Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Karnataka

ತುಮಕೂರು ಅಖಾಡ ಹೇಗಿದೆ? ಹೆಚ್‍ಡಿಡಿ, ಬಸವರಾಜ್ ಪ್ಲಸ್ ಮೈನಸ್ ಏನು?

Public TV
Last updated: April 14, 2019 7:32 pm
Public TV
Share
3 Min Read
tumakuru
SHARE

ಕಲ್ಪತರುನಾಡು ತುಮಕೂರಿನಲ್ಲಿ ಈಗ ಜಿದ್ದಾಜಿದ್ದಿನ ಅಖಾಡ ನಿರ್ಮಾಣವಾಗಿದೆ. ರಾಜಕಾರಣದ ಕಡೆಯ ಮಗ್ಗುಲಿಗೆ ಬಂದು ನಿಂತಿರುವ ದೇವೇಗೌಡರು ಮೊಮ್ಮಗ ಪ್ರಜ್ವಲ್‍ಗಾಗಿ ತುಮಕೂರಿಗೆ ವಲಸೆ ಬಂದಿದ್ದಾರೆ. ನಾಲ್ಕು ಬಾರಿ ಸಂಸದರಾಗಿದ್ದ ಜಿ.ಎಸ್.ಬಸವರಾಜು ಅವರಿಗೆ ಟಿಕೆಟ್ ನೀಡುವ ಮೂಲಕ ಈ ಕ್ಷೇತ್ರ ಸಾಕಷ್ಟು ಕುತೂಹಲ ಮೂಡಿಸಿದೆ.

Contents
ಹೆಚ್.ಡಿ.ದೇವೇಗೌಡಜಿ.ಎಸ್.ಬಸವರಾಜು (ಬಿಜೆಪಿ)

tumakuru 1

ತುಮಕೂರು ಲೋಕಸಭಾ ಕ್ಷೇತ್ರ 1952 ರಿಂದ ಒಂದು ಉಪಚುನಾವಣೆ ಸೇರಿದಂತೆ 17 ಸಾರ್ವತ್ರಿಕ ಚುನಾವಣೆ ಕಂಡಿದೆ. ಇಲ್ಲಿ ಕಾಂಗ್ರೆಸ್ 11 ಬಾರಿ, ಬಿಜೆಪಿ 4 ಬಾರಿ, ಪ್ರಜಾ ಸೋಶಿಯಲಿಸ್ಟ್ ಹಾಗೂ ಜನತಾದಳ ತಲಾ ಒಂದು ಬಾರಿ ಗೆಲುವು ಸಾಧಿಸಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಜಿ.ಎಸ್.ಬಸವರಾಜು ವಿರುದ್ಧ ಹಾಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಗೆಲುವು ಸಾಧಿಸಿದ್ದರು. ಈಗ ಮೈತ್ರಿಯ ಧರ್ಮದ ಟಿಕೆಟ್ ಹಂಚಿಕೆಯಲ್ಲಿ ಬಿಟ್ಟು ಕೊಟ್ಟಿರುವ ಏಕೈಕ ಹಾಲಿ ಸಂಸದರ ಕ್ಷೇತ್ರ ತುಮಕೂರು. ಸಿದ್ದರಾಮಯ್ಯ ಆಪ್ತ ಕೆ.ಎನ್.ರಾಜಣ್ಣ, ಸಂಸದ ಮುದ್ದಹನುಮೇಗೌಡ ಇಬ್ಬರು ಬಂಡಾಯ ಅಭ್ಯಥಿಯಾಗಿ ನಾಮಪತ್ರ ಸಲ್ಲಿಸಿ ಕೊನೆ ಕ್ಷಣದಲ್ಲಿ ವಾಪಸ್ ಪಡೆದಿದ್ದರೂ, ದೇವೇಗೌಡರಿಗೆ ಕಂಟಕ ತಪ್ಪಿದ್ದಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ತುಮಕೂರು ಕ್ಷೇತ್ರದಲ್ಲಿ ಹೆಚ್ಚು ಕಡಿಮೆ ಲಿಂಗಾಯತ ಹಾಗೂ ಒಕ್ಕಲಿಗ ಮತದಾರರೂ ಸಮ ಪ್ರಮಾಣದಲ್ಲಿದ್ದರೂ ಅಹಿಂದ ಮತಗಳೇ ನಿರ್ಣಾಯಕವಾಗಲಿದೆ ಎನ್ನುವುದೇ ಸ್ಪಷ್ಟ.

