ತುಮಕೂರು: ತೊಲಗಿತು ತೊಲಗಿತು ಝೀರೋ ಟ್ರಾಫಿಕ್ ತೊಲಗಿತು ಎಂದು ಘೋಷಣೆ ಕೂಗುವ ಮೂಲಕ ಕೆ.ಎನ್ ರಾಜಣ್ಣ ಅವರ ಬೆಂಬಲಿಗರು ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಗೆ ವ್ಯಂಗ್ಯವಾಡಿದ್ದಾರೆ.
ಇಂದು ನಗರದ ಟೌನ್ ಹಾಲ್ ವೃತ್ತದಲ್ಲಿ ಕೆ.ಎನ್.ರಾಜಣ್ಣ ಬೆಂಬಲಿಗರು ಝೀರೋ ಟ್ರಾಫಿಕ್ ತೊಲಗಿತು. ತುಮಕೂರು ಜನರಿಗೆ ನೆಮ್ಮದಿ ಬಂತು ಎಂದು ಜಿ.ಪರಮೇಶ್ವರ್ ವಿರುದ್ಧ ಘೋಷಣೆ ಕೂಗಿದ್ದಾರೆ. ಜಿ. ಪರಮೇಶ್ವರ್ ಉಪಮುಖ್ಯಮಂತ್ರಿ ಆಗಿದ್ದಾಗ ಝೀರೋ ಟ್ರಾಫಿಕ್‍ನಲ್ಲಿ ಓಡಾಡುತ್ತಿದ್ದರು. ಇದರಿಂದ ತುಮಕೂರು ಜನತೆ ತೊಂದರೆ ಅನುಭವಿಸಿದ್ದರು. ಈಗ ಮೈತ್ರಿ ಸರ್ಕಾರ ಪತನವಾಗಿ ಮಂತ್ರಿಗಿರಿ ಹೋಗಿದ್ದರಿಂದ ತುಮಕೂರು ಜನರಿಗೆ ಝೀರೋ ಟ್ರಾಫಿಕ್‍ನಿಂದ ಮುಕ್ತಿ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಈ ವಿಚಾರಕ್ಕೆ ಪರಮೇಶ್ವರ್ ವಿರುದ್ಧ ಕಿಡಿಕಾರಿದ್ದ ಕೆ.ಎನ್ ರಾಜಣ್ಣ, ಪರಮೇಶ್ವರ್ ಅವರಿಗೆ ಡಿಸಿಎಂ ಸ್ಥಾನ ಹೋಗಿರುವುದರಿಂದ ತುಮಕೂರಿನಲ್ಲಿ ಟ್ರಾಫಿಕ್ ಸಮಸ್ಯೆ ತಪ್ಪಿದೆ. ಪದೇ ಪದೇ ಪರಮೇಶ್ವರ್ ತುಮಕೂರಿಗೆ ಬರುತ್ತಿದ್ದರಿಂದ ಟ್ರಾಫಿಕ್ ಸಮಸ್ಯೆ ಇತ್ತು, ಸದ್ಯ ಅದು ಇಲ್ಲ ಎಂದು ಹೇಳಿದ್ದರು.