ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಆರ್ಭಟ ಮುಂದುವರಿದಿದ್ದು, ಮತ್ತೆ ಐವರು ಕೇರಳ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ತಗುಲಿದೆ.
ಕಳೆದ ಮಂಗಳವಾರ 15 ಮಂದಿಗೆ ಸೋಂಕು ದೃಢವಾಗಿತ್ತು. ಇದೀಗ ಸೋಂಕಿತ ಕೇರಳ ವಿದ್ಯಾರ್ಥಿಗಳ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ವರದರಾಜ್ ನರ್ಸಿಂಗ್ ಕಾಲೇಜ್‌ನಲ್ಲಿ ಮಂಗಳವಾರ 7 ಮಂದಿಗೆ ಸೋಂಕು ಪತ್ತೆಯಾಗಿತ್ತು. ಇದೀಗ ಮತ್ತೆ ಐವರು ಕೇರಳದ ವಿದ್ಯಾರ್ಥಿಗಳಿಗೆ ಸೋಂಕು ದೃಢವಾಗಿದೆ.
Advertisement
Advertisement
ವರದರಾಜ್ ನರ್ಸಿಂಗ್ ಕಾಲೇಜ್ ಸೋಂಕಿತ ವಿದ್ಯಾರ್ಥಿಗಳ ಪ್ರಾಥಮಿಕ ಸಂಪರ್ಕದಲ್ಲಿ ಐವರು ವಿದ್ಯಾರ್ಥಿಗಳಿದ್ದರು. ಈ ಹಿನ್ನೆಲೆಯಲ್ಲಿ ವರದರಾಜ್ ಕಾಲೇಜ್ ವಿದ್ಯಾರ್ಥಿಗಳಲ್ಲಿ 90 ಮಂದಿಗೆ ಪರೀಕ್ಷೆ ನಡೆಸಲಾಗಿತ್ತು. ಒಟ್ಟಾರೆ ಜಿಲ್ಲೆಯಲ್ಲಿ 20 ಮಂದಿ ಕೇರಳ ವಿದ್ಯಾರ್ಥಿಗಳಿಗೆ ಕೊರೊನಾ ದೃಢವಾಗಿದೆ.
Advertisement
Advertisement
ಕಳೆದ ಮಂಗಳವಾರ ಸಿದ್ದಗಂಗಾ ನರ್ಸಿಂಗ್ ಕಾಲೇಜಿನಲ್ಲಿ 8 ವಿದ್ಯಾರ್ಥಿಗಳಿಗೆ ಹಾಗೂ ವರದರಾಜ್ ನರ್ಸಿಂಗ್ ಕಾಲೇಜಿನಲ್ಲಿ 7 ಜನರಿಗೆ ಸೋಂಕು ದೃಢವಾಗಿತ್ತು. ಈಗ ವರದರಾಜ್ ಕಾಲೇಜಿನಲ್ಲಿ ಮತ್ತೆ 5 ವಿದ್ಯಾರ್ಥಿಗಳಿಗೆ ಸೋಂಕು ತಗಲಿರುವುದು ವರದಿಯಾಗಿದೆ. ಇದನ್ನೂ ಓದಿ: ಕೇರಳದಿಂದ ಬಂದ 15 ನರ್ಸಿಂಗ್ ವಿದ್ಯಾರ್ಥಿಗಳಿಗೆ ಕ್ವಾರಂಟೈನ್
ವರದರಾಜ್ ಕಾಲೇಜಿನಲ್ಲಿ ಒಟ್ಟು 12 ವಿದ್ಯಾರ್ಥಿಗಳಿಗೆ ಹಾಗೂ ಸಿದ್ದಗಂಗಾ ಕಾಲೇಜಿನಲ್ಲಿ 8 ಜನರಿಗೆ ಸೋಂಕು ತಗುಲಿದ್ದು, ಜಿಲ್ಲೆಯಲ್ಲಿ ಒಟ್ಟಾರೆಯಾಗಿ 20 ಜನ ಕೇರಳ ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಇದನ್ನೂ ಓದಿ: ಕರ್ತವ್ಯಲೋಪ – ಮೂವರು ಕಾನ್ಸ್ ಟೇಬಲ್‌ಗಳು ಅಮಾನತು