tumakuru 2

ತುಮಕೂರು ಒಟ್ಟು ಮತದಾರರು: ತುಮಕೂರು ಲೋಕಸಭಾ ಕ್ಷೇತ್ರ 15,94,703 ಮತದಾರರನ್ನು ಹೊಂದಿದೆ. ಇವುಗಳಲ್ಲಿ ಮಹಿಳಾ ಮತದಾರರು 7,97,191 ಮತ್ತು ಪುರುಷ ಮತದಾರರು 7,97,512ರಷ್ಟಿದ್ದಾರೆ. ಜಾತಿವಾರು ನೋಡೋದಾದ್ರೆ ಒಕ್ಕಲಿಗ ಸಮುದಾಯ 3.20 ಲಕ್ಷ, ಲಿಂಗಾಯತ ಸಮುದಾಯ 3.5 ಲಕ್ಷ, ಎಸ್‍ಸಿ ಸಮುದಾಯ 2.80 ಲಕ್ಷ, ಮುಸ್ಲಿಂ ಸಮುದಾಯ 1.8 ಲಕ್ಷ, ಕುರುಬ ಸಮುದಾಯ 1.70 ಲಕ್ಷ, ಗೊಲ್ಲ ಸಮುದಾಯ 90 ಸಾವಿರ, ತಿಗಳ ಸಮುದಾಯ 80 ಸಾವಿರ, ಇತರೇ ಸಮುದಾಯ 1.30 ಲಕ್ಷರಷ್ಟು ಮತದಾರರನ್ನು ತುಮಕೂರು ಅಖಾಡ ಹೊಂದಿದೆ.

ತುಮಕೂರು ಕ್ಷೇತ್ರ ಕದನ: ತುಮಕೂರು ಕ್ಷೇತ್ರ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಬಿಜೆಪಿ 4, ಜೆಡಿಎಸ್ 3, ಕಾಂಗ್ರೆಸ್ 1 ಕ್ಷೇತ್ರಗಳಲ್ಲಿ ಶಾಸಕರನ್ನು ಹೊಂದಿವೆ. ತುಮಕೂರು ನಗರ- ಜ್ಯೋತಿ ಗಣೇಶ್ (ಬಿಜೆಪಿ), ತುರುವೇಕೆರೆ – ಮಸಾಲೆ ಜಯರಾಮ (ಬಿಜೆಪಿ), ತಿಪಟೂರು- ಬಿ.ಸಿ.ನಾಗೇಶ್ (ಬಿಜೆಪಿ), ಚಿಕ್ಕನಾಯಕನಹಳ್ಳಿ – ಜೆ.ಸಿ.ಮಾಧುಸ್ವಾಮಿ (ಬಿಜೆಪಿ), ತುಮಕೂರು ಗ್ರಾಮಾಂತರ- ಗೌರಿಶಂಕರ್ (ಜೆಡಿಎಸ್), ಗುಬ್ಬಿ- ಎಸ್.ಆರ್.ಶ್ರೀನಿವಾಸ್ (ಜೆಡಿಎಸ್), ಮಧುಗಿರಿ – ವೀರಭದ್ರಯ್ಯ (ಜೆಡಿಎಸ್) ಮತ್ತು ಕೊರಟಗೆರೆ – ಜಿ.ಪರಮೇಶ್ವರ್ (ಕಾಂಗ್ರೆಸ್)

