ಅಸಿಸ್ಟೆಂಟ್‍ಗಳನ್ನು ಕಳುಹಿಸಬಾರದು ಎಂದು ನಾನು ಈ ಮುಂಚೆಯೇ ಕ್ಲಿಯರ್ ಆಗಿ ಡಿಸಿ ಅವರ ಮೀಟಿಂಗ್ ಕರೆದು ಹೇಳಿದ್ದೇನೆ. ಜಿಲ್ಲಾ ಮಟ್ಟದ ಆಫೀಸರ್ಸ್ ಮಾಹಿತಿ ನೀಡಬೇಕು. ನೀಡಿ ಇಲ್ಲಾ ಅಂದರೆ ಆಚೆ ಹೋಗಿ. ಕತ್ತೆ ಕಾಯೋಕಿದ್ದೀರ ಜಿಲ್ಲಾಮಟ್ಟದ ಅಧಿಕಾರಿಗಳು ಎಂದು ಚಳಿ ಬಿಡಿಸಿದ್ದಾರೆ.
Advertisement
ಇದೇ ವೇಳೆ ಮನವಿ ಸಲ್ಲಿಸಲು ಬಂದಿದ್ದ ಮಾಜಿ ಜೆಡಿಎಸ್ ಶಾಸಕ ನಿಂಗಪ್ಪ ಅವರನ್ನು ಲೇವಡಿ ಮಾಡಿದ ಮಾಧುಸ್ವಾಮಿ, ನಿಂಗಪ್ಪ ತಮ್ಮ ನಾಲ್ಕು ಮನವಿ ಇದೆ ಎಂದಾಗ ಒಂದು ದೆಹಲಿ ಬೇಕು, ಇನ್ನೂಂದು ಏರುಪೋರ್ಟ್ ಬೇಕು, ಇನ್ನೂಂದು ವಿಧಾನ ಸೌಧ ನಿಮಗೆ ಬಿಟ್ಟುಕೊಡ ಬೇಕಾ ಎಂದು ಹೇಳಿದರು. ಇದಕ್ಕೆ ಕೋಪಗೊಂಡ ಜೆಡಿಎಸ್ ಕಾರ್ಯಕರ್ತರು ವಿಧಾನಸೌಧ ಕೇಳಲು ನಾವು ಇಲ್ಲಿಗೆ ಬಂದಿಲ್ಲ, ನೀರು ಕೊಡಿ ಸಾಕು ಎಂದು ತಿರುಗೇಟು ಕೊಟ್ಟರು.
Advertisement
ಜೆಡಿಎಸ್ ಕಾರ್ಯಕರ್ತರು ಮಾತಿಗೆ ಉತ್ತರಿಸಿದ ಮಾಧುಸ್ವಾಮಿ, ನಾನು ನಿಂಗಪ್ಪ ಬಹಳ ಕಾಲದ ಸ್ನೇಹಿತರು ಆ ಸಲುಗೆಯಿಂದ ಹಾಗೇ ಅಂದೆ ಎಂದು ಹೇಳಿದರು. ಇದಕ್ಕೆ ಜೆಡಿಎಸ್ ಕಾರ್ಯಕರ್ತರು ನಮಗೆ ಯಾವುದು ಬೇಡ ನೀರು ಬೇಕು ಎಂದು ಪ್ರತಿಭಟನೆ ಮಾಡಿದರು. ಗ್ರಾಮಾಂತರ ಪ್ರದೇಶಕ್ಕೆ ಹೇಮಾವತಿ ನೀರು ಹರಿಸುಂತೆ ಮನವಿ ಸಲ್ಲಿಸಿದರು.