tumakuru 7

2014ರ ಫಲಿತಾಂಶ: 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನ ಮುದ್ದುಹನುಮೇಗೌಡರು 74,041 (06.68%) ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ವಿರುದ್ಧ ಗೆಲುವು ಸಾಧಿಸಿದ್ದರು. ಎಸ್.ಪಿ.ಮುದ್ದಹನುಮೇಗೌಡ – 4,29,868, ಬಿಜೆಪಿಯ ಜಿ.ಎಸ್.ಬಸವರಾಜು-3,55,827 ಮತ್ತು ಜೆಡಿಎಸ್‍ನ ಎ.ಕೃಷ್ಣಪ್ಪ-2,58,683 ಮತಗಳನ್ನು ಪಡೆದಿದ್ದರು.

2019ರ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
1. ಹೆಚ್.ಡಿ.ದೇವೇಗೌಡ- ಜೆಡಿಎಸ್
2. ಜಿ.ಎಸ್.ಬಸವರಾಜು- ಬಿಜೆಪಿ

ಹೆಚ್.ಡಿ.ದೇವೇಗೌಡ

ಪ್ಲಸ್ ಪಾಯಿಂಟ್: ಕಾಂಗ್ರೆಸ್, ಜೆಡಿಎಸ್ ಚುನಾವಣಾ ಮೈತ್ರಿ ಮಾಡಿಕೊಂಡಿದ್ದರಿಂದ ಎರಡು ಪಕ್ಷದ ಮತಗಳ ಕ್ರೋಢಿಕರಣವಾಗುವ ಸಾಧ್ಯತೆಗಳಿವೆ. ಇತ್ತ ಪುತ್ರ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿರೋದು ಮತ್ತೊಂದು ಪ್ಲಸ್ ಪಾಯಿಂಟ್. ಒಕ್ಕಲಿಗರ ಪ್ರಶ್ನಾತೀತ ನಾಯಕ ಎಂದು ಕರೆಸಿಕೊಳ್ಳುವ ದೇವೇಗೌಡರಿಗೆ ಒಕ್ಕಲಿಗ ಮತಗಳು ಹೆಚ್ಚಾಗಿರೋದು ಲಾಭದಾಯಕವಾಗಿದೆ. ಒಕ್ಕಲಿಗರ ಜೊತೆಗೆ ಮುಸ್ಲಿಂ, ದಲಿತ, ಹಿಂದುಳಿದವರು ಕೈ ಹಿಡಿದ್ರೆ ಗೆಲುವು ಮತ್ತಷ್ಟು ಸರಳವಾಗಲಿದೆ. ಕ್ಷೇತ್ರದಲ್ಲಿ ದೋಸ್ತಿ ಮತ್ತು ಬಿಜೆಪಿ ಶಾಸಕರ ಬಲ ಸಮವಾಗಿದ್ದು, ಸೋಲಿನ ಭಯವಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

tumakuru 3

ಮೈನಸ್ ಪಾಯಿಂಟ್: ಜೆಡಿಎಸ್ ಕುಟುಂಬ ರಾಜಕಾರಣಕ್ಕೆ ಸೀಮಿತವಾಗಿರುವ ಆರೋಪದ ಜೊತೆಗೆ ಇಬ್ಬರು ಮೊಮ್ಮಕ್ಕಳು ಕೂಡ ಸ್ಪರ್ಧೆ ಮಾಡಿರುವುದು ಹೊಡೆತ ನೀಡುತ್ತೆ ಎನ್ನಲಾಗುತ್ತಿದೆ. ಹೇಮಾವತಿ ನೀರು ತುಮಕೂರಿಗೆ ಹರಿಸಲು ಗೌಡರ ಅಡ್ಡಿ ಆರೋಪಗಳು ಕೇಳಿ ಬಂದಿವೆ. ಕ್ಷೇತ್ರದ ಹೊರಗಿನವರು ಅನ್ನೋದು, ಕಾಂಗ್ರೆಸ್‍ನ ಒಳ ಅಸಮಾಧಾನದ ಕಿಡಿ ಕಾಣಿಸಿಕೊಂಡಿದ್ದು, ಗೊಂದಲದ ನಡುವೆ ಕಡೇ ಕ್ಷಣದಲ್ಲಿ ಕ್ಷೇತ್ರವನ್ನು ದೇವೇಗೌಡರು ಆಯ್ಕೆ ಮಾಡಿಕೊಂಡಿದ್ದಾರೆ. ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮೇಲಗೈ ಸಾಧಿಸಿರೋದು ಮತ್ತೊಂದು ಮೈನಸ್ ಪಾಯಿಂಟ್ ಆಗಿದ್ದರೆ, ಮುದ್ದಹನುಮೇಗೌಡರಿಗೆ ಟಿಕೆಟ್ ಕೈ ತಪ್ಪಿಸಿರುವುದು ಸ್ಥಳೀಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.

ಜಿ.ಎಸ್.ಬಸವರಾಜು (ಬಿಜೆಪಿ)

ಪ್ಲಸ್ ಪಾಯಿಂಟ್: ಕ್ಷೇತ್ರದಲ್ಲಿ ಬಿಜೆಪಿ ಶಾಸಕರ ಸಂಖ್ಯೆ ಹೆಚ್ಚಾಗಿದ್ದು, ದೋಸ್ತಿಗಳಲ್ಲಿನ ಒಳ ಜಗಳ, ಕ್ಷೇತ್ರ ಹಂಚಿಕೆಯಲ್ಲಿನ ಅಸಮಾಧಾನದ ಲಾಭ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಅವರಿಗೆ ಸಿಗುವ ಲಕ್ಷಣಗಳಿವೆ. ಪ್ರಧಾನಿ ನರೇಂದ್ರ ಮೋದಿ ಅಲೆ ಜೊತೆಗೆ ಲಿಂಗಾಯತ ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆ ಬಸವರಾಜು ಅವರ ಗೆಲುವಿಗೆ ಸಹಕಾರಿ ಆಗಬಹುದು.

tumakuru 5

ಮೈನಸ್ ಪಾಯಿಂಟ್: ತುಮಕೂರು ಗ್ರಾಮಾಂತರ ಭಾಗದಲ್ಲಿ ಜೆಡಿಎಸ್ ಪ್ರಬಲವಾಗಿದ್ದು, ಮೈತ್ರಿಯಿಂದಾಗಿ ಅಹಿಂದ ಮತಗಳು ಒಟ್ಟಾಗುವ ಆತಂಕ ಜಿ.ಎಸ್.ಬಸವರಾಜರಲ್ಲಿ ಮನೆ ಮಾಡಿದೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದು, ಮತಗಳ ವಿಭಜೀಕರಣ ಅಸಾಧ್ಯ ಎಂದು ಹೇಳಲಾಗುತ್ತಿದೆ. ಬಿಜೆಪಿಯಲ್ಲಿನ ಅಸಮಾಧಾನ, ನಾಯಕರ ನಡುವೆ ಶೀತಲ ಸಮರಗಳಿಂದ ಒಳ ಹೊಡೆತ ಇದೆ ಎಂದು ಹೇಳಲಾಗುತ್ತಿದೆ.

TAGGED:bjpcongressGS BasavarajuHD DevegowdajdskarnatakaLok Sabha Election 2019Public TVtumakuruಕರ್ನಾಟಕ ಲೋಕಸಭಾ ಚುನಾವಣೆ 2019ಕಾಂಗ್ರೆಸ್ಜಿ.ಎಸ್.ಬಸವರಾಜುಜೆಡಿಎಸ್ತುಮಕೂರುಪಬ್ಲಿಕ್ ಟಿವಿಬಿಜೆಪಿಹೆಚ್.ಡಿ.ದೇವೇಗೌಡ
Share This Article
Facebook Whatsapp Whatsapp Telegram

Cinema Updates

Chethan and Kamal hassan
ಕಮಲ್ ಹಾಸನ್ ಸಣ್ಣತನದ ಹೇಳಿಕೆ ನೀಡಿ, ಕನ್ನಡಿಗರಿಗೆ ಕ್ಷಮೆ ಕೇಳದೇ ಮೊಂಡುತನ: ಚೇತನ್
14 minutes ago
Kamal Haasan Natural Star nani
ಕಮಲ್ ಹಾಸನ್ `ಕನ್ನಡ’ ವಿವಾದ – ಸಾಕು ಸರ್ ಎಂದ ನ್ಯಾಚುರಲ್ ಸ್ಟಾರ್
2 hours ago
Yashs first action sequence look from Ramayana revealed
ರಾಮಾಯಣ ಸಿನಿಮಾದ ಯಶ್ ಪಾತ್ರದ ಮೊದಲ ಆಕ್ಷನ್ ಸೀಕ್ವೆನ್ಸ್ ಲುಕ್ ರಿವಿಲ್
2 hours ago
Kamal Haasan 2
ಕಮಲ್ ಹಾಸನ್ ಬ್ಯಾನರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ
6 hours ago

You Might Also Like

Okalipuram Crime
Bengaluru City

ಕಾರಿನ ಮೇಲೆ ಮಳೆ ನೀರು ಹಾರಿಸಿದ್ದಕ್ಕೆ ಹಲ್ಲೆ – ಬೆರಳು ಕಚ್ಚಿ ವಿಕೃತಿ ಮೆರೆದ ಮಾಲೀಕ

Public TV
By Public TV
4 minutes ago
N Ravikumar
Bengaluru City

ಕಲಬುರಗಿ ಡಿಸಿ ವಿರುದ್ಧ ಅವಹೇಳನಕಾರಿ ಹೇಳಿಕೆ – ಬಿಜೆಪಿ ಎಂಎಲ್‌ಸಿ ರವಿಕುಮಾರ್‌ಗೆ ಬಂಧನ ಭೀತಿ!

Public TV
By Public TV
14 minutes ago
DK Shivakumar 2 2
Bengaluru City

ಸಿಎಂ Vs ಡಿಸಿಎಂ ಮಧ್ಯೆ ವರ್ಗಾವಣೆ ಸಂರ್ಘರ್ಷ – ನಿಜಕ್ಕೂ ಆಗಿದ್ದೇನು? ಡಿಕೆಶಿ ಆಕ್ಷೇಪ ಏಕೆ?

Public TV
By Public TV
33 minutes ago
Bengaluru Lady Kirik
Bengaluru City

ನನ್ನಿಷ್ಟ ನನ್ನ ಗಾಡಿ, ದಂಡ ಕಟ್ಟಲ್ಲ, ನೀವ್ಯಾರು ಕೇಳೋಕೆ – ಟ್ರಾಫಿಕ್ ಪೊಲೀಸರೊಂದಿಗೆ ಮಹಿಳೆಯ ಹೆಲ್ಮೆಟ್ ಕಿರಿಕ್

Public TV
By Public TV
51 minutes ago
Shivaraj Tangadagi
Bengaluru City

ಕ್ಷಮೆ ಕೇಳದಿದ್ದರೆ ಕರ್ನಾಟಕದಲ್ಲಿ ಕಮಲ್ ಹಾಸನ್ ಚಿತ್ರಗಳನ್ನ ನಿರ್ಬಂಧಿಸಿ: ಶಿವರಾಜ್ ತಂಗಡಗಿ ಪತ್ರ

Public TV
By Public TV
54 minutes ago
Marriage
Crime

ಮದ್ವೆಗೆ ಹುಡ್ಗಿ ನೋಡಲು ಹೋಗಿದ್ದ ಯುವಕ – ಇಷ್ಟವಿಲ್ಲ ಅಂದಿದ್ದಕ್ಕೆ ಹುಡುಗಿ ತಲೆಗೆ ಗುಂಡಿಟ್ಟ..!

Public TV
By Public TV
56 minutes ